ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ, ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ, ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ, ಇಂತಿವರು ದಂಪತಿ ಸಹಜವಾಗಿ ಯುಗಜುಗಂಗಳ ಜೋಗೈಸುತ್ತಿದ್ದರು. ಬ್ರಹ್ಮಂಗೆ ಸರಸ್ವತಿಯೆಂದಾರು ! ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು ! ರುದ್ರಂಗೆ ಉಮಾದೇವಿಯೆಂದಾರು ! ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ, ರುದ್ರ ಉಭಯಜ್ಞಾನವಾಗಿ, ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ, ಗುಮ್ಮಟನೆಂಬ ನಾಮವ ತಾಳಿ, ಅಗಮ್ಯೇಶ್ವರಲಿಂಗ ಗುಹೇಶ್ವರನಾದ.
--------------
ಮನುಮುನಿ ಗುಮ್ಮಟದೇವ
ಯುಗಜುಗಂಗಳ ಅಳಿವು ಉಳಿವನರಿಯದೆ, ಹಗಲಿರುಳೆಂಬವ ನೆನಹಿನಲೂ ಅರಿಯದೆ, ಲಿಂಗದಲ್ಲಿ ಪರವಶವಾಗಿರ್ದ ಪರಮಪರಿಣಾಮಿಯನೇನೆಂದುಪಮಿಸುವೆನಯ್ಯಾ ? ಆಹಾ ! ಎನ್ನ ಮುಕ್ತಿಯ ಮುಕುರದ ಇರವ ನೋಡಾ. ಆಹಾ ! ಎನ್ನ ಸತ್ಯದಲ್ಲಿ ಸ್ವಾನುಭಾವದ ಕಳೆಯ ನೋಡಾ. ಆಹಾ ! ಅಷ್ಟತನುಗಳ ಪಂಗನಳಿದು, ನಿಬ್ಬೆರಗಾಗಿ ನಿಂದ ಚಿತ್ಸುಖಿಯ ನೋಡಾ. ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ, ಪರಮಪ್ರಸಾದಿ ಮರುಳಶಂಕರದೇವರ ನಿಲವ ಪ್ರಭು ಬಸವಣ್ಣನಿಂದ ಕಂಡು ಬದುಕಿದೆನು, ಬದುಕಿದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಪಂಚಭೂತಿಕದೊಳಗಾದ ಭೂತಭವಿಷ್ಯದ್ವರ್ತಮಾನ ಯುಗಜುಗಂಗಳ ಪ್ರಮಾಣು. ಮೂವರ ಮೊದಲಿಲ್ಲದಲ್ಲಿ, ಅಂಧರ ನಿರಂಧರ ಮಹಾ ಅಂಧಕಾರ ಸಂದಲ್ಲಿ, ನಿಮ್ಮ ಬೆಂಬಳಿಯನರಿದವರಾರು ? ಮನುವಿಂಗೆ ಮನು, ಘನಕ್ಕೆ ಘನ, ಬೆಳಗಿಂಗೆ ಬೆಳಗು, ಅವಿರಳಕ್ಕೆ ಅವಿರಳನಾಗಿ, ನಾಮಕ್ಕೆ ನಿರ್ನಾಮನಾಗಿ, ಅನಲ ಅನಿಲ ರವಿ ಶಶಿ ಕುಂಭ ಕುಂಭಿನಿ ನಭಯೋದ್ಯಮಾನ, ಅಘರಂಧರ ಅಕ್ಷಮಾಯ, ಕುಕ್ಷಿ ಕಕ್ಷ ಮಾಯ, ಮಹಿ ಪ್ರತ್ಯಂತರ, ವಿಸರ್ಜನ ನಿಷಿತ, ಭಸಿತೋನ್ಮಯ ಪುಂಜ. ಸಕಲೇಂದ್ರಿಯ ದೈಹ್ಯ, ಭಕ್ತಕೃಪಾವಲ್ಲಭ ಹೃತ್ಕಮಲನಿವಾಸಪರಿಪೂರಿತ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ಕೂಡು ಕೂಟಸ್ಥನಾಗಿರು.
--------------
ಮನುಮುನಿ ಗುಮ್ಮಟದೇವ
-->