ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಥೂಲದೇಹ ತೊಳೆದಡೇನು, ಸೂಕ್‍ಕ್ಷ್ಮದೇಹ ಶುದ್ಧವಾದಡೇನು. ಕಾರಣಾತೀತನಾಗದನ್ನಕ್ಕ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ, ನಾ ಯೋಗಿಯಾದಡೇನು ಮನವೊಲಿದು ಚೆನ್ನಬಸವಣ್ಣ ಲಿಂಗವ ಕೊಡದನ್ನಕ್ಕ ?
--------------
ಸಿದ್ಧರಾಮೇಶ್ವರ
ಕಾಮವ ಸುಟ್ಟು ಹೋಮವನುರುಹಿ, ತ್ರಿಪುರಸಂಹಾರದ ಕೀಲ ಬಲ್ಲಡೆ, ಯೋಗಿಯಾದಡೇನು ? ಭೋಗಿಯಾದಡೇನು ? ಶೈವನಾದಡೇನು ? ಸನ್ಯಾಸಿಯಾದಡೇನು ? ಅಶನವ ತೊರೆದಾತ ವ್ಯಸನವ ಮರೆದಾತ_ ಗುಹೇಶ್ವರಲಿಂಗದಲ್ಲಿ ಅವರ ಹಿರಿಯರೆಂಬೆನು.
--------------
ಅಲ್ಲಮಪ್ರಭುದೇವರು
-->