ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (1) (4) (0) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ನಡೆವರೆಲ್ಲರೂ ಹೆಂಗಸಿನ ಗಂಡಂದಿರು. ಮಾಡುವರೆಲ್ಲರೂ ಮಹಾಲಕ್ಷ್ಮಿಯ ತೊಂಡಂದಿರು. ಉಂಬವರೆಲ್ಲರೂ ಅವರೆಂಜಲ ಕೂಳು. ಇದನೆಂದೆ ನಾನು. ಎನಗಿದಿರಾದಡೆ ಅವರ ಬಾಯ ಕೊಂಬವರ ಗಂಡರ ಗಂಡ, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ನಾನು ನಾನಾದ ಕಾರಣ ಎನಗೆ ಗುರುವಿಲ್ಲ. ನಾನೆಂಬುದರಿಯೆನಾಗಿ ಎನಗಾ ಲಿಂಗವಿಲ್ಲ. ನಾ ಮಾಡದವನಾಗಿ ಎನಗಾ ಜಂಗಮವಿಲ್ಲ. ಇದನಿನ್ನಾರ ಕೇಳುವೆ, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ