ಅಥವಾ
(19) (3) (1) (1) (3) (0) (0) (0) (0) (1) (1) (0) (0) (0) ಅಂ (10) ಅಃ (10) (19) (0) (9) (1) (0) (1) (0) (7) (0) (0) (0) (0) (0) (0) (0) (8) (0) (0) (3) (4) (11) (0) (4) (3) (9) (0) (3) (0) (1) (8) (2) (0) (6) (3) (0)

ಪದದಿಂದ ಪ್ರಾರಂಭವಾಗುವ ವಚನಗಳು:

ವಾಗದ್ವೈತದಲ್ಲಿ ನಿಂದು, ಸ್ವಯಾದ್ವೆ ೈತವನರಿಯಬೇಕು. ಆ ಗುಣ ಸ್ವಯವಾಗಿ ನಿಂದು, ಗುರುಮೂರ್ತಿಯಾಗಬೇಕು. ಗುರುಮೂರ್ತಿ ನಿಶ್ಚಯವಾಗಿ ನಿಂದು, ಚರಲಿಂಗದಲ್ಲಿ ನಿಃಪತಿಯಾಗಿ ನಿಂದುದು ದ್ವೈತ. ಎರಡಳಿದು ಒಂದೆನಿಸಿ ನಿಂದುದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.
--------------
ಶಿವಲೆಂಕ ಮಂಚಣ್ಣ
ವ್ಯಾಧನ ಚಿತ್ತದಂತೆ, ಸಾಧನೆಯಯ್ಯನ ಮೈ ಲಾಗಿನಂತೆ, ಭೇದಿಸಿಯೈದುವ ಪನ್ನಗನಂತೆ, ಇಡುವ ತೊಡುವ, ಕೊಡುವ ಕೊಂಬಲ್ಲಿ, ಲಿಂಗಪ್ಪನ ಒಡಗೂಡಬೇಕು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ, ಬೆಚ್ಚಂತಿರಬೇಕು.
--------------
ಶಿವಲೆಂಕ ಮಂಚಣ್ಣ
ವಟವೃಕ್ಷದ ಘಟದ ಮಧ್ಯದಲ್ಲಿ ಒಂದು ಮಠವಿಪ್ಪುದು. ಆ ಮಠಕ್ಕೆ ಹಿಂದೆಸೆಯಿಂದ ಬಂದು, ಮುಂದಳ ಬಾಗಿಲ ತೆಗೆದು, ವಿಚ್ಛಂದದ ಕೋಣೆಯ ಕಂಡು, ಕಿಡಿ ನಂದದೆ ದೀಪವ ಕೊಂಡು ಹೊಕ್ಕು, ನಿಜದಂಗದ ಓಗರದ ಕುಂಭವ ಕಂಡು, ಬಂಧವಿಲ್ಲದ ಓಗರವನುಂಡು, ಸದಮಲಲಿಂಗವೆ ತಾನಾದ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ವಿಶ್ವಮಯ ರೂಪು ನೀನಾಗಿ, ಅರಿವ ಆತ್ಮ ಒಬ್ಬನಲ್ಲಿಯೇ ಅಡಗಿದೆಯಲ್ಲಾ! ಬೀಗದ ಎಸಳು ಹಲವಾದಡೇನು, ಒಂದು ದ್ವಾರದಲ್ಲಿ ಅಡಗಿ ಓತಂತೆ ಇಪ್ಪ ತೆರ ನೀನಾಗಿ, ಭಕ್ತರ ಚಿತ್ತದಲ್ಲಿ ನಿಶ್ಚಯನಾದೆ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆ.
--------------
ಶಿವಲೆಂಕ ಮಂಚಣ್ಣ
ವ್ರತಸ್ಥನಾದಲ್ಲಿ, ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಂಗಳಲ್ಲಿ ತಲೆದೋರದೆ, ತನ್ನ ಆತ್ಮ ಸತಿ, ಲಿಂಗ ಪುರುಷನಾಗಿ, ತನ್ನ ಸುಕಾಯಕದಿಂದಾದ ದ್ರವ್ಯಂಗಳ ಗುರುಲಿಂಗಜಂಗಮದ ಮುಂದಿಟ್ಟು ಅರ್ಪಿತವಹನ್ನಕ್ಕ, ದೃಕ್ಕು ತುಂಬಿ ನೋಡಿ, ಮನದಣಿವನ್ನಕ್ಕ ಹರುಷಿತನಾಗಿ, ಮಿಕ್ಕ ಶೇಷವ, ಇಷ್ಟಪ್ರಾಣಲಿಂಗಕ್ಕೆ ತೃಪ್ತಿಯ ಮಾಡಿಪ್ಪ ಮಹಾಭಕ್ತಂಗೆ, ಸಂಸಾರವೆಂಬ ತೊಟ್ಟು ಹರಿಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ವ್ರತವೆಂಬ ನಾಮಕ್ಕೆ ಒಳಗಾಯಿತ್ತು.
--------------
ಶಿವಲೆಂಕ ಮಂಚಣ್ಣ
ವೇದ ಅಪರವನರಸಿತ್ತು, ಪುರಾಣ ಪುಣ್ಯವ ಬಯಸಿತ್ತು. ಶಾಸ್ತ್ರ ಗೆಲ್ಲ ಸೋಲಕ್ಕೊಳಗಾದಲ್ಲಿ, ಶ್ರುತಿ ನಾದದೊಳಗೆ ಸಿಲ್ಕಿತ್ತು. ನಾದ ಶ್ರುತಿ ಬಿಂದುವಿನಲ್ಲಿ ನಿಂದು ಗೋಳಕಾಕಾರವಾದಲ್ಲಿ, ತ್ರಿವಿಧಕ್ಕೆ ಹೊರಗಾಯಿತ್ತು. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ಸ್ವಯಂಭುವಾದ.
--------------
ಶಿವಲೆಂಕ ಮಂಚಣ್ಣ
ವ್ರತಾಚಾರವ ಹಿಡಿದು ಬಿಟ್ಟಲ್ಲಿ, ಗುರುವಾದಡೂ ಪರಿಹರಿಸಬಾರದು. ಲಿಂಗವಾದಡೂ ಪರಿಹರಿಸಬಾರದು, ಜಂಗಮವಾದಡೂ ಪರಿಹರಿಸಬಾರದು. ರತ್ನದ ಗುಂಡೆಂದಡೆ, ಶಿರದ ಮೇಲೆ ಹಾಕಿದಡೆ ಒಡೆಯದೆ ? ನೀನೊಡೆಯನಾದಡೂ ಆ ಲೆಂಕನಾದಡೂ ಈ ಗುಣವಡಗಿಯಲ್ಲದೆ, ಮೃಡಶರಣರ ಸಂಗಕ್ಕೊಳಗಲ್ಲ. ಅಂಗದ ಮಲಿನವ, ಕೈ ಹಿಂಗಿ ಒರಸಿದಡೆ ಭಂಗವುಂಟೆ ? ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವಾದಡೂ ಆಗಲಿ, ಲೆಂಕನ ಬಿನ್ನಹಕ್ಕೆ ಸಂಕಲ್ಪವಿಲ್ಲ.
--------------
ಶಿವಲೆಂಕ ಮಂಚಣ್ಣ
ವಾಸದ ದೀಪಕ್ಕೆ ವಾಯು ವಿರೋಧವಲ್ಲದೆ ಮಹಾಹೇತುವಿನ ವಹ್ನಿಗೆ ಅದು ಪ್ರೀತಿಯ ಸಂಗ. ನೀತಿಯಲ್ಲಿ ನಡೆವನ ವಿರಕ್ತಿ, ಭಕ್ತಿ ಕುಲ ಅಜಾತಂಗೆ ಸಂಗ. ಮಿಕ್ಕಾದ ದೂಷಣದ ಅಪಸರೆಯ ಮತ್ರ್ಯರ ವಿರೋಧ. ಇಂತೀ ದ್ವಯ ಭೇದದಲ್ಲಿ ಅರಿದು ನಿಂದ ಪರಮಪರಿಣಾಮಿಗೆ ಸ್ತುತಿ ನಿಂದೆಯೆಂಬುದಿಲ್ಲ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದಲ್ಲಿ ಸ್ವಯಂಭುವಾದವಂಗೆ.
--------------
ಶಿವಲೆಂಕ ಮಂಚಣ್ಣ