ಅಥವಾ
(9) (1) (2) (0) (2) (2) (0) (0) (6) (1) (0) (1) (0) (0) ಅಂ (2) ಅಃ (2) (16) (0) (3) (1) (0) (1) (0) (0) (0) (0) (0) (0) (0) (0) (0) (9) (0) (2) (0) (4) (2) (0) (9) (5) (10) (0) (0) (0) (1) (1) (1) (0) (1) (9) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅವಳನವನೇರಿ ಕಳಚಿತ್ತ ಬಿಂದು ನಿಲುವುದಕ್ಕೆ ನೆಲೆಯಿಲ್ಲದೆ, ರೂಪಿಂಗೊಡಲಿಲ್ಲದೆ ಕೂಸು ಸತ್ತಿತ್ತು, ಅವರಿಬ್ಬರ ಆಸೆ ಹರಿಯಿತ್ತು. ನಾ ಮಾತಿನ ಮರೆಯವನಲ್ಲ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅರಿತಡೆ ಇಹಪರದವನಾಗಿ ಇದ್ದಲ್ಲಿ ಷಡ್ವಾದಿ ಸರ ಸಮನಾಗಿ ಭಿತ್ತಿಯ ಚಿತ್ರದಂತೆ ಸುಳಿದೋರದ ಸಲಿಲದಂತೆ, ಕಲೆದೋರದ ಫಲದಂತೆ, ತ್ರಿವಿಧಕ್ಕಲ್ಲದೆ ತೂತಿನ ಬಲವಿಲ್ಲದೆ ಆತನನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅರಸು ಅರಸಿಯ ಕೂಡುವಾಗ ಅವರಂಗವ ಕಂಡವರುಂಟೆ? ಕೌಮುದಿಯ ಕುಂಡಲಿಯ ತಂದುದುಂಟೆ? ಚಂದನ ಗಂಧವ ತಂದಿರಲು ಸಂಚಾರದೊದಗು. ಮಿಂಚಿನವಳಿ, ಕಂಚಿನ ಕೂಟದಂತೆ ಆತ್ಮನ ಸಂಚಿತದಳಿವು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅವನಿಕ್ಕಿದ ಗಾಣಕ್ಕೆ ಮೂವರು ಹುದುಗು. ಉದಯ ಮಧ್ಯಾಹ್ನ ಅಸ್ತಮಯವೆಂಬ ಮೂರು ವೇಳೆಗೆ, ಅದ ತಿರುಗುವ ಎತ್ತು ಒಂದೆಯಾಯಿತ್ತು. ಒಬ್ಬ ಹಿಂಗಿದ ಇಬ್ಬರು ಹೊರುತ್ತಿದ್ದರು ಅತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಂಗವೆಂಬ ವಾಕುಳದ ಕುಂಭದಲ್ಲಿ ತೋರಿ ಅಡಗುವ ಮರೀಚಿಕಾ ಜಲವ ತುಂಬಿದಂತೆ. ಚಿತ್ತ ಸಾಳಿವನವೆಂಬ ತಂಡುಲ ತೊಳೆಯದೆ, ಥಳಿಸದೆ, ಕುಂಭದೊಳಗೆ ಹಾಕಿ ವಾಯುವಿನ ದೂಮ್ರದಿಂದ ಬೇಯಿಸಿ ಅದು ಬೆಂದುದಿಲ್ಲ. ಅದು ಮೂರು ಗುಂಡಿನ ಗುಣದಿಂದ ಗುಂಡಿನ ಚಂದ ತುಂಬಿಹ ಮಡಕೆಯಂತೆ. ಮತ್ತೊಂದರ ಇರವು ತಿರುಗುವ ಚಕ್ರದಗೊಂದಣದಂದದ ದ್ವಂದ್ವವ, ಹಿಂಗಿ ನಿಂದ ಕುಂದಿನಿರವು, ಕೂರಲಗಿನ ಬಾಯ ಧಾರೆಯಂತೆ ಉಭಯವ ಕೂಡಿಕೊಂಡು ನಿಂದ ಗುಂಡು. ಇದು ಬೇಯದು, ಮಡಕೆಯನೊಡೆ, ಜಲವ ತಡಹು, ತಂಡುಲವ ಚೆಲ್ಲು, ಮಾರುತನ ಬೆಂಕಿಯ ಕೆಡಿಸು, ಓಗರದೂಟದ ಬಿಡು, ಭವಸಾಗರದ ಸಾಧನೆಯನೆ ಗೈ, ಕಾಹುರದ ಕಮ್ಮಟವ ಪರರುವ ಬೋಧಿಸುವ ರಸನವ ಕೀಳು, ಕಿತ್ತ ಮತ್ತೆ ಇನ್ನರಿ. ಸಕಲೇಂದ್ರಿಯದ ಹುತ್ತದ ಹಾವ ಹಾಡಿ. ಮೊತ್ತದ ಮನೆ ವಿಕಾರದ ಚಿತ್ತದ ಹುಲಿಯ ಮುರಿ. ಭಕ್ತಿಗೆ ಸಹ ಕರ್ತುವ ಚಿತ್ತದಲ್ಲಿ ಅಚ್ಚೊತ್ತಿದಂತಿರು. ಸಚ್ಚಿದಾನಂದ ಹೃದಯಪೂರಿತನಾಗಿ ಬೆಚ್ಚಂತಿರು. ವಿರಳವಿಲ್ಲದೆ ಅವಿರಳನಾಗಿ ಎನಗೊಂದು ತೊಡುಗೆಯಿಲ್ಲ, ನಿನ್ನಡಿಯಲ್ಲಿ ಅಡಗಿದೆನಾಗಿ ನಿನ್ನ ಒಡಗೂಡುವ ಕಡೆಯಾವುದು? ಎನ್ನ ಕಾಯಕದ ಬಿಡುವಾವುದು? ಅಂದಾಡಿದ ಮಾತಿನ ಕಡಿವೆಂಗೆ ಬಂದ ಮೊಡತದ ನಗೆಯ ಕಾಯಕ ಸಂದಿತ್ತು. ನಿನ್ನಯ ಕೂಪಳ ಬಯಲಾಗಿ ಅಜಾತನೆ ಸಲಹು, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅವರಪ್ಪನ ಮಗಳ ಗಂಡನ ತಂದೆಯ ತಾಯ ತಂದವರ ಗಂಡನ ಹೆಂಡತಿಯ ಹೆತ್ತವಳ ಮಕ್ಕಳ ಮೂರಿ ತಲೆಗಡಿದವರ ಅಂದಿನ ನಂಟ ಬಂದ ನಾನು. ನೀಂ ಪಂದಿಯೊಳಗಿರ್ದ ಅಂದವ ತೋರಾ ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಗಸನ ಮುನಿಸು ಕತ್ತೆಯ ಸ್ನೇಹ, ಸರ್ಪನ ಮುನಿಸು ಕಪ್ಪೆಯ ಮೋಹ, ಶಬರನ ಸೊಪ್ಪುಡಿಗೆ ಪ್ರಭೆಯವನ ನಂಬುಗೆ, ಮೆರೆವಡಿಗನ ಮಾತು ಗುಡುಗಿನ ಮನೆ ಇಂತಿವು ಅಡಗಿಹ ಭೇದವನರಿ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಂಡದಿಂದ ಪಿಂಡ ಜನಿಸುವಾಗ ಅಂದಿಗಾರೊಡೆಯರು? ಪಿಂಡ ಹೊರಹೊಮ್ಮಿ ಮಂದಿರಗಳಲ್ಲಿ ಆಡುವಾಗ ಅಂದಿಗಾರೊಡೆಯರು? ಮಂದಿರವ ಬಿಟ್ಟು ಮರಣವಾಹಾಗ ಅಂದಿಗಾರೊಡೆಯರು? ಎಂದೆಂದಿಗೂ ನೀನೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಅಶ್ವತ್ಥವೃಕ್ಷದ ಪರ್ಣದ ಅಗ್ರದ ಬಿಂದುವಿನಂತೆ ಅಲ್ಪಸುಖಕ್ಕೆ ಮಚ್ಚಿ ಕುಕ್ಕರ ಆಸ್ತಿಯ ಕಚ್ಚಿ ತನ್ನಯ ಶೋಣಿತವ ಚಪ್ಪಿರಿವಂತೆ. ಉಚ್ಛೆಯ ಬಚ್ಚಲ ಕೊಚ್ಚೆಯ ಹಡಿಕೆಯ ಮುಚ್ಚಿಕೊಂಡಿಪ್ಪ ಕಕ್ಕುಲತೆಯಣ್ಣಗಳು ಕೇಳಿರೋ, ಅದು ಮತ್ರ್ಯದ ಹುದುಗು, ಚಿತ್ತದ ವಿರೋಧ, ಭುಕ್ತಿಯ ವಕ್ರ, ತಮದ ಪುಂಜ, ಕೌರುಕನಂಗ ಸೌಭೇದಿನ ಬೀಡು, ಮಲದ ಬಾಂಡ. ಭಾವದ ಭ್ರಮೆಯನರಿ, ಉರಿ ಫಳಕದಂತೆ ನೆರೆ ನಂಬಿರು ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ