ಅಥವಾ
(9) (5) (2) (1) (1) (0) (1) (0) (4) (0) (0) (2) (0) (0) ಅಂ (1) ಅಃ (1) (5) (0) (2) (0) (0) (2) (0) (0) (0) (0) (0) (0) (0) (0) (0) (2) (0) (3) (0) (7) (2) (0) (5) (2) (5) (0) (1) (0) (0) (0) (0) (0) (2) (6) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗಾಂಧಾರಿ ಮಾಂಧಾರಿಯೆಂಬ ಹೊತ್ತಿನಣತೆ ರಟ್ಟೆಯರೆಂಬರರಿವು ಮಲುಹಣ ಮಲುಹಣ ನಿಮಗೆಂತು ಬಲ್ಲೆ, ಎಮಗೆಂತು ಅರಿಯೆ, ಮಲುಹಣ, ಮನೆಯವರು ಬರಲೀಯರು, ಅನ್ನವನು ಬಿಡಲಾರೆ. ದೇವರಲ್ಲಿಗೆ ಹೋಗಿ ಬೇಡಿಕೊಳ್ಳೊ. ಮಲುಹಣ, ಅಬುಜಮುಖಿ ಲಂಪಟ ಮಹಾಲಿಂಗ ಗಜೇಶ್ವರ ನಿಮಗೆಂತು ಬಲ್ಲೆ ಎಮಗೆಂತರಿಯನೋ.
--------------
ಗಜೇಶ ಮಸಣಯ್ಯ
ಗಿಡ ಮರದ ಕುರುಬಿತ್ತಿಯ ಜವ್ವನದಂತೆ ನುಡಿಯಲರಿಯದ ಮುಗ್ಧೆಯಾಗಿರ್ದೆನವ್ವಾ. ಹಗಲನರಿಯದ ಜಕ್ಕವಕ್ಕಿಯಂತೆ ಮನ ಬಯಸುತ್ತಲಿರ್ದೆನವ್ವಾ. ಹಲವು ಕಾಲ ಎಲವದಮರನ ಸಾರಿರ್ದ ಗಿಳಿಯಂತಾದೆನವ್ವಾ. ಇಂದು ಮಹಾಲಿಂಗ ಗಜೇಶ್ವರದೇವನ ನೆರೆಯಲರಿಯದೆ ಇವರೆಲ್ಲರ ವಿಧಿಯ ಹೊತ್ತೆನವ್ವಾ.
--------------
ಗಜೇಶ ಮಸಣಯ್ಯ