ಅಥವಾ
(1) (0) (0) (0) (0) (0) (0) (0) (0) (0) (0) (0) (0) (0) ಅಂ (0) ಅಃ (0) (1) (0) (1) (0) (0) (0) (0) (0) (0) (0) (0) (0) (0) (0) (0) (1) (0) (0) (1) (0) (0) (0) (1) (0) (0) (0) (0) (0) (0) (0) (0) (0) (0) (1) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಕಾಮ ಸನ್ನಿಧನಾಗಿ ತಾ ಚೆಲುವನಾದಡೆ ಕಾಮಿನೀಜನವೆಲ್ಲಾ ಮೆಚ್ಚಬೇಕು. ದಾನಗುಣದವನಾಗಿ ಕರೆದೀವನಾದಡೆ ಯಾಜಕಜನವೆಲ್ಲಾ ಮೆಚ್ಚಬೇಕು. ವೀರನಾದಡೆ ವೈರಿಗಳು ಮೆಚ್ಚಬೇಕು. ಖೂಳನಾದಡೆ ತನ್ನ ತಾ ಮೆಚ್ಚಿಕೊಂಬ. ಎನ್ನ ದೇವ ತೆಲುಗೇಶ್ವರನಲ್ಲಿ ತಾನು ಭಕ್ತನಾದಡೆ ದೇವರು ಮೆಚ್ಚಿ ಜಗವು ತಾ ಮೆಚ್ಚುವದು.
--------------
ತೆಲುಗೇಶ ಮಸಣಯ್ಯ