ಅಥವಾ

ಒಟ್ಟು 6 ಕಡೆಗಳಲ್ಲಿ , 5 ವಚನಕಾರರು , 6 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಅಚ್ಚಪ್ರಸಾದ, ಅರ್ಪಿತಪ್ರಸಾದ, ಸಹಭೋಜನ, ಆರರಲ್ಲಿ ಅರ್ಪಿತ, ಮೂರರಲ್ಲಿ ಮುಕ್ತವೆಂದು ಊರೆಲ್ಲರ ಮುಂದೆ ದೂರಿಯಾಡುವ ನಾಯಿಮನುಜರಿರಾ, ಹೀಗೇಕೆ ದೂರುವಿರಿ? ಗುರುವೆಷ್ಟು, ಲಿಂಗವೆಷ್ಟು, ಜಂಗಮವೆಷ್ಟು, ಪ್ರಸಾದವೆಷ್ಟು, ಅರ್ಪಿತವೆಷ್ಟು? ಇದರ ಅವಧಾನವನರಿದ ಶರಣಂಗೆ, ಒಂದಲ್ಲದೆ ಎರಡುಂಟೆ? ಅವು ಒಂದೆಂಬುವನಕ ಬಂಧನವು. ತತ್ವಾರ್ಥಕ್ಕೆ ಇದಿರಿಟ್ಟುಕೊಂಡಿಪ್ಪನಲ್ಲದೆ, ಅರಿದ ಶರಣಂಗೆ ಒಂದೆಂಬುದು ಸಂದೇಹ. ಈ ರೀತಿಯನರಿಯದೆ ತೂತುಬಾಯೊಳಗೆ ಮಾತಿಗೆ ತಂದು ನುಡಿದಾಡುವ ಪಾತಕರ ಮೆಚ್ಚುವನೆ, ನಮ್ಮ ಶರಣ ಬಸವಪ್ರಿಯ ಕೂಡಲಚೆನ್ನಬಸವಣ್ಣ ?
--------------
ಹಡಪದ ಅಪ್ಪಣ್ಣ
ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು, ಬೇರೊಂದು ಠಾವಿನಲ್ಲಿ ಆಯಿದಾಳೆ. ಠಾವನರಿತು ದೈತೆಯ ದಾತ ಮುರಿದು, ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ, ಅರ್ಕೇಶ್ವರಲಿಂಗವ ಕೂಡಿದ ಕೂಟ.
--------------
ಮಧುವಯ್ಯ
ಮೂರುಲೋಕದ ಹುಟ್ಟಿನಲ್ಲಿ ಒಂದು ವಾರಣ ಬಂದು, ಊರೆಲ್ಲರ ಬರಿಕೈವುತ್ತದೆ. ಅದಾರಿಗೂ ಅಶಕ್ಯ. ಆ ವಾರಣನ ವಾರಿಸುವರಿಲ್ಲ. ಅರ್ಕೇಶ್ವರಲಿಂಗವನರಿತವರಿಗಲ್ಲದೆ ಆಗದು.
--------------
ಮಧುವಯ್ಯ
ಊರೆಲ್ಲರ ಹೂರು ತಿಂದಿತ್ತು, ಹೂರ ಹೂರಣ ತಿಂದಿತ್ತು, ಬಂದ ಬಂದವರೆಲ್ಲರೂ ಉಂಡುಟ್ಟು ಸಂದಣಿಗೊಳತ್ತಿದ್ದರು. ಇನ್ನೆಂದಿಗೆ ಸಂದೇಹ ಹರಿಗು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ವಾರಿ ಸಲಿಲದಲ್ಲಿ ಒಂದು ಶರಧಿ ಹುಟ್ಟಿ ಊರೆಲ್ಲರ ಉರುಳುತ್ತದೆ. ಆ ಉರುಳು ಕೊರಳ ಬೀರಿ ಬ್ರಹ್ಮನ ಉಸುರಡಗಿತ್ತು; ವಿಷ್ಣುವಿನ ಎಡೆಯಾಟ ಬಿಟ್ಟಿತ್ತು, ರುದ್ರನ ಹಣೆಗಿಚ್ಚು ದಳ್ಳುರಿ ಬೇವುತ್ತದೆ. ಅದ ನಂದಿಸುವರಿಲ್ಲ, ಮೂರರ ಬಿಂದುವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಶಸ್ತ್ರ, ಸಮಾಧಿ, ನೀರು, ನೇಣು, ಮಿಕ್ಕಾದ ವಿಷ ಔಷಧಿಗಳಿಂದ ವ್ರತ ತಪ್ಪಿತೆಂದು ಆತ್ಮಘಾತಕವ ಮಾಡಬಹುದೆ? ವ್ರತ ತಪ್ಪಿತ್ತೆಂದು ತಾನಳಿಯಬಹುದೆ? ಅರಿವು ತೋರಿದಲ್ಲಿಯೆ ಆ ಘಟವ ಮರೆದು ಲಿಂಗವ ಬೆರಸಬೇಕಲ್ಲದೆ. ಹೀಗಲ್ಲದೆ ಊರೆಲ್ಲರ ಕೂಡಿ ಲಾಗಿಗೆ ಸತ್ತೆಹೆನೆಂದು, ಬೇಡಾ ಎಂದಡೆ ಉಳಿದೆಹೆನೆಂಬ ವಿದಾಂತರ ಲಾಗಲ್ಲಾ. ಬಂಧನವಿಲ್ಲದೆ ಲಿಂಗವ ಒಡಗೂಡಬೇಕು ಏಲೇಶ್ವರಲಿಂಗದಲ್ಲಿಗಾಗಿ.
--------------
ಏಲೇಶ್ವರ ಕೇತಯ್ಯ
-->