ಅಥವಾ
(6) (7) (3) (0) (1) (2) (0) (0) (2) (0) (0) (2) (1) (0) ಅಂ (2) ಅಃ (2) (11) (0) (1) (0) (0) (1) (0) (4) (0) (0) (0) (0) (0) (0) (0) (5) (0) (2) (3) (2) (5) (0) (7) (3) (13) (0) (1) (0) (2) (3) (1) (0) (11) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಕಾಯದ ಕಣ್ಣಿನಲ್ಲಿ ನೋಡಿ ವಿಕಾರವಳಿದು ಸುಖಪಟ್ಟಣವ ಕಂಡೆ. ಆ ಪಟ್ಟಣದರಸಿಂಗೆ ಭಾವ ಕಾಲಿಲ್ಲ. ಪ್ರಧಾನಂಗೆ ಪಾರುಪತ್ಯಕ್ಕೆ ನುಡಿವಡೆ ಬಾಯಿಲ್ಲ. ತಳವಾರ ತಿರುಗುವುದಕ್ಕೆ ಕಣ್ಣಿಲ್ಲ. ಆ ಪಟ್ಟಣದಲ್ಲಿ ಮೂವರಿಗೆ ಕರ್ತನೊಬ್ಬ ಅರಸು. ಆ ಅರಸ ಕಣ್ಣಿನಲ್ಲಿ ಕಾಣಲಿಲ್ಲ, ಎಲ್ಲಿದ್ದಹರೆಂದು ಕೇಳಲಿಲ್ಲ. ಇದ್ದ ಠಾವಿಂಗೆ ಒಬ್ಬರೂ ಹೊದ್ದಲಿಲ್ಲ. ಅರಸಿನ ಆಜ್ಞೆ, ಬಲುಹ, ಓಲಗಕ್ಕೆ ತೆರಪಿಲ್ಲ. ಜೀವಿತಕ್ಕೆ ಅಡಹಿಲ್ಲ, ಎನ್ನ ಬಡತನವ ಇನ್ನಾರಿಗೆ ಹೇಳುವೆ? ಬಂಟರು ಸತ್ತರು, ಅರಸು ನಷ್ಟವಾದ. ಆ ಉಭಯದ ಬೇಧವ ನಾನರಿಯೆ, ನೀ ಹೇಳು. ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಂಗ ಮಾಸಿದಲ್ಲಿ ಜಲದೊಲುಮೆ; ಮನ ಮರೆದಲ್ಲಿ ಅರಿವಿನೊಲುಮೆ; ಈ ಉಭಯವು ಮರೆದಲ್ಲಿ ಮಹಾಶರಣರ ಸಂಗದೊಲುಮೆ, ಒಲುಮೆಯ ಒಲವರವ ನಿನ್ನಿ ನೀನರಿ, ಪುಣ್ಯಾರಣ್ಯದಹನ ಬ್ಥೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಂಗಲಿಂಗ ಸಂಬಂಧ ಶೈವಗುರು, ಸ್ಥಾವರಲಿಂಗ ಸಂಬಂಧ ಶೈವಗುರು, ಪಥಲಿಂಗ ಸಂಬಂಧ ಶೈವಗುರು, ಸಂಕಲ್ಪಲಿಂಗ ಸಂಬಂಧ ಶೈವಗುರು. ಪ್ರಾಣಲಿಂಗ ಸಂಬಂಧ ವೀರಶೈವ ಸಿದ್ಧಾಂತ ಗುರುವಾಗಬೇಕು. ಚತುರ್ವಿಧ ಶೈವನಾಸ್ತಿ:ಅವು ಸೂತಕಭಾವ; ಅವು ಜಗದ ವರ್ತಕದಲ್ಲಿ ಕಾಬ ನಿಲುವು; ಆಚಾರ್ಯರ ಭೇದ, ಪ್ರಾಣಕ್ಕೆ ಪಂಚಾಚಾರವ ಕೊಟ್ಟು, ಕಾಯದ ಗುಣವ ತ್ರಿವಿಧದಿಂದ ಶುದ್ಧಮಾಡಿ, ಕಾಯಕ್ಕೆ ಕ್ರೀ ಮನಕ್ಕೆ ಅರಿವು ಎಂದು ಭಾವಿಸಿ ಕೊಟ್ಟುದ್ದುಪ್ರಾಣಲಿಂಗ. ಆತನಿಹಪರದಲ್ಲಿ ಪರಿಣಾಮಿ, ಸದ್ಗುರು; ಆ ಭೇದವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಲಗನೇರಿ ಹುವ್ವ ಕೊಯಿದು, ಬಾವಿಯ ನುಂಗಿ ನೀರ ಕುಡಿದು, ಹಣ್ಣ ಹಾಕಿ ಮರನ ಮೆದ್ದವನಾರಯ್ಯ? ಹೆತ್ತವನ ಕೊಂದು ಅರಿಗಳ ಕೆಳೆಗೊಂಡು ಬದುಕಿದವನಾರೆಂಬುದ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅಣು ಇರುಹಿನ ಮರಿ ಬ್ರಹ್ಮನ ಅಂಡವನೂರಿ ವಿಷ್ಣುವಿನ ಪಿಂಡವ ನುಂಗಿತ್ತು, ಅದು ತನ್ನೊಡಲಿಗೆಯಿದದೆ ರುದ್ರನ ತೊಡೆಮುಡಿಯವಳ ಆತ ಸಹಿತಾಗಿ ನುಂಗಿತ್ತು. ಅದೇತರ ಸೂತ್ರವೆಂದು ಆತ್ಮನ ಭೇದವನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಅರ್ತಿಗಾರಿಕೆಯಲ್ಲಿ ಕೆಲಬರು ಮೆಚ್ಚಬೇಕೆಂದು ಮಾಡುವನ ಭಕ್ತಿ ಮಂಡೆಯ ಮೇಲೆ ಹೊತ್ತ ಸುರೆಯ ಲಚ್ಚಣಿಯಂತೆ; ಅದು ನಿಶ್ಚಯವಲ್ಲ. ಒಳಗಣ ಕಪಟ ಹೊರಗಣ ಬಣ್ಣ, ಆ ತೊಡಿಗೆಯ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ