ಅಥವಾ
(0) (1) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (0) (2) (0) (0) (1) (4) (0) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಭಕ್ತನಾದಡೆ ಆರೂ ಅರಿಯದಂತೆ ಊರೆಲ್ಲರರಿಕೆಯಾಗಿ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ, ಮಾಟವನರಿತು ಮಾಡುವ ಸತಿಯರ ಗಂಡ ನಾನು. ರಕ್ಕಸನೊಡೆಯ ಕೊಟ್ಟುದ ಬೇಡ
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಭಕ್ತರ ಸತಿಯಾಗಿದವರೆ ಎನ್ನ ಹೆಂಡಿರು. ಭಕ್ತರ ತಲೆಯೆ ಎನ್ನ ಕಾಲು, ಭಕ್ತರ ಚಿತ್ತವೆ ಎನ್ನ ಕುಚಿತ್ತ. ಭಕ್ತರ ದ್ರವ್ಯ ಎನ್ನ ದೇಹ. ಭಕ್ತರ ಮುಕ್ತಿ ಎನ್ನ ಕುದುರೆಯ ಲಾಯ. ಅವರು ಸತ್ತಡೆ ಪಾಪ, ಎನಗದು ನರಕ, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಭಕ್ತರೆಲ್ಲರೂ ಅಸತ್ಯವ ಮಾಡುವಾಗ ನಾನೆ ಭಕ್ತನಾಗಿದ್ದೆ. ಇವರೆಲ್ಲರು ಗುರುಲಿಂಗಜಂಗಮಕ್ಕೆ ಮಾಡುವಾಗ, ನಾನೆನ್ನ ಸತಿ ಸುತ ಬಂಧುಗಳಿಗೆ ಮಾಡಿ ಮಾಡಿ ದಣಿದು ನಿರಂಗನಾದೆ. ಇಂತಿವರ ನಡುವೆ ನಾ ಕಡುಗಲಿ. ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ
ಭಕ್ತರೆಂಬ ಅಂಗವ ತಾಳಿರ್ದ ಬಸವ ಮೊದಲಾಗಿರ್ದವರ ಎಲ್ಲರ ಗಂಡ. ಅವರ ಹೆಂಡತಿಯರ ಕಂಡಡೆ ಬಿಡೆ, ಕಾಣದಡೆ ಅಂಜಿದೆನಯ್ಯಾ. ಎನ್ನ ಕೊಂಡಾಡುವರಿಲ್ಲ, ರಕ್ಕಸನೊಡೆಯ ಕೊಟ್ಟುದ ಬೇಡ.
--------------
ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ