ಅಥವಾ
(7) (1) (4) (0) (0) (0) (0) (0) (0) (0) (0) (0) (0) (0) ಅಂ (1) ಅಃ (1) (0) (0) (1) (1) (0) (1) (0) (0) (0) (0) (0) (0) (0) (0) (0) (1) (0) (0) (0) (3) (11) (0) (0) (0) (2) (0) (0) (0) (0) (2) (5) (0) (3) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಮತ್ತಂ, ಅಲ್ಲಿಂದ ಲಿಂಗಮೂರ್ತಿಯ ಕರಸ್ಥಲಕ್ಕೆ ಬಿಜಯಂಗೈಸುವ ವಿವರ : ಲಿಂಗಮಸ್ತಕದಲ್ಲಿ ಅಂಗುಷ*ವನ್ನಿಟ್ಟು, ಆಧಾರದಲ್ಲಿ ಅನಾಮಿಕ ಮಧ್ಯಾಂಗುಲವ ಮಡುಗಿ, ಕನಿಷ*ತರ್ಜನಿಗಳ ಎಡಬಲಕೆ ನಿಲ್ಲಿಸಿ, ಲಿಂಗಮೂರ್ತಿಯ ಸಾವಧಾನಭಕ್ತಿಗಳಿಂದ ವಾಮಕರಸ್ಥಲ ಪಾಣಿತಾಣಕ್ಕೆ ಬಿಜಯಂಗೈಸಿ, ಆ ಲಿಂಗದೇವನ ಸಮರಸಾನಂದ ನಿಜಾನುಭಾವದಿಂದ ಹನ್ನೆರಡುವೇಳೆ ಜಿಹ್ವೆಪ್ರಕ್ಷಾಲನಂಗೆಯ್ಸಿ, ದ್ವಾದಶಾಂಗುಲ ಅಷ್ಟಾಂಗುಲ ಷಡಂಗುಲದೊಳಗೆ ಮಧುರ ಒಗರು ಖಾರ ಆಮ್ಲ ಕಹಿ ಮೊದಲಾದ ಕಾಷ*ದೊಳಗೆ ಅಯೋಗ್ಯವಾದ ಶುಷ್ಕಕಾಷ*ವಂ ಬಿಟ್ಟು, ಯೋಗ್ಯವಾದಂಥಾದ್ದರೊಳಗೆ ದೊರೆದಂಥಾದ್ದೊಂದು ಕಾಷ*ವನು ಆ ಪಾದೋದಕಸ್ಪರಿಶನದಿಂದೆ ಪವಿತ್ರವೆನಿಸಿ, ಜಂಗಮಕ್ಕೆ ಕೊಟ್ಟು ತಾ ಕೊಂಡಂಥಾದ್ದೆ ಪ್ರಸಾದವೆನಿಸುವುದು. ಆ ಪ್ರಸಾದವನ್ನು ಲಿಂಗಸ್ಪರಿಶನದಿಂದೆ ದಂತಪಂಕ್ತಿಗಳ ತೀಡಿ, ಹಸ್ತಾಂಗುಲಿ ಪಾದಾಂಗುಲಿಗಳಂ ತೀಡಿದ ಮೇಲೆ ಒಡೆದು ಎರಡು ಭಾಗವ ಮಾಡಿ ಜಿಹ್ವೆಯ ಪವಿತ್ರವಾಗಿ ಹೆರೆದು, ಆ ನಿರ್ಮಾಲ್ಯವ ನಿಕ್ಷೇಪಸ್ಥಲದಲ್ಲಿ ಹಾಕಿ, ಮುಖಮಜ್ಜನವ ಮಾಡಿ, ಬಚ್ಚಬರಿಯಾನಂದಲೋಲಾಬ್ಧಿಯಲ್ಲಿರ್ಪುದೆ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಮುಕ್ತಿಗೆ ನಿಜಮಂದಿರವಾಗಿ ಸಾಕಾರದ ಲೀಲೆಯಿಂದ ಚರಿಸುವ ನಿಲುಕಡೆಯೆಂತೆಂದೊಡೆ : ಹೃತ್ಪೀಠ ಏಕಾಂತವಾಸವಾದ ಭಾವಾಪುರದ ನಿಜಾಲಯದಿಂದ ಗಣಸಮ್ಮೇಳದ ನೆನಹುದೋರಿ, ಚಿನ್ಮಯಲೀಲೆಯಿಂ ಒರ್ವನೆ ಹೊರಟು, ಕರಣಾಪುರದ ಚಿದ್ರೂಪಮೂರ್ತಿ ವಿಶ್ವಕುಟುಂಬ ಚಿದಾದಿತ್ಯನೊಡಗೂಡಿ, ಆತನ ಕರಕೊಂಡು, ಅಲ್ಲಿಂದ ಕಾಯಪುರಕ್ಕೆ ಬಂದು, ಚಿತ್ಸೂರ್ಯ ಚಂದ್ರಬೀದಿಗಳೆಂಬ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಾಲ್ಕು ಕವಾಟವ ತೆಗೆದವರ ಚೌಕಮಧ್ಯದಲ್ಲಿ ನಿಂದಾಕ್ಷಣವೆ ಪರನಾದ ಬಿಂದು ಕಳೆಗಳೆಂಬ ಮೂಲಮಂತ್ರಧ್ಯಾನಾರೂಢನಾಗಿ, ಪರದೆಯ ತೆಗೆದು ಸದ್ರೂಪಮೂರ್ತಿ ಚಿದ್ಘನಮಹಾನಿಜೇಷ*ಲಿಂಗದಲ್ಲಿ ಕ್ರಿಯಾದೃಷ್ಟಿನಷ್ಟ. ಅನಾದಿ ಗುರುಲಿಂಗಜಂಗಮ ಪ್ರಮಥಗಣಸಮ್ಮೇಳವ ಸ್ತೋತ್ರಂಗೈದು, ಮಹದರುವೆಂಬ ಸದ್ಭಕ್ತಿರಸದೋರಿ ಹರುಷಾನಂದಶರಧಿ ಮೇರೆದಪ್ಪಿದಂತೆ, ಹರಶರಣಗಣಾರಾಧ್ಯರಿಗೆ ಕರ ಶಿರ ಮನ ಬಾಗಿ ಶರಣು ಹೊಕ್ಕು, ಭೃತ್ಯಾಚಾರಿಯಾಗಿ ಘನಮನವೇದ್ಯತ್ವದಿಂದ ಸ್ಥೂಲ-ಸೂಕ್ಷ್ಮ-ಕಾರಣಾಚಮನಗಳೊದಗಿದಂತೆ ವಿಸರ್ಜನಂಗೈದು, ಉದಕವ ಬಳಸಿ, ನಿರ್ಮಲಚಿತ್ತದಿಂದ ಪಾದೋದಕ ಲಿಂಗೋದಕಂಗಳಲ್ಲಿ ಮುಖಮಜ್ಜನವ ಮಾಡಿ, ಶುದ್ಧಾಸನದೊಳ್ ಮೂರ್ತಿಗೊಂಡು, ಕ್ರಿಯಾಭಸಿತ ಪತ್ರಿ ಪುಷ್ಪ ಧೂಪ ದೀಪಾರತಿ ಮೊದಲಾದ ಪರಿಪೂರ್ಣ ದ್ರವ್ಯಗಳೊದಗಿದಂತೆ ಲಿಂಗಾರ್ಚನೆ ಜಪಕ್ರಿಯೆಗಳ ಸಮರ್ಪಣವಮಾಡಿ, ತನ್ನ ತಾನೆ ಬೆಳಗುವಾತ ನಿರವಯಪ್ರಭು ಮಹಾಂತ ತಾನೇ ನೋಡಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ