ಅಥವಾ
(1) (0) (0) (0) (0) (0) (0) (0) (1) (0) (0) (0) (0) (0) ಅಂ (0) ಅಃ (0) (3) (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (1) (1) (0) (2) (1) (0) (0) (0) (0) (0) (0) (0) (0) (0) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬೇಡಲೇತಕ್ಕೆ ಕಾಯಕವ ಮಾಡಿಹೆನೆಂದು? ಕೊಡದಡೆ ಒಡಗೂಡಿ ಬಯ್ಯಲೇತಕ್ಕೆ? ಒಡೆಯರು ಭಕ್ತರಿಗೆ ಮಾಡಿಹೆನೆಂದು ಗಡಿತಡಿಗಳಲ್ಲಿ ಕವಾಟ ಮಂದಿರ ಮಂದೆ ಗೊಂದಿಗಳಲ್ಲಿ ನಿಂದು ಕಾಯಲೇತಕ್ಕೆ? ಈ ಗುಣ ಕಾಯಕದಂದವೆ? ಈ ಗುಣ ಹೊಟ್ಟೆಗೆ ಕಾಣದ ಸಂಸಾರದ ಘಟ್ಟದ ನಿಲುವು. ಉಭಯ ಭ್ರಷ್ಟಂಗೆ ಕೊಟ್ಟ ದ್ರವ್ಯ ಮೇಖಲೇಶ್ವರಲಿಂಗಕ್ಕೆ ಮುಟ್ಟದೆ ಹೋಯಿತ್ತು.
--------------
ಕಲಕೇತಯ್ಯ
ಬೇಡುವ ಭಂಡನ, ಕೊಡದೆ ಹೋರುವ ಲಂಡನ ಉಭಯದ ದ್ರವ್ಯವ ತಂದು, ಅಲ್ಲಿ ಉಂಡು, ಸುಖಿಯಾದೆಹೆನೆಂಬ ಉಭಯ ಭಂಡನ ದಿಂಡಿಕೆ ಕೆಡೆಯದ ಮೇಖಲೇಶ್ವರ ಲಿಂಗದ ಅಂಗವೇಕೆ ತಿಳಿಯದು.
--------------
ಕಲಕೇತಯ್ಯ