ಅಥವಾ
(2) (1) (1) (0) (1) (0) (0) (0) (0) (0) (0) (2) (2) (0) ಅಂ (0) ಅಃ (0) (0) (0) (0) (0) (0) (1) (0) (0) (0) (0) (0) (0) (0) (0) (0) (0) (0) (0) (0) (1) (0) (0) (1) (0) (0) (0) (0) (0) (0) (0) (1) (0) (0) (2) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಶರಣನೊಳಗಡಗಿರ್ದ ಐಕ್ಯ, ಐಕ್ಯನೊಳಗಡಗಿರ್ದ ಗುರು. ಗುರುವಿನೊಳಗಡಗಿರ್ದ ಲಿಂಗ, ಲಿಂಗದೊಳಗಡಗಿರ್ದ ಜಂಗಮ. ಜಂಗಮದೊಳಗಡಗಿರ್ದ ಗುರು. ನಿತ್ಯಲಿಂಗಾರ್ಚನೆ, ಅನಿತ್ಯಲಿಂಗಾರ್ಚನೆಯೊಳಗಡಗಿರ್ದ ನಿತ್ಯನಿರಾಲಂಬ ಮಹಾ ಆಕಾಶ. ಇಂತೀ ಎಲ್ಲವೂ ಅಡಿಗಿರ್ದವು, ಆ ನಿರಾಲವೆಂಬ ದೇಗುಲದೊಳಗೆ. ಆ ದೇಗುಲವ ಹೊಕ್ಕು, ಬಾಗಿಲವ ದಾಂಟಿ, ಮೇಗಳ ಶಿಖರವ ಹತ್ತಿ ನೋಡಲಾಗಿ, ಬೆಳಗು ನಿಬ್ಬೆಳಗು. ನಿಃಕಲ ನಿರ್ಲೇಪವಾದ ಲಿಂಗೈಕ್ಯನ ಪ್ರಸಾದಕ್ಕೆ ಆನು ಹಾರೈಸಿ ಬಂದಿರ್ದೆ ಕಾಣಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ