ಅಥವಾ

ಒಟ್ಟು 8 ಕಡೆಗಳಲ್ಲಿ , 3 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ, ಕಂತುಹರನ ಧ್ಯಾನವ ಮಾಡಲು, ಆ ಹರ ಗುರುರೂಪವ ತಾಳ್ದು ಬಂದು, ತನ್ನ ಚಿಂತಿಸಿದ ಸುಜ್ಞಾನಿಗಳಿಗೆ, ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ, ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ, ಮೊದಲಾದ ಅನಂತ ಮುದ್ರೆಗಳ ಸಾಧಿಸಿ, ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ, ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ, ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ, ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ, ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ, ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು ಪರಿಪರಿಯ ಬೆರಗುಗಳ ತಿಳಿದು, ಇದೇ ನಿಜಬ್ರಹ್ಮವೆಂದು ಹೆಮ್ಮೆ ೈಸಿ, ಆಸೆವೊಡಿಯದೆ, ಕ್ಲೇಶ ಕಡಿಯದೆ, ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ ಮುಂದುಗಾಣದೇ ಹೋದರು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಆತ್ಮತತತ್ವ ವಸ್ತುವಾದಡೆ ನಾನಾ ಘಟದಲ್ಲಿ ಇರಲೇಕೆ? ಆ ಘಟ ವಸ್ತುವ ಗರ್ಭೀಕರಿಸಿದಲ್ಲಿ ಪಂಚಭೌತಿಕಕ್ಕೆ ಒಡಲಾಗಲೇಕೆ? ಹಿಡಿಯಬಾರದು, ಹಿಡಿದು ಬಿಡಬಾರದು. ಒಡಲು ದಿಟವೆಂದಡೆ ಅದು ಒಡೆಯ ಹಾಕುವ ಕುಂಭ. ಒಡಲೊಡೆಯ ದಿಟವೆಂದಡೆ ರೂಪಿಲ್ಲದ ಛಾಯ. ಅರಿದು ಮುಕ್ತಿಯ ತೆರನಾವುದು? ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಚರಲಿಂಗ ಗುರುಹಿರಿಯರ ಜರಿಯಬಾರದೆಂದು ಹೇಳುವಿರಿ. ಬಾಳೆಯೆಲೆಯಮೇಲೆ ತುಪ್ಪವತೊಡದಂತೆ, ನಿಮ್ಮ ಔದುಂಬಫಳ ಛಾಯ ನುಡಿಯ ತೆಗೆದಿಡಿರಿ. ಜಂಗಮಲಿಂಗ ಗುರುಹಿರಿಯರನರಸುವರೆ ಜ್ಞಾನಿಗಳು? ಅವರ ಕಾಯ್ದಿಪ್ಪ ತನು ಮನ ಭಾವ ವಿಕೃತಿಯನರಸುವರಲ್ಲದೆ. ಅದೇನು ಕಾರಣವೆಂದೊಡೆ: ತನು ಮನ ಭಾವವಿಡಿದಿರ್ಪ ಜನರನ್ನು ಒಂದು ವೇಳೆ ತಿಳಿಸಿಕೊಳ್ಳಬಹುದು; ಅಳಿದುಳಿದಂಗಲಿಂಗಸಂಬಂಧಿಗಳೆಂದು ನುಡಿದು ಅಳಿದಲ್ಲಿ ಉಳಿದರೆ ಅದು ಮಲದೇಹಿ, ಮರಳಿ ಶುದ್ಧವಾಗದು ನೋಡಾ. ಹೇಮ ಮೌಕ್ತಿಕದಂತೆ ಅರಿದಾಚರಿಸುವುದು ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಯಾಗಬೇಕಾದರೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಯ ಛಾಯ ಏನೂ ಇಲ್ಲದಂದು, ಕಾಲ ಕಲ್ಪಿತ ಏನೂ ಇಲ್ಲದಂದು, ಬ್ರಹ್ಮಾಂಡ ಪಿಂಡಾಂಡ ಏನೂ ಇಲ್ಲದಂದು, ಸ್ವಯಂಲೀಲಾ ಸಂಪರ್ಕಶಕ್ತಿ ಸೋಹಂಭಾವವಿಲ್ಲದೆ ತಾನೆಂಬೊ ಮಹಾಂತನಾಗಿರ್ದೆಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
-->