ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಗ್ಬ್ರಹ್ಮಿಗಳೆಲ್ಲರು ಪಡುವ ಪಾಟ ನೋಡಿ ನಮ್ಮ ಭಕ್ತರು, ತ್ಯಾಗಾಂಗದಲ್ಲಿ, ಇಷ್ಟ ಪ್ರಾಣ ಭಾವಕ್ಕೆ ಬಾಹ್ಯ ಪದಾರ್ಥರೂಪವ ಈಕ್ಷಣ ಜ್ಞಾನಸ್ಪರ್ಶದಿಂದ ಅರ್ಪಿಸಿ ದೇಹಪ್ರಸಾದಿಗಳಾಗಿ ಚರಶೇಷದಲ್ಲಿ ಇಷ್ಟಲಿಂಗಪೂಜಕರಾಗಿ ಅನಿಷ್ಟವ ಪರಿಹರಿಸಿದರು. ಭೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ದೇಹಪದಾರ್ಥರೂಪವ ರೂಪು ರುಚಿ ತೃಪ್ತಿಯಿಂದ ಅರ್ಪಿಸಿ ಪ್ರಾಣಪ್ರಸಾದಿಗಳಾಗಿ ಲಿಂಗಶೇಷದಲ್ಲಿ ಪ್ರಾಣಲಿಂಗ ನೈಷಿ*ಕರಾಗಿ ವಾಯುಗುಣವಿಕಾರವ ಕೆಡಿಸಿದರು. ಯೋಗಾಂಗದಲ್ಲಿ ಇಷ್ಟ ಪ್ರಾಣ ಭಾವಕ್ಕೆ ವಾಯು ಪದಾರ್ಥರೂಪವ ಸ್ಥೂಲ ಸೂಕ್ಷಕಾರಣದಿಂದ ಅರ್ಪಿಸಿ ಮಹಾಪ್ರಸಾದಿಗಳಾಗಿ ಗುರುಶೇಷದಲ್ಲಿ ಮನೋಗುಣ ವಿಕಾರ ಪರಿಹರಿಸಿದರು ಗುಹೇಶ್ವರಲಿಂಗದಲ್ಲಿ.
--------------
ಅಲ್ಲಮಪ್ರಭುದೇವರು
ಇನ್ನು ಅಂಗತ್ರಯಂಗಳಲ್ಲಿ ಲಿಂಗತ್ರಯಸ್ವಾಯತವದೆಂತೆಂದಡೆ : ಸುಷುಪ್ತಾವಸ್ಥೆಯೆಂಬ ಯೋಗಾಂಗದಲ್ಲಿ ಭಾವಲಿಂಗ ಸ್ವಾಯತವಾಗಿಹುದು. ಸ್ವಪ್ನಾವಸ್ಥೆಯೆಂಬ ಭೋಗಾಂಗದಲ್ಲಿ ಪ್ರಾಣಲಿಂಗ ಸ್ವಾಯತವಾಗಿಹುದು. ಜಾಗ್ರಾವಸ್ಥೆಯೆಂಬ ತ್ಯಾಗಾಂಗದಲ್ಲಿ ಇಷ್ಟಲಿಂಗ ಸ್ವಾಯತವಾಗಿಹುದು ನೋಡಾ. ಇದಕ್ಕೆ ಈಶ್ವರೋýವಾಚ : ``ಲಿಂಗಂ ತತ್ಪದಮಾಖ್ಯಾತಂ ಅಂಗಂ ತ್ವಂ ಪದಮೀರಿತಂ | ಸಂಯೋಗೋýಸಿ ಪದಂ ಪ್ರೋಕ್ತಂ ಅನಯೋರಂಗಲಿಂಗಯೋಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಕ್ರಿಯಾಗಮ್ಯಲಿಂಗವನು ಸತ್ಕ್ರಿಯಾ ಭಕ್ತಿಯಿಂದೆ ತ್ಯಾಗಾಂಗದಲ್ಲಿ ಧರಿಸಿದ ವಿರಾಗ್ರತೆಯನುಳ್ಳ ಮಾಹೇಶ್ವರನು ಕಾಯಕದಲ್ಲಿ ವಾಚಕ ಮಾನಸ ಸಂವಿತ್ಪ್ರಭಾನಂದಮಯವಾಗಿತೋರುತ್ತಿಹನಲ್ಲದೆ, ಅಂಗಭವಿ ವೇಷಧಾರಿಗಳಂತಲ್ಲ ನೋಡಾ ! ಜ್ಞಾನಗಮ್ಯಲಿಂಗವನು ಸುಜ್ಞಾನಭಕ್ತಿಯಿಂದೆ ಭೋಗಾಂಗದಲ್ಲಿ ಧರಿಸಿದ ಕಡುಗಲಿ ವೀರಮಾಹೇಶ್ವರನು ವಾಚಕದಲ್ಲಿ ಮಾನಸ ಕಾಯಕ ಮಹೋತ್ಸಾಹಮಯವಾಗಿ ತೋರುತ್ತಿಹನಲ್ಲದೆ, ಪ್ರಾಣಭವಿ ವೇಷಧಾರಿಗಳಂತಲ್ಲ ನೋಡಾ ! ಭಾವಗಮ್ಯಲಿಂಗವನು ಮಹಾಜ್ಞಾನಭಕ್ತಿಯಿಂದೆ ಯೋಗಾಂಗದಲ್ಲಿ ಧರಿಸಿದ ಘನಗಂಭೀರಮಾಹೇಶ್ವರನು ತನ್ನ ಮಾನಸದಲ್ಲಿ ಕಾಯಕ ವಾಚಕ ಪರಮಶಾಂತ ಜ್ಞಾನಮಯವಾಗಿ ತೋರುತ್ತಿಹನಲ್ಲದೆ, ಆತ್ಮಭವಿ ವೇಷಧಾರಿಗಳಂತಲ್ಲ ನೋಡಾ ! ಗುರುನಿರಂಜನ ಚನ್ನಬಸವಲಿಂಗದಲ್ಲಿ ಷಟ್‍ಸ್ಥಲಗಮ್ಯ ಷಡುದರ್ಶನಗಮ್ಯ ನೋಡಾ !
--------------
ದೇಶಿಕೇಂದ್ರ ಸಂಗನಬಸವಯ್ಯ
-->