ಅಥವಾ
(4) (1) (1) (0) (1) (0) (0) (0) (0) (1) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (2) (0) (0) (0) (0) (0) (0) (0) (1) (0) (2) (0) (1) (0) (0) (0) (3) (3) (0) (0) (0) (1) (1) (0) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ; ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು. ತೆರಹಿಲ್ಲದಭವ ನುಡಿಗೆಡೆಗೊಡನು; ಆತನ ಬಯಲಿಂಗೆ ಬೇಟಗೊಂಡೆನವ್ವಾ. ನಾನೇನ ಮಾಡುವೆನೆಲೆ ತಾಯೆ, ಮರೆದಡೆ ಎಚ್ಚರಿಸುವ ಕುರುಹಿಲ್ಲದ ಗಂಡನು. ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು.
--------------
ಸತ್ಯಕ್ಕ
ಹಿರಿಯತನಕ್ಕೆ ಪಥವೆ, ಬಾಣನ ಮನೆಯ ಬಾಗಿಲ ಕಾಯ್ವುದು ? ಮಹಂತತನಕ್ಕೆ ಪಥವೆ, ನಂಬಿಗೆ ಕುಂಟಣಿಯಾದುದು ? ಕರುಣಿತನಕ್ಕೆ ಪಥವೆ, ಸಿರಿಯಾಳನ ಮಗನ ಕೊಲುವುದು ? ದಾನಿತನಕ್ಕೆ ಪಥವೆ, ದಾಸನ ವಸ್ತ್ರವ ಸೀಳುವುದು ? ನಿಮ್ಮ ಹಿರಿಯತನಕ್ಕಿದು ಪಥವೆ, ಬಲ್ಲಾಳನ ವಧುವ ಬೇಡುವುದು ? ನಿಮ್ಮ ಗುರುತನಕ್ಕಿದು ಪಥವೆ, ನಾರಿಯರಿಬ್ಬರೊಡನೆ ಇಪ್ಪುದು ? ಶಿವಶಿವಾ ನಿಮ್ಮ ನಡವಳಿ ? ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ ?
--------------
ಸತ್ಯಕ್ಕ