ಮುಕ್ತಾಯಕ್ಕ

ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ ?
ಷಡುವರ್ಣರಹಿತಂಗೆ ಬಣ್ಣವುಂಟೆ ?
ಕಡಲದಾಂಟಿದವಂಗೆ ಹರುಗೋಲುಂಟೆ ?
ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ ?
ಒಡಲಿಲ್ಲದವಂಗೆ ಒಡವೆಯುಂಟೆ ?
ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ ?
Back Delete