ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೃಥ್ವ್ಯಾದಿ ಪಂಚಭೂತಂಗು ಇದಕ್ಕೆ ವಿವರ: ಅಸ್ಥಿ ಚರ್ಮ ಮಾಂಸ ರೋಮ ಮಜ್ಜೆ ಇವೈದು ಪೃಥ್ವಿಯ ಅಂಶ. ಶುಕ್ಲ ಶೋಣಿತ ಶ್ಲೇಷ್ಮ ಪಿತ್ತ ರಕ್ತ ಇವೈದು ಅಪ್ಪುವಿನ ಅಂಶ. ಹಸಿವು ತೃಷೆ ನಿದ್ರೆ ಆಲಸ್ಯ ಸ್ತ್ರೀಸಂಗ ಇವೈದು ಅಗ್ನಿಯ ಅಂಶ. ಹವುದು ಕುಳ್ಳಿರುವುದು ಏಳುವುದು ಮೈಮುರಿವುದು ನಡೆವುದು ಈ ಐದು ವಾಯುವಿನ ಅಂಶ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯ ಆನಂದ ಇವೈದು ಆಕಾಶದ ಅಂಶ. ಇಂತೀ ಅಂಗ ಶುದ್ಧಂಗಳ ಬಿಟ್ಟು ಲಿಂಗಾಂಗವ ಮಾಡಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು
--------------
ಚನ್ನಬಸವಣ್ಣ
ಸತ್ಯಶುದ್ಧದಿಂ ಬಂದ ಪದಾರ್ಥವ ಭಯಭಕ್ತಿ ಕಿಂಕುರ್ವಾಣದಿಂ ಗುರುಲಿಂಗಕ್ಕೆ ತನುಮುಟ್ಟಿ ಅರ್ಪಿಸಿಕೊಂಬುದೇ ಶುದ್ಧಪ್ರಸಾದ. ನಾಮ ರೂಪ ಕ್ರಿಯೆ ಹಂಕೃತಿಯಳಿದು ಕರಣಾರ್ಪಿತದಿಂ ಶಿವಲಿಂಗಕ್ಕೆ ಮನಮುಟ್ಟಿ ಅರ್ಪಿಸಿಕೊಂಬುದು ಸಿದ್ಧಪ್ರಸಾದ. ಡಂಬು ಪ್ರಕಟ ಪ್ರಪಂಚು ಅಭ್ರಚ್ಛಾಯಯೆಂಬ ಚತುರ್ವಿಧಂಗಳಳಿದು ರಿಣಾತುರಿಯ ಮುಕ್ತ್ಯಾತುರಿಯಂಗಳನತಿಗಳೆದು ಸ್ವಯಾತುರಿಯದಿಂ ಜಂಗಮಲಿಂಗಕ್ಕೆ ತನುಮುಟ್ಟಿ ಸದ್ಭಾವದಿಂದರ್ಪಿಸಿಕೊಂಬುದು ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧಸಂಬಂಧವಾದುದೆ ಅಚ್ಚಪ್ರಸಾದ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಡಂಬು ಮಚ್ಚರ್ಯಕ್ಕೆ ಇಂಬುಗೊಡದಿರಬಲ್ಲಡೆ ಶರಣ. ಶಂಭುಪದಪದ್ಮಭಕ್ತಿನಂಬುಗೆವಿಡಿದು ಅಗಲದಿರಬಲ್ಲಡೆ ಶರಣ. ಸೂಸಲೀಯದೆ ಮನವ ಈಶಪದದಲ್ಲಿ ಮೀಸಲಾಗಿರಿಸಿಕೊಂಡಿರಬಲ್ಲಡೆ ಆ ಶರಣನ ಜಗದೀಶನೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿಷಡುವರ್ಗವೆಂಬ ಕರ್ಮಿಯ ಬಲಿಯೊಳಿಂಬು ಗುರು ನೀ ಮಾಡಲಿಬೇಡ ಗುಪ್ತದಿಂದಲೆನ್ನ ಕೂಡೆ. ಪದ :ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದ ಡಂಬು ಈ ಮಹಾಬಲೆಯೊಳಿಟ್ಟು ನೀ ಮುನ್ನಗಲಿದೆ ದಿಟ ತಾಮಸಗುಣವನಳಿದು ಆ ಮಹಾಜ್ಞಾನದೊಳುಳಿದು ಭೂಮಿಯೊಳಗಿಪ್ಪ ಗಣಸ್ತೋಮದ ಪದಕ್ಕೆ ನಮೋಯೆಂದು ಶರಣು. | 1 | ಕರಿಯ ಸೊಂಡಿಲ ಮುರಿದು ವ್ಯಾಘ್ರನ ಶಿರವನರಿದು ಉರಗನ ಹೆಡೆಯ ಮೆಟ್ಟಿ ಸಿಂಹನ ಉರಿಯೊಳಿಟ್ಟು ಮರೆಯ ಕಣ್ಣ ಕಳದು ಭಲ್ಲೂಕನ ಕರದು ಇರಬಲ್ಲಡಾತನೆ ಸತ್ಯ ಈ ಭುವನದೊಳಗೆ ನಿತ್ಯ. | 2 | ಪರಮನ ಲಿಂಗಮುಖವಾಗಿ ಸತ್ಯಸಂಗ ಶರಣ ನಿರ್ಮಲದೇಹಿ ಸರ್ವಗಣಕೆಲ್ಲ ಮೋಹಿ ಗುರು ಪಡುವಿಡಿ ಸಿದ್ಧವರಮಲ್ಲಿನಾಥನೊಳಿರ್ದು ಹೆರೆಹಿಂಗದಿಪ್ಪ ಜಾಣ ಮೂರುಲೋಕಪ್ರವೀಣ. | 3 |
--------------
ಹೇಮಗಲ್ಲ ಹಂಪ
ಅಯ್ಯಾ, ಎನಗೆ ಭಕ್ತಿಯುಂಟೆಂಬ ಮಾತೇ ಡಂಬು ನೋಡಯ್ಯಾ. ಎನಗಾ ಮಾತಿಂಗಧಿಕಾರವೆಲ್ಲಿಯದಯ್ಯಾ. ತಲೆಹುಳಿತ ನಾಯಿಗೆ ಉಚ್ಛಿಷ್ಟಾನ್ನ ಬಂದುದೆ ಭಾಗ್ಯವು. ಒಂದರೊಳಗೊಂದನರಿಯೆನಯ್ಯಾ, ಬಸವಪ್ರಿಯ ಕೂಡಲಚೆನ್ನ ಸಂಗಯ್ಯಾ.
--------------
ಸಂಗಮೇಶ್ವರದ ಅಪ್ಪಣ್ಣ
-->