ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೇಣಾ ಮಂತ್ರಮೂರ್ತಿಗೆ ನಾದವೆ ಕಿರೀಟಮದೆಂತೆನೆ ಯಾ ಪರಶಿವನ ನಿಷ್ಕಳಶಕ್ತಿಯದೆ ನಾದವದೆಯಾದಿಶಕ್ತಿಯದೆ ಓಂಕಾರವದರುತ್ಪತ್ತಿಯೆಂತೆನೆ ಅಕಾರವೆ ನಾದ ಉಕಾರವೆ ಬಿಂದುವುಭಯಂಗೂಡಿ ಅವು `ಓ ಭವತಿ'ಯೆಂದೊಂದೆಯಾಗಿ ಓ ಎನಿಸಿತ್ತದರಂತೆ ಆ ಓ ಕೂಡಿ ಔಯೆನಿಸಿತ್ತು ಹಾಂಗೆಯೆ ಆ ಇ ಕೂಡಿ ಎ ಎನಿಸಿತ್ತದರಂತೆ ಅ ಏ ಕೂಡಿ ಐ ಏ ಓ ಔ ಯೆಂಬೀ ಚತುರಕ್ಷರಂಗಳ್ರೂಪಾಂತರದಿಂ ಸಂಧ್ಯಕ್ಷರಂಗಳೆನಿಸುಗುಮವರೋಳ್ ಓಕಾರವೆ ಆದಿಶಕ್ತಿಯ ಧ್ವಜಾಕಾರ ರೇಖೆಗಳೆ, ಈ ಮೂಲಪ್ರಸಾದ ಮಂತ್ರಮೂರ್ತಿಯ ಕಿರೀಟವೆಂದು ನಿರವಿಸಿದೆಯಯ್ಯಾ, ಪರಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕಂ, ಶಾಂತಿಕಮಂತ್ರ ನಿರೂಪಣಾನಂತರದಲ್ಲಿ ಪೌಷಿ*ಕಮಂತ್ರಮಂ ಪೇಳ್ವೆನೆಂತೆನೆ- ಪರಾತ್ಪರಸಂಜ್ಞಿತವಾದ ಹಕಾರವನುದ್ಧರಿಸಿ, ಇಂದ್ರವರ್ಗ ಸ್ವರತ್ರಯೋದಶಮಂ ಬೆರಸಿ, ಕಾರ್ಯಕಾರಣ ಸಂಜ್ಞಿತವಾದ ಸೊನ್ನೆಯಂ ಕೂಡೆ ಹೌಂ ಎಂಬಕ್ಕರವಾಯ್ತು. ಶಕ್ತಿಬೀಜಸಂಜ್ಞಿತವಾದ ಸ್ ಎಂಬ ವ್ಯಂಜನಮಂ ಜೀವಸಂಜ್ಞಿತವಾದಕಾರದೊಡನೆ ಕೂಡೆ ಸ ಎನಿಸಿತು. ಅವರ ಮುಂದೆ ಮತ್ತೊಂದೀಶವರ್ಗದ ಮೂರನೆಯಕ್ಕರವೆನಿಸುವ ಸ್ ಎಂಬಕ್ಕರಕ್ಕಂ, ಮತ್ತೆಯುಮದೇ ವರ್ಗದೆರಡನೆಯ ಷ್ ಎಂಬುದಕ್ಕೆಯುಂ ಜೀವಸಂಜ್ಞಿತವಾದಕಾರವಂ ಪತ್ತಿಸೆ ಸ ಷ ಎನಿಸಿದ ವೇಳನೆಯ ವರ್ಗದ ಕಡೆಯಕ್ಕರವಾದ ವ್ ಎಂಬಕ್ಕರವ ನದೇ ವರ್ಗದೆರಡನೆಯ ಷಕಾರದೊಳೊಂದಿಸೆ ಷ್ವ ಎನಿಸಿ ತ್ತಾರನೆಯ ಸ್ವರದೊಳ್ಮೇಳಿಸೆ ಮೂ ಎನಿಸಿತು. ಭೂತಾಂತ ಸಂಜ್ಞಿತವಾದ ಹಕಾರವನುದ್ಧರಿಸಿ ಯದರ ಮೇಲೆ ಅಗ್ನಿ ಸಂಜ್ಞಿತವಾದಾಕರಮಂ ಪತ್ತಿಸೆ ಹ್ರೂ ಎನಿಸಿತ್ತು. ಭಕಾರದ ಕಡೆಯ ವ್ಯಂಜನಮಂ ದಶಸ್ವರಾಂತರದೊಳ್ಬೆರಸೆ ಮೆ ಎನಿಸಿತ್ತು. ಪಂಚವರ್ಗಂಗಳೈದನೆಯದಾದ ನ್ ಎಂಬುದನದರಾರನೆಯ ಮ್ ಎಂಬುದಂ ಅದರೇಳನೆಯ ಯ್ ಎಂಬುದು ಸ್ವರಾದಿಯಾದ ಕಾರಣದೊಳ್ಕೂಡಿಸೆ ತರದಿಂ ನ ಮ ಎನಿಸಿದವಿವಂ ಪರತರ ಸಂಜ್ಞಿತವಾದ ಸೊನ್ನೆಯೊಳ್ಬೆರಸಿ ತರದಿಂದೀ ಪತ್ತಕ್ಕರಮಂ ಕೂಡಿ `ಹೌಂ ಸಂ ಸ್ವಂ ಷ್ವಂ ಮೂಂ ಹ್ರೂಂ ಮೇಂ ನಂ ಮಂ ಯಂ' ಯೆಂಬೀ ದಶಾಕ್ಷರ ಮಂತ್ರವೇ ಪೌಷಿ*ಕಮಂತ್ರವೆನಿಸಿತ್ತೀ ಪೂರ್ವೊಕ್ತ ಪಂಚಾಕ್ಷರ ಷಡಕ್ಷರಷ್ಟಾಕ್ಷರ ನವಾಕ್ಷರ ದಶಾಕ್ಷರಂಗಳನುಳ್ಳ ತರದಿಂ ಮೋಕ್ಷದಾಭಿವೃದ್ಧಿ ಕಾಮ್ಮ ಶಾಂತಿಕ ಪೌಷಿ*ಕಂಗಳೆಂದೀ ಐದೆರನಾದುದೆ ಸದಾಶಿವಮಂತ್ರವೆಂದೊರೆದೆಯಯ್ಯಾ, ಪರಮಗುರು ಪರಶಿವಲಿಂಗೇಶ್ವರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->