ಹ ಪದದಿಂದ ಪ್ರಾರಂಭವಾಗುವ ವಚನಗಳು:
ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿಒಂದು ಠಾವಿನಲ್ಲಿ ನದಿ ನಾಮವಾಯಿತ್ತು.ನಾನಾಭಾವಂಗಳಲ್ಲಿ ನೊಂದು ಬಂದ ಜೀವಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿಪರಮನಾಯಿತ್ತು.ಪ್ರಕಾಶವ ಕಂಡು ಕಾಲಾಂತಕ ಭೀಮೇಶ್ವರಲಿಂಗವೆಂಬ ನಾಮವಾಯಿತ್ತು.
ಹುಸಿದು ಮಾಡಿದವರುಂಟು.ಅಸಿಯಲ್ಲಿ ದೆಸೆಗೆಡಿಸಿ ಮಾಡಿದವರುಂಟು.ಪಶುಗಳ ಕೊಂದು ಪಿಸಿತವ ಮಾರಿ ಮಾಡಿದವರುಂಟು.ಅದು ತನ್ನಯ ಅಸುವಿಂಗಲ್ಲದೆ,ಅದು ತನ್ನಯ ಶಿಶುವಿಂಗಲ್ಲದೆ,ಅದು ತನ್ನಯ ವಿಷಯದ ಲಂಪಟದ ಶಕ್ತಿಗಲ್ಲದೆದೇವಂಗೆಂದು ಕುರಿತು ಆವ ಕಾಯಕವ ಮಾಡಿದಡೂಕಾಲಾಂತಕ ಭೀಮೇಶ್ವರಲಿಂಗಕ್ಕೆ ಅರ್ಪಿತವು.