ಅಥವಾ
(1) (1) (0) (0) (0) (0) (0) (0) (2) (0) (0) (0) (0) (0) ಅಂ (1) ಅಃ (1) (0) (0) (0) (0) (0) (0) (0) (0) (0) (0) (0) (0) (0) (0) (0) (1) (0) (0) (0) (2) (1) (0) (1) (0) (0) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತುರುಬು ಜಡೆ ಬೋಳು ಬಿಡುಗುರುಳು ಇವೆಲ್ಲವೂ ರುದ್ರನ ಅಡಿವೆಜ್ಜೆಯ ಕುರುಹು. ಇಂತೀ ಕುರುಹಿನ ಮುದ್ರೆಗಳಲ್ಲಿ ಬಂದು ತಮ್ಮಡಿಯ ಇರವನರಿಯದೆ ಬರಿಯ ಬೊಮ್ಮವನಾಡಿ ನುಡಿವರ ಸರ್ವಾಂಗದ ತೊಡಿಗೆಯ ಬಂಡೆ ಸಿಡಿಹಿಂಗೆ ಕತ್ತರಿ ತರುಬಿಂಗೆ ಬೆಳೆದುದಕ್ಕೆ ತೊರೆಗೂರ ಮತ್ತೆ, ಹರಿವ ನಖಕ್ಕೆ ಕಡಿಚಣ ಮತ್ತೆ, ಉಸುರಿನ ದೆಸೆಯ ನಾಸಿಕಕ್ಕೆ, ಕಸನ ತೆಗೆಯುವುದಕ್ಕೆ ಅಂಗುಲ ಸಂಗಿ. ಇಂತೀ ಕಾಯಕದ ಬೆಂಬಳಿಯಲ್ಲಿ ತಂದನೆನ್ನ ಬಸವಣ್ಣ. ಆತನಂಗದ ದೆಸೆಯಿಂದ ಬಂದೆ ಕನ್ನಡಿವಿಡಿದು, ಆ ಕನ್ನಡಿಯ ದೆಸೆಯಿಂದ ನಿಮ್ಮ ಕಂಗಳಲ್ಲಿ ನೋಡಿ ನಿಮ್ಮ ಮಲವ ನೀವೇ ಪರಿಹರಿಸಿಕೊಳ್ಳಿ ಎನಗನ್ಯ ಭಿನ್ನವಿಲ್ಲ ಕಮಳೇಶ್ವರ ಲಿಂಗವು ಕಳುಹಿದ ಮಣಿಹ.
--------------
ಶ್ರೀಗುರು ಪ್ರಭುನ್ಮುನೀಶ್ವರ