ಅಥವಾ
(0) (1) (0) (0) (0) (0) (0) (0) (0) (0) (0) (1) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (0) (0) (1) (0) (0) (0) (2) (0) (1) (0) (0) (0) (0) (0) (1) (0) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮುರಿಗಂಚು ತವರ ಹಿತ್ತಾಳೆ ತಾಮ್ರ ಇವು ಮೊದಲಾದ ಲೋಹವ ತನ್ನಿ. ಕಳ್ಳವಣ, ಕಂದುವೆಳ್ಳ ಮೊದಲಾದ ರೊಕ್ಕವ ತನ್ನಿ. ನಿಮಗಲ್ಲದ ಒಡವೆ ಎನಗೆ. ನಿಮಗೆ ಒಳ್ಳಿ[ತ]ಹ ಒಡವೆಯ ಕೊಡುವೆ. ಎನ್ನ ಕಂಬಳಿಯ [ಚೀಲವಂ] ಬಿಡುವೆ. ಅದರಲ್ಲಿದ್ದ ಸಂಬಾರದ್ರವ್ಯವ ಕೊಡುವೆನೆಂಬುದಕ್ಕೆನ್ನ ನಂಬಿ ಬನ್ನಿ. ಊಧ್ರ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗದಾಣತಿ.
--------------
ಮಹಾಲಿಂಗ ಶಶಿಮೌಳಿ ಸದಾಶಿವ
ಮನ ಬುದ್ಧಿ ಚಿತ್ತ ಅಹಂಕಾರವೆಂಬ ನಾಲ್ಕು ಲೋಹದಿಂದ ಸರ್ವೇಂದ್ರಿಯದ ಮೊತ್ತ. ಮನ ವಸ್ತುವ ಮುಟ್ಟದೆ, ನಿಜನಿಷೆ*ಯನರಿಯದೆ, ಬಹುಮೊತ್ತದ ಮಾತಲ್ಲದ ಮಾತನಾಡುವದು, ಕಳ್ಳವಣ, ಸಲ್ಲದ ತಾರ ಇವೆಲ್ಲವ ತಿಳಿದು ಕಂಬಳಿಯ ಚೀಲದವನ ಬೆಂಬಳಿಯಲ್ಲಿ ಬನ್ನಿ. ನಿಮಗಲ್ಲದ ಒಡವೆಯನೊಳ್ಳಿತ್ತು ಮಾಡಿಕೊಡುವೆ, ಊಧ್ರ್ವರೇತೋಮೂರ್ತಿ ಶ್ವೇತ ಸ್ವಯಂಭು ಕಪಿಲೇಶ್ವರಲಿಂಗ ಸಾಕ್ಷಿಯಾಗಿ.
--------------
ಮಹಾಲಿಂಗ ಶಶಿಮೌಳಿ ಸದಾಶಿವ