ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೋಗಾಭ್ಯಾಸ ಯೋಗಾಭ್ಯಾಸವೆಂದೆಂಬಿರಿ ಯೋಗವು ಅಭ್ಯಾಸವೆ ? ಅಭ್ಯಾಸವು ಯೋಗವೆ ಅಯ್ಯಾ ? ಯೋಗಾಭ್ಯಾಸವೆಂಬನ್ನಕ್ಕ ತಾನಾ ಯೋಗಿಯೆ ಅಯ್ಯಾ ? ಯೋಗವ ನುಡಿವರೆ ಅಯ್ಯಾ ? ಗುರುಮತದಿಂ ಭಾವಿಸಲು ಸರ್ವವೂ ಪರಬ್ರಹ್ಮ, ಶ್ರೀಗುರುವಿನ ಶ್ರೀಪಾದಧ್ಯಾನವೇ ಯೋಗ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮತ್ತೆಯುಂ, ಕ್ರಿಯೆಯೆ ಶರೀರಂ ಮಂತ್ರವೆ ಜೀವವಿಮೆವೆರಡರ ಯೋಗವೆ ದೇಹ ಪ್ರಾಣ ಸಂಬಂಧವದೆ ಶಿವಸಾನ್ನಿಧ್ಯ ಕಾರಣ- ಮದರಿಂದೆ ಕ್ರಿಯಾಮಂತ್ರಂಗಳುಭಯಂಗೂಡಿ ದೇಹ ಪ್ರಾಣಮಯವೆಂದರಿದಾಚರಿಪುದೆಂದು ನಿರವಿಸಿದೆಯಯ್ಯಾ, ವಿಶ್ವಮಯ ವಿಶ್ವೇಶ್ವರ ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಮಂತ್ರೋತ್ಪತ್ತಿ ನಿರೂಪಣಾನಂತರದೊಳ್ತತ್ವಂಗಳಂ ಮಂತ್ರಂಗಳಂ ಲಿಂಗದಲ್ಲಿ ನ್ಯಾಸಮಂ ಮಾಳ್ಪುದಂ ಪೇಳ್ವೆನೆಂತೆನೆ- ಲಿಂಗಸ್ಥಾಪನ ಕಾಲದೊಳ್ಕಳಶಂಗಳು ಸ್ಥಾಪಿಸುತ್ತವರಲ್ಲಿ ಪೊರಗಣಿಂ ಲಿಂಗದೊಳೆಂತಂತಾ ಕಳಶಾಂತರ್ಗತವಾಗಿ ನಾದಮನುಂಟುಮಾಡಿ ಮಂತ್ರಂಗಳಂ ನ್ಯಾಸಂಗೆಯ್ವುದಾ ಲಿಂಗಸ್ಥಾಪನ ಕಳಶಸ್ಥಾಪನಂಗಳುಭಯದ ಕೂಟ ಕ್ರಿಯಾವಸ್ಥೆಯೆ ಪ್ರತಿಷೆ*ಯೆನಿಕುಮಾ ಪ್ರತಿಷೆ* ಪ್ರಾಣಮೆಂದು ಪ್ರಕೃತಿಯೆಂದಿರ್ತೆರವಾಯ್ತು. ಉಭಯದ ಯೋಗಮಂ ತಿಳಿದು ಸ್ಥಾನಮನೆಸಗುವುದು. ಮತ್ತಮಾ ಪ್ರಾಣಮೆನೆ ಮಂತ್ರಂ. ಪ್ರಕೃತಿಯೆನೆ ಮೂರ್ತಿ. ಈಯಭಯದ ಯೋಗವೆ ಶಿವಸಾನ್ನಿಧ್ಯ ಕಾರಣದರತ್ತಣಿಂ ಮಂತ್ರಂಗಳಂ ಮೂರ್ತಿಗಳನುಂ ಲಿಂಗದಲ್ಲಿಯೆ ನ್ಯಾಸಂಗೆಯ್ವುದೆಂದು ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
-->