ಎಲ್ಲಾ ಅಂತರಂಗ ತೃಪ್ತಿಯಾದಲ್ಲಿ,
ಮತ್ತತನವಿಪ್ಪುದು ಜಾಗ್ರದಲ್ಲಿ, ದೃಷಾ*ಂತದ ಸ್ವಪ್ನದಲ್ಲಿ.
ಛಾಯೆ ಮಾಯೆ ಸುಷುಪ್ತಿಯಲ್ಲಿ, ಬಿಂಬ ಛಾಯೆ ವಾಗ್ವಿಲಾಸಂಗಳಲ್ಲಿ,
ಕೇಳಿ ಬಾವಜ್ಞಾನದಿಂದರಿದು, ಮಹಾಜ್ಞಾನದಿಂದ ಕಂಡು,
ದಿವ್ಯಜ್ಞಾನದಿಂದ ಪರಿಪೂರ್ಣವಾಗಿ, ನೋಟ ಕೂಟವಿಲ್ಲದೆ,
ಕೂಟಕ್ಕೆ ಅಂಗವಿಲ್ಲದೆ, ಅಂಗಕ್ಕೆ ಆತ್ಮನಿಲ್ಲದೆ,
ಆತ್ಮಂಗೆ ಭಾವವಿಲ್ಲದೆ, ಭಾವಕ್ಕೆ ಭಾವವಿಲ್ಲದೆ ನಿಂದುದು,
ಚಿದ್ಭಾವವಿರಹಿತ ವಸ್ತುವದು, ಧರ್ಮೇಶ್ವರಲಿಂಗದ ಗೊತ್ತು.