ರ ಪದದಿಂದ ಪ್ರಾರಂಭವಾಗುವ ವಚನಗಳು:
ರಸವಡೆದಂತೆ ದೆಸೆದೆಸೆಯನಾಲಿಸುವ ಮನವ ತನ್ನ ವಶವ ಮಾಡಿ ನಿಲಿಸಿ, ಹುಸಿಯ ಬಿಟ್ಟು, ಮಾಯೆಯ ಬಲೆಯ ನುಸುಳಿ, ತಾ ನಿಶ್ಚಿಂತನಾಗಿ, ಧೀರವೀರನಾದಲ್ಲದೆ ಆ ಮಹಾಘನವ ಕಾಣಬಾರದು ಎಂದರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.