ಅಥವಾ

ಒಟ್ಟು 50 ಕಡೆಗಳಲ್ಲಿ , 19 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರಿದುಂಬಿ ಮರದ ಮೂಲಗೂಡಿನಲ್ಲಿರುವ ಕರಿಕಾಗಿಪುಚ್ಚದ ಗಾಳಿಯಲ್ಲಿ ಮೂರುಲೋಕ ಅಳಿಯುವುದ ಕಂಡೆ. ಗರ್ಭದಲ್ಲಿ ಹಲವು ಲೋಕದ ಪ್ರಾಣಿಗಳ ಶಿರದಲ್ಲಿ ಮಾಣಿಕ ಇರುವುದ ಕಂಡೆ. ಗಾಳಿಯ ನಿಲ್ಲಿಸಿ ಪುಚ್ಚತೆರೆದು, ಹೊಟ್ಟೆಯೊಡೆದು, ಹಕ್ಕಿಯ ಕೊಂದು ಶಿರವ bs್ಞೀದಿಸಿದಲ್ಲದೆ, ಆ ಮಾಣಿಕವು ಆರಿಗೂ ಸಾಧ್ಯವಾಗದು. ಆ ಮಾಣಿಕವು ಸಾಧ್ಯವಾಗದಿರ್ದಡೆ ಭವಹಿಂಗದು ಮುಕ್ತಿದೋರದು, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶರಣು ಶರಣಾರ್ಥಿ ಲಿಂಗವೇ ಹೊನ್ನು ಹೆಣ್ಣು ಮಣ್ಣು ಬಿಟ್ಟಾತನೇ ವಿರಕ್ತನೆಂದು ವಿರಕ್ತದೇವರೆಂದು ಬಣ್ಣವಿಟ್ಟು ಬಣ್ಣಿಸಿ ಕರೆವರಯ್ಯ. ಆವ ಪರಿ ವಿರಕ್ತನಾದನಯ್ಯ ಗುರುವೇ? ಹೊನ್ನೆಂಬ ರಿಪುವು ಚೋರರ ದೆಸೆಯಿಂದ ಶಿರಚ್ಛೇದನವ ಮಾಡಿಸಿ ನೃಪರಿಂ ಕೊಲಿಸುತಿಪ್ಪುದು. ಹೆಣ್ಣೆಂಬ ರಕ್ಕಸಿ ಲಲ್ಲೆವಾತಿಂದ ಗಂಡನ ಮನವನೊಳಗುಮಾಡಿಕೊಂಡು ಸಂಸಾರಸುಖಕ್ಕೆ ಸರಿಯಿಲ್ಲವೆನಿಸಿ ಸಿರಿವಂತರಿಗಾಳುಮಾಡಿ ಇರುಳು ಹಗಲೆನ್ನದೆ ತಿರುಗಿಸುತಿಪ್ಪಳು. ಮಣ್ಣೆಂಬ ಮಾಯೆ ತನ್ನಸುವ ಹೀರಿ ಹಿಪ್ಪೆಯ ಮಾಡಿದಲ್ಲದೆ ಮುಂದಣಗುಣವ ಕೊಡದು. ಇವ ಬಿಟ್ಟಾತ ವಿರಕ್ತನೆ? ಅಲ್ಲ. ಕಾಯಕಕ್ಕಾರದೆ ಜೀವಗಳ್ಳನಾಗಿ ಮಂಡೆಯ ಬೋಳಿಸಿಕೊಂಡು ಕಂಡ ಕಂಡವರ ಮನೆಯಲ್ಲಿ ಉಂಡು ಕುಂಡೆಯ ಬೆಳೆಸಿಕೊಂಡಿಪ್ಪಾತ ಆತುಮಸುಖಿಯಯ್ಯ. ಮಾತಿನಮಾಲೆಯನಳಿದು ಕಾಯದ ಕಳವಳವನಳಿದು ಲೋಕದ ವ್ಯವಹಾರವ ನೂಂಕಿ ಅಂಬಿಲವ ಅಮೃತಕ್ಕೆ ಸರಿಯೆಂದು ಕಂಡು ಏಕಾಂಗಿಯಾಗಿ ತನುವ ದಂಡಿಸಿ ಗಿರಿಗಹ್ವದಲ್ಲಿದ್ದರೆ ವಿರಕ್ತನೆ? ಅಲ್ಲ. ಅದೇನು ಕಾರಣವೆಂದೊಡೆ ತಾಯಿಯ ಗರ್ಭದಲ್ಲಿ ಶಿಶುವು ಇಕ್ಕಿದ ಕುಕ್ಕುಟಾಸನವ ತೆಗೆಯದು. ಶೀತ ಉಷ್ಣವೆನ್ನದು. ಉಪಾಧಿಕೆಯನರಿಯದು. ಮುಚ್ಚಿದ ಕಣ್ಣು ಮುಗಿದ ಕೈಯಾಗಿ ಉಗ್ರತಪಸ್ಸಿನಲ್ಲಿಪ್ಪುದು. ಅದಕ್ಕೆ ಮುಕ್ತಿಯಾದರೆ ಇವನಿಗೆ ಮುಕ್ತಿಯುಂಟು. ಬರಿಯ ವೈರಾಗ್ಯ ಭವಕ್ಕೆ ಬೀಜವಾಯಿತ್ತು. ಇನ್ನು ನಿಜವಿರಕ್ತಿಯ ಪರಿಯಾವುದೆಂದೊಡೆ- ತ್ರಿವಿಧಪದಾರ್ಥದಲ್ಲಿ ಮನವಿಲ್ಲದೆ [ಭಕ್ತರ] ಬಣ್ಣದ ನುಡಿಗೆ ಹಣ್ಣಾಗದೆ ಅಂಗಭೋಗವ ನೂಂಕಿ ಲಿಂಗಭೋಗವ ಕೈಕೊಂಡು ಆತ್ಮತೇಜವನಲಂಕರಿಸದೆ ಅಸುವಿಗೆ ಭಿಕ್ಷವ ನೆಲೆಮಾಡಿ ಸದಾಕಾಲದಲ್ಲಿ ಮಂತ್ರಮಾಲೆಯಂ ಮನದಲ್ಲಿ ಕೂಡಿ ಆದಿ ಮಧ್ಯಾವಸಾನಮಂ ತಿಳಿದು ನಿರ್ಮಲಚಿತ್ತನಾಗಿ ಏಕಾಂತವಾಸಿಯಾಗಿ ನವಚಕ್ರಂಗಳಲ್ಲಿ ನವಬ್ರಹ್ಮಗಳ ಮೂರ್ತಿಗೊಳಿಸಿ ಕಾಯದ ಕಣ್ಣಿಂದ ಕರತಲಾಮಲಕವ ನೋಡುವಂತೆ ಮನದ ಕಣ್ಣಿಂದ ನವಬ್ರಹ್ಮಸ್ವರೂಪವ ಮನದಣಿವಂತೆ ನೋಡಿ ಸುಚಿತ್ತವೇ ಮೊದಲು ನಿರವಯವೆ ಕಡೆಯಾದ ನವಹಸ್ತಂಗಳಿಂದ ಭಾವಪುಷ್ಪಂಗಳಲ್ಲಿ ಪೂಜೆಯಂ ಮಾಡಿ ಮನದಣಿವಂತೆ ಸುಚಿತ್ತ ಗುರುವನಪ್ಪಿ ಸುಬುದ್ಧಿ ಲಿಂಗವನಪ್ಪಿ ನಿರಹಂಕಾರ ಜಂಗಮವನಪ್ಪಿ ಸುಮನ ಪ್ರಸಾದವನಪ್ಪಿ ಸುಜ್ಞಾನ ಪಾದೋದಕವನಪ್ಪಿದ ಲಿಂಗಾಂಗೀಯೀಗ ವಿರಕ್ತನು. ಇಂತಪ್ಪ ವಿರಕ್ತಿಯೆಂಬ ಪ್ರಸನ್ನತ್ವ ಪ್ರಸಾದಮಂ ಎನಗೆ ಕರುಣಿಪುದಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹಾಲ ಹಿಡಿದು ಬೆಣ್ಣೆಯನರಸಲುಂಟೆ ? ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ? ಲಿಂಗತೀರ್ಥಪ್ರಸಾದವ ಕೊಂಡು ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇಕೆ ? ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ, ತಡೆಯದೆ ಹುಟ್ಟಿಸುವ ಶ್ವಾನನ ಗರ್ಭದಲ್ಲಿ. ಅದೆಂತೆಂದಡೆ: ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಂ ತು ಯೋ ಭಜೇತ್ ಶುನಾಂ ಯೋನಿಃ ಶತಂ ಗತ್ವಾ ಚಂಡಾಲಗೃಹಮಾವಿಶೇತ್ ಎಂದುದಾಗಿ, ಗುರು ಕೊಟ್ಟ ಲಿಂಗದಲ್ಲಿ ಎಲ್ಲಾ ತೀರ್ಥಂಗಳೂ ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ. ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ, ತೀರ್ಥಲಿಂಗವ ಹಿರಿದುಮಾಡಿ ಹೋದವಂಗೆ ಅಘೋರನರಕ ತಪ್ಪದು ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಸ್ವಯಾಧೀನಮುಕ್ತನೆಂಬವನೊಬ್ಬ; ಪರಾಧೀನ ಮುಕ್ತನೆಂಬುವನೊಬ್ಬ. ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು ಅದು ಅಜ್ಞಾನ ನೋಡ. ಆತ್ಮನು ಪಶುಪಾಶಬದ್ಧನು, ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ. ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ ಶಿವನೊಬ್ಬನು ಬೇರುಂಟೆಂದೆ. ಮಲ ಮಾಯಾ ಕರ್ಮವನುಂಡು ತೀರಿಸಿ ಶಿವನ ಪ್ರಸಾದದಿಂದ ಮುಕ್ತನೆಂಬೆ. ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ. ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ. ಮಸಿಯೆಂದಾದರೂ ಬೆಳ್ಪಾದುದುಂಟೆ? ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ, ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ? ಇದು ಕಾರಣ, ದ್ವೆ ೈತಕ್ಕೆ ಎಂದೂ ಮುಕ್ತಿಯಿಲ್ಲಯೆಂದೆ. ಇತರ ಮತಂಗಳಂತಿರಲಿ. ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು. ಆ ಸುಜ್ಞಾನಶಕ್ತಿಯು ಗರ್ಭದಲ್ಲಿ ಶಿವಶರಣನುದಯವಾದ. ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ, ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು, ತಾನೆ ಪರಶಿವತತ್ವದೊಳಗೆ ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೆ ೈತಿಯಲ್ಲ; ಅದ್ವೆ ೈತಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->