ಕಂಬದ ಮಾರಿತಂದೆ

ಕಾಯದಿಂದ ಸತ್ಕ್ರೀಯ ಕಂಡೆ.
ಸತ್ಕ್ರೀಯಿಂದ ಸದ್ಭಾವವ ಕಂಡೆ.
ಸದ್ಭಾವದಿಂದ ನಿಮ್ಮ ನಿಜಮೂರ್ತ್ಲಿಯ ಕಂಡೆ.
ನಿಮ್ಮ ನಿಜಮೂರ್ತಿಯಿಂದ
ಸ್ವಾನುಭಾವವಳವಟ್ಟುದ ಕಂಡೆನಯ್ಯಾ.
ಸ್ವಾನುಭಾವಜ್ಞಾನದಿಂದ ಅಂಗಕರಣೇಂದ್ರಿಯ
ಸೂತಕಪಾತಕಕ್ಕೆ ಹೊರಗಾದೆನಯ್ಯಾ ಕದಂಬಲಿಂಗವೆ,
ನೀವೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಕಾರಣ,
ನಿಮ್ಮನೆನ್ನ ಸರ್ವಾಂಗದಲ್ಲಿ ಕಂಡೆನಯ್ಯಾ.
Back Delete