ಅಥವಾ
(1) (0) (0) (0) (0) (1) (0) (0) (0) (0) (0) (0) (0) (0) ಅಂ (0) ಅಃ (0) (3) (0) (1) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (1) (0) (0) (0) (0) (0) (0) (0) (0) (0) (0) (0) (2) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಸ್ಥೂಲದಿಂದ ದೃಷ್ಟ. ಸೂಕ್ಷ್ಮದಿಂದ ಅದರ ಸಸುಂಗ. ಕಾರಣದಿಂದ ವಾಯುಭ್ರಮೆ. ಇಂತೀ ತನುತ್ರಯಂಗಳ ಕಳೆದು ನಿಜ ಉಳುಮೆಯಲ್ಲಿ ಒಡಗೂಡಬೇಕು, ವೀರಶೂರ ರಾಮೇಶ್ವರಲಿಂಗಾ.
--------------
ಬಾಲಬೊಮ್ಮಣ್ಣ
ಸೂತ್ರದ ಸಂಚದಿಂದ ಉಭಯ ಬೊಂಬೆ ನಡೆದು ಹೊಡೆದಾಡಿ ಕೆಡದ ಮತ್ತೆ ಸಂಚದ ನೂಲು ಅಲ್ಲಿಗೆ ಲಕ್ಷ. ಇಷ್ಟ ಪ್ರಾಣ ಒಡಗೂಡಿದ ಮತ್ತೆ ಕೊಟ್ಟಿಹೆ ಕೊಂಡಿಹೆನೆಂಬ ಅರಿವು ದೃಷ್ಟವ ಕಂಡದರಲ್ಲಿ ನಷ್ಟ. ಇಂತೀ ಭೇದಂಗಳಲ್ಲಿ ವೇಧಿಸುವನ್ನಕ್ಕ ವೀರಶೂರ ರಾಮೇಶ್ವರಲಿಂಗವ ಉಜ್ಜುತ್ತ ಒರೆಸುತ್ತ ತೊಳೆವುತ್ತ ಹಿಳಿವುತ್ತ ಪೂಜಿಸಿ ಆಳುತ್ತ ಇರಬೇಕು.
--------------
ಬಾಲಬೊಮ್ಮಣ್ಣ