ಬಸವಣ್ಣ

‍ಋಣ ತಪ್ಪಿದ ಹೆಂಡಿರಲ್ಲಿ
ಗುಣ ತಪ್ಪಿದ ನಂಟರಲ್ಲಿ
ಜೀವವಿಲ್ಲದ ದೇಹದಲ್ಲಿ ಫಲವೇನೋ?
ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ?
ಕಳಿದ ಹೂವಿನಲ್ಲಿ ಕಂಪನು
ಉಳಿದ ಸೊಳೆಯಲ್ಲಿ ಪೆಂಪನು
ಕೊಳೆಚೆನೀರಿನಲ್ಲಿ ಗುಣವನರಸುವಿರಿ!
ಮರುಳೆ ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ
Back Delete