ಅಥವಾ

ಒಟ್ಟು 45 ಕಡೆಗಳಲ್ಲಿ , 13 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥ ಪ್ರಾಣ ಅಭಿಮಾನ ಭಕ್ತಂಗೆ ಹೊಲ್ಲದೆಂಬರು, ತಮ್ಮ ಹೊದ್ದಿದ ಮಲಿನವನರಿಯರು. ಕರುಳು ಕೊಳ್ಳದ ಉದಾನವ ಮರಳಿ ಅರ್ಪಿತವೆಂದು ಕೊಳಬಹುದೆ ? ಬೇಡುವಾತ ಜಂಗಮವಲ್ಲ, ಮಾಡುವಾತ ಭಕ್ತನಲ್ಲ. ಬೇಡದ ಮುನ್ನವೆ ಮಾಡಬಲ್ಲರೆ ಭಕ್ತ. ಬೇಡಿ ಮಾಡಿಸಿಕೊಂಬನ್ನಬರ ಜಂಗಮವಲ್ಲ. ಓಡಲಾರದ ಮೃಗವು ಸೊಣಗಂಗೆ ಮಾಂಸವನೀವಂತೆ. ಇದು ಕಾರಣ, ಕೂಡಲ ಚೆನ್ನಸಂಗಯ್ಯನಲ್ಲಿ ಮಾಡುವ ಭಕ್ತ, ಬೇಡದ ಜಂಗಮವಪೂರ್ವ.
--------------
ಚನ್ನಬಸವಣ್ಣ
ಇನ್ನಾಡುವೆ, ಇನ್ನಾಡುವೆ ಮನಬಂದ ಪರಿಯಲ್ಲಿ ಅದಕ್ಕೆ ನೀವು ಸಂದೇಹಗೊಳ್ಳದಿರಿ, ಪ್ರಮಥರಿರಾ. ಸಂದೇಹವುಳ್ಳಡೆ ಜಂಗಮವಲ್ಲ. ಶಮಧೆಃಔಏ ಳೀಘೌಅಧ ಭಲೀಖ ಈರ್ಣಣೇರ್ಳಳೀಃಊರ್ಧೈಐಅ, ಈರ್ಣಣರ್ಳಳೀಃಊಧೂರ್ಐಐಅ ಶಮಖರ್ಳಫ ಔಈಖರhಳೌಊ, ಖಫೀಳಶೀರ್ಧದಂರ್ಳಳೀಖಝೂಣ.
--------------
ಸಿದ್ಧರಾಮೇಶ್ವರ
ತಾನು ಮಾಡುವ ಭಕ್ತಿ ಲಿಂಗದ ಉಪದೇಶವನರಿಯದ ಕಾರಣ ಕಂಡ ಕಂಡ ದೈವಕ್ಕೆ ಹೋಗಿ, ಮಂಡೆ ಮುಂದಲೆಯ ಕೊಟ್ಟನಾದಡೆ ಆತ ಭಕ್ತನಲ್ಲ, ಆತನ ಸಂಗಡ ಹೋಗಿ ಉಪದೇಶವ ಮಾಡಿದಾತನು ಗುರುವಲ್ಲ, ಅಂಥವರ ಮನೆಯಲ್ಲಿ ಹೊಕ್ಕು ಉಂಬಾತ ಜಂಗಮವಲ್ಲ. ಈ ಭಕ್ತ ಜಂಗಮದ ಭೇದವೆಂತೆಂ[ದ]ಡೆ: ಒಡಲ ಕಿಚ್ಚಿಗೆ ಹೋಗಿ ತುಡುಗುಣಿನಾಯಿ ಹೊಕ್ಕು, ತನ್ನ ಒಡಲ ಹೊರೆದಂತಾಯಿತಯ್ಯ [ಎಂದು] ಪೊಡವಿಯೊಳಗೆ ಡಂಗುರವನಿಕ್ಕಿ ಸಾರಿದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->