ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ತಮಾ ಸಾಧಾರದೀಕ್ಷೆಯು ಸಬೀಜದೀಕ್ಷೆ ನಿರ್ಬೀಜದೀಕ್ಷೆ ಚಿನ್ಮಯ ದೀಕ್ಷೆ ಯೆಂದು ಮೂರು [ಪ್ರಕಾರದವು]. ಅವು ಯಥಾಕ್ರಮದಿಂದ ಕರ್ಮಕಾಂಡ ಭಕ್ತಿ ಕಾಂಡ ಜ್ಞಾನಕಾಂಡಗಳಲ್ಲಿಯ ದೀಕ್ಷೆ ಎನಿಸಿಕೊಂಬವು. ಇಂತೆಂದು ಕಾರಣಾಗಮ ಪೇಳೂದಯ್ಯಾ. ಅವರೊಳು ನಿರ್ಬೀಜದೀಕ್ಷೆ[ಯು ಸದ್ಯೋ ನಿರ್ವಾಣದೀಕ್ಷೆ ಎಂದು] ಚಿರಂ ನಿರ್ವಾಣದೀಕ್ಷೆ ಎಂದು ಎರಡು ಭೇದವು ಪೇಳಲ್ಪಡುತ್ತಿಹುದು. ಅವರೊಳು ಅತ್ಯಂತ ವಿರಕ್ತನಾದ ಶಿಷ್ಯ[ನು] ಅನೇಕ ಭವಂಗಳಲ್ಲಿ ಮಾಡಲ್ಪಟ್ಟ ಸಂಚಿತಕರ್ಮಂಗಳನು, ಮತ್ತಮಾ ಸಂಚಿತಕರ್ಮರಾಶಿಯೊಳಂ ಆಗ ತಾಳ್ದಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬು ಕರ್ಮಂಗಳನು, ಮುಂದೆ ಭವಾಂ ತರಂಗಳಲ್ಲಿ ಅನುಭವಿಸಲುಳ್ಳ ಆಗಾಮಿ ಕರ್ಮಂಗಳನು ಶೋದ್ಥಿಸಿ ಸದ್ಯೋನ್ಮುಕ್ತಿ ಯನೆಯಿಸುವ ದೀಕ್ಷೆ ಸದ್ಯೋನಿರ್ವಾಣದೀಕ್ಷೆ ಎನಿಸುವದಯ್ಯಾ, ಶಾಂತವೀರ ಪ್ರಭುವೇ.
--------------
ಶಾಂತವೀರೇಶ್ವರ
ಗುರು ಕರುಣಾಕರ ಪರಶಿವ ಪರಮ ಗುರು ಭವಹರ ಚಿನ್ಮಯ ಚಿದ್ರೂಪ ಗುರುವೆ ನಿರಂಜನ ನಿರ್ಮಳ ನಿಃಖಳಗುರುವೆ ಸುರತುರವೆ. ಪದ :ವಹ್ನಿ ವಿಪಿನ ತರು ಕಾಷ*ವ ಸುಡುವಂ ತೆನ್ನ ಭವದ ಗೊಂಡಾರಣ್ಯವ ನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿ ಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆ ಅನ್ಯಥಾ ಭಾಗ್ಯವ ಪಡೆದೆನು ಪರುಷದ ಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. | 1 | ಅಂಗಾತ್ಮನ ಪ್ರಾಣನ ಭವಿತನಗಳ ಹಿಂಗಿಸಿ ಅವಿರಳ ಪರಬ್ರಹ್ಮದ ಮಹಾ ಲಿಂಗವ ಕರ ಉರ ಶಿರ ಮನ ಭಾವದಲ್ಲಿ ಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷ ಯಂಗಳನೆಲ್ಲವ ತೊರಸಿ ಗಣಂಗಳ ಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. | 2 | ದುರ್ಲಿಖಿತಂಗಳ ತೊಡೆದು ವಿಭೂತಿ ಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯ ಸರಮಾಲೆಯ ತೊಡಕಲಿಸಿ ಷಡ ಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದ ಲಿರು ನೀ ಕಂದಾ' ಯೆಂದು ಅಭಯಕರ ಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. | 3 | ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್ ರಂಭೆ ಸ್ತನವನೂಡಿಯೆ ಸಲಹುವ ತೆರ ಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆ ಶಂಭು ಚರಣತೀರ್ಥಪ್ರಸಾದವ ನುಂಬಕಲಿಸಿಯೆ ಅನ್ಯಹಾರದ ಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. | 4 | ಮಾಡಕಲಿಸಿದ ಲಿಂಗದ ಸೇವೆಯ ಸದಾ ನೀಡಕಲಿಸಿದ ಜಂಗಮಕಮೃತಾನ್ನವ ಬೇಡಕಲಿಸಿ ಮುಕ್ತಿಯ ಫಲಪದವ ಗೂಡಕಲಿಸಿ ಶಿವಾನಂದದಾ ಲೀಲೆಯೊ ಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ | 5 |
--------------
ಹೇಮಗಲ್ಲ ಹಂಪ
ಮತ್ತಮಿಲ್ಲಿ ಕಕಾರಾದಿ ಕ್ಷಕಾರಾಂತವಾದ ಮೂವತ್ತೈದಕ್ಕರಂಗಳಲ್ಲಿ ಪ್ರತ್ಯೇಕವಾಗಿ ಒಂದೊಂದಕ್ಕೆ ಪದಿನಾರು ಸ್ವರಾಕ್ಷರಂಗಳಂ ಕೂಡಲಾಗಿವೈನೂರರುವತ್ತಕ್ಷರಂಗಳಾದವು. `ಕ್ಷಿತೌ ಷಟ್ಟಂಚಾಶತ್' ಎಂದು ಪೃಥ್ವೀತತ್ವದಲ್ಲಿ ಐ [ವತ್ತಾ] ರಕ್ಕರವು, `ದ್ವಿಚತುರಧಿಕ ಪಂಚಾಶದುದಕೇ'ಯೆಂದು ಆಪ್ತತ್ವದಲ್ಲಿ ಐವತ್ತೆರಡು, `ಹುತಾಶೆ ದ್ವಾಷಷಿ*'ಯೆಂದು, ಅಗ್ನಿತತ್ವದಲ್ಲಿ ಅರುವತ್ತೆರಡು, `ಚತುರಧಿಕ ಪಂಚಾಶದನಿಲೇ'ಯೆಂದು ವಾಯುತತ್ವದಲ್ಲಿ ಐವತ್ತನಾಲ್ಕು, `ದಿವಿ ದ್ವಿಷಟ್ತ್ರಿಂಶತ್' ಎಂದು ಆಕಾಶತತ್ವದಲ್ಲಿ ಎಪ್ಪತ್ತೆರಡು, `ಮನಸಿ ಚತುಷ್ಪಷಿ*' ಎಂದು ಮನಸ್ತತ್ವದಲ್ಲಿ ಅರುವತ್ತನಾಲ್ಕು, ಅಂತು ಮುನ್ನೂರರುವತ್ತು ಚೌಷಷಿ*ಕಲಾತತ್ವವ [ರುವ] ತ್ತನಾಲ್ಕು, ಕ ಎ ಇ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸ ಕ ಲ ಹ್ರೀ ಶ್ರೀ ಯೆಂದು ಪದಿನಾರು, ಅಂತು ಬ್ರಹ್ಮರಂಧ್ರದ ಸಹಸ್ರದಳದಲ್ಲಿ ಸಹಸ್ರಾಕ್ಷರವೆಂದು ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->