ಅಥವಾ
(1) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (1) (0) (2) (1) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಣುತವೆ ಬಂದುದನರಿದು, ಕಂಡಾತನ ಮನಧರ್ಮದ ಚಂದವ ಕಂಡು, ಬಂದಿತ್ತು ಬಾರದೆಂಬ ಸಂದೇಹ ನಿಂದು, ಇದೆಲ್ಲವೂ ಲಿಂಗಾಣತಿಯೆಂಬ ಸಂದನರಿದು ವರ್ಮದ ಮಾಟದವಂಗೆ ತಾ ವರ್ಮಿಗನಾಗಿದ್ದು, ಗಂಡಭೇರುಂಡನ ಪಕ್ಷಿಯಂತೆ ಒಡಲೊಂದೆ ಉಭಯ ಶಿರ ಬೇರಾದ ತೆರ. ಇದು ಕಲಕೇತನ ಒಲವಿನ ತೆರ. ಉಭಯಸ್ಥಲದ ಹೊಲದ ನಲವಿನ ಪಥ. ಮೇಖಲೇಶ್ವರಲಿಂಗದ ಒಲವಿನ ಕುಲ.
--------------
ಕಲಕೇತಯ್ಯ
ಕ್ರಿಯಾಶಕ್ತಿ ಬ್ರಹ್ಮಂಗೆ ಸರಸ್ವತಿಯಾಗಿ ಬಂದುದನರಿದು ಇಚ್ಛಾಶಕ್ತಿ ವಿಷ್ಣುವಿಂಗೆ ಮಹಾಲಕ್ಷ್ಮಿಯಾಗಿ ನಿಂದುದನರಿದು, ಜ್ಞಾನಶಕ್ತಿ ರುದ್ರಂಗೆ ಉಮಾದೇವಿಯಾಗಿ ಸಲೆ ಸಂದುದನರಿದು, ಇಂತೀ ತ್ರಿವಿಧ ಶಕ್ತಿಗಳ ಮನೋಹರದಲ್ಲಿ ತ್ರಿವಿಧ ಮೂರ್ತಿಗಳು ಆಡುವದ ಕಂಡು ನಾನಾಸುಖ ಪರಿಪೂರ್ಣ ಕಳೆಯಿಂದ ಕ್ರಿಯಾಶಕ್ತಿ ಅದರ ಸುಖಿಚ್ಛೆಯಿಂದ ಇಚ್ಛಾಶಕ್ತಿ ಈ ಉಭಯಶಕ್ತಿ ಸನ್ಮತವಾಗಿ ನಿಂದ ಉಳುಮೆ ಜ್ಞಾನಶಕ್ತಿ. ಇಂತೀ ತ್ರಿವಿಧ ಶಕ್ತಿಯ ಒಡಹುಟ್ಟಿ ನಾ ಬಂದೆ. ಬ್ರಹ್ಮಂಗೆ ಕಿರಿದಂಗಿಯ ಕೊಟ್ಟು ಮೈದುನನ ಮಾಡಿಕೊಂಡೆ. ವಿಷ್ಣುವಿಂಗೆ ನಡುವಳಾಕೆಯ ಕೊಟ್ಟು ಬಿಡುಮುಡಿಯ ಮೈದುನನ ಮಾಡಿಕೊಂಡೆ. ರುದ್ರಂಗೆ ಹಿರಿಯಕ್ಕನ ಕೊಟ್ಟು ಎನ್ನೊಡಗೂಡುವ ಭಾವನ ಮಾಡಿಕೊಂಡೆ. ಕಿರಿದಂಗಿಯ ಗಂಡ ಸತ್ತ, ನಡುದಂಗಿಯ ಗಂಡ ಬಿಟ್ಟ, ಹಿರಿಯಕ್ಕನ ಕೊಂದ ಭಾವ. ಇಂತೀ ಮೂವರ ಕೊಳುಕೊಡೆ ದೃಷ್ಟ ಸಂಬಂಧ ನಷ್ಟವಾಯಿತ್ತು. ಕಲುಹೃದಯದ ಕಲಕೇತಮಲ್ಲ ಬಂದೆ. ಗೆಲ್ಲ ಸೋಲವೆಂಬ ತಗರ ಕೋಡ ಹಿಡಿದು ಮೇಖಲೇಶ್ವರಲಿಂಗವಲ್ಲದಿಲ್ಲಾಯೆಂದು ನಲಿದು ಕುಣಿದಾಡಬಂದೆ.
--------------
ಕಲಕೇತಯ್ಯ
ಕಾಲನಾಲ್ಕು ಮುರಿದು, ಕೋಡೆರಡ ಕಿತ್ತು, ಆರಡಗಿತ್ತು ತಗರಿನ ಹಣೆಯಲ್ಲಿ. ಮೂರು ಹೋಯಿತ್ತು ತಗರಿನ ಕೋಡೆರಡರಲ್ಲಿ. ಎಂಟು ಹೋಯಿತ್ತು ಕಾಲು ನಾಲ್ಕರಲ್ಲಿ. ತಗರಿನ ಜೀವ ಉಭಯದ ಸನ್ನೆಯಲ್ಲಿ ಹೋಯಿತ್ತು. ಇಂತೀ ಕಲಕೇತ ವಿದ್ಯವ ಧರಿಸಿ ಮಹಾಶರಣರ ಮನದ ಮಂದಿರದಲ್ಲಿ ಕಲಕೇತನ ಒಲವರದಲ್ಲಿ ಮೂಡಿ ಮುಳುಗಬೇಡ ಎಂದು ಸಾರಿ ಮಾರಬಂದೆ. ಶುದ್ಧಪ್ರಸಾದ ಎನಗುಂಟು, ಸಿದ್ಧಪ್ರಸಾದ ಎನಗುಂಟು, ಪ್ರಸಿದ್ಧಪ್ರಸಾದ ನಿಮಗುಂಟು, ಆ ಪ್ರಸನ್ನಪ್ರಸಾದ ಎನಗೆ ಬೇಕೆಂದು ಮೇಖಲೇಶ್ವರಲಿಂಗವನೊಡಗೂಡಿಕೊಂಡು ಬೇಡಬಂದೆ.
--------------
ಕಲಕೇತಯ್ಯ