ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಜದೊಳಗಣ ಹಳ ರಂಜಿಸುವ ಭೇದಕ್ಕೆ ಅಂಜುತೈದಾರೆ ಸಕಲ ಯೋಗಿಗಳೆಲ್ಲ ಧಾತುಗೆಟ್ಟು ಹಳದಿರಿತಿ ಧಾತುವ ನುಂಗಿದಾತ ಶಿವಯೋಗಿ. ಈ ಯೋಗಿಯತೀ ನಿಜ ನಿಷ್ಪ್ಕಯ ಓತೊಮ್ಮೆ ಅರಿದಡೆ, ಆತನೆ ಶಿವಯೋಗಿ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಮರದ ಹೊಲಬನರಿಯದೆ ಜಗವೆಲ್ಲ ಬರಡಾಯಿತ್ತು. ಅಂಗದ ಹೊಲಬನರಿಯದೆ ಯೋಗಿಗಳೆಲ್ಲ ಭಂಗಿತರಾದರು ಸಂಗದ ಹೊಲಬನರಿಯದೆ ಶರಣರು ಭಂಗಿತರಾದರು ಲಿಂಗದ ಹೊಲಬನರಿಯದೆ ಭಕ್ತ ಶೀಲವಂತನಾದ. ಆದಿ ಮಧ್ಯಾವಸಾನದಲ್ಲಿ ಗುಹೇಶ್ವರನೆಂಬ ಲಿಂಗವು ಅರಿವಿನ ಮರೆಯಲ್ಲಿಹುದನಾರೂ ಅರಿಯರಲ್ಲಾ ?
--------------
ಅಲ್ಲಮಪ್ರಭುದೇವರು
-->