ಲ ಪದದಿಂದ ಪ್ರಾರಂಭವಾಗುವ ವಚನಗಳು:
ಲಿಂಗವೆನ್ನೆ ಲಿಂಗೈಕ್ಯವೆನ್ನೆ.ಸಂಗವೆನ್ನೆ ಸಮರಸವೆನ್ನೆ.ಆಯಿತ್ತೆನ್ನೆ ಆಗದೆನ್ನೆ, ನೀನೆನ್ನೆ.ಚಿಕ್ಕಯ್ಯಪ್ರಿಯ ಸಿದ್ಧಲಿಂಗಏನೆಂಬುದಕ್ಕೆ ಮುನ್ನವೆ ಇಲ್ಲ, ನಿಲ್ಲು[ಮಾಣು]
ಲಿಂಗ ಜಂಗಮ, ಜಂಗಮ ಲಿಂಗವೆಂಬ ನಿಂದೆಯ ಮಾತುಇಂತು ನೋಡಾ!ಅಂದಂದಿಗೆ ಬರು ಶಬ್ದವಯ್ಯಾ,ಉಭಯಕುಳ ಲಿಂಗವಿಡಿದಾಡುವವರಿಗೆಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ.
ಲೀಲೆಗೆ ಹೊರಗಾದ ಲಿಂಗವೆ ಬಾರಯ್ಯಾ,ಎನ್ನ ಅಂಗದೊಳಗಾಗು.ಶ್ರುತ ದೃಷ್ಟ ಅನುಮಾನದಲ್ಲಿ ನೋಡುವವರಿಗೆಲ್ಲಕ್ಕೂ ಅತೀತವಾಗು.ಆಗೆಂಬುದಕ್ಕೆ ಮುನ್ನವೆ ಆ ಗುಂಡುಕಾಯದ ಕರಸ್ಥಲದಲ್ಲಿ ನಿರ್ಭಾವವಾಗಿ,ಕಾಯವಡಗಿ, ಭಾವವೆಂಬ ಬಯಲಾಯಿತ್ತು.ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂಬುದಕ್ಕೆಮುನ್ನವೆ.
ಲಿಂಗದಿಂದಲಾದ ಕಾಯವ ಹಿಂಗಿ ಹೋಹ ತೆರನಿನ್ನೆಂತೊ!ಅಳಿಯಲಾಗದು ಕಾಯವ, ಉಳಿಯಲಾಗದು ಪ್ರಾಣವ.ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲವೆಂಬ ಭಂಗ ಹಿಂಗದಲ್ಲಾ.