ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹೊನ್ನು ಹೆಣ್ಣು ಮಣ್ಣು ಬಿಡಿಸದ ಗುರುವಿನ ಉಪದೇಶವನೊಲ್ಲೆ,ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,ತಾಮಸಭ್ರಮೆಯನಳಿಯದ ಜಂಗಮಕ್ಕೆ ದಾಸೋಹವ ಮಾಡೆ,ಪರಮಾನಂದವಲ್ಲದ ಪಾದೋದಕವ ಕೊಳ್ಳೆ,ಪರಿಣಾಮವಲ್ಲದ ಪ್ರಸಾದವನುಣ್ಣೆ,ಆನೆಂಬುದನಳಿಯದ ಈಶ್ವರೀಯ ವರದ ಮಹಾಲಿಂಗನನೇನೆಂದೆಂಬೆ!