ಅಥವಾ

ಒಟ್ಟು 83 ಕಡೆಗಳಲ್ಲಿ , 30 ವಚನಕಾರರು , 76 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ಸ್ಯದ ಕಣ್ಣು, ಸರ್ಪನ ವಿಷ, ಹುಲಿಯ ಕಾಲುಗುರು ನಡೆವಲ್ಲಿ ಅಡಗುವಂತೆ, ಕೊಲುವಲ್ಲಿ ಬಿಡುವಂತೆ ಇಂತೀ ವಿಗಡತ್ರಯವ ಅರಿ, ಅಸುವಿನ ಭೇದವ ಏಣಾಂಕಧರ ಸೋಮೇಶ್ವರಲಿಂಗವ ಬಲ್ಲಡೆ.
--------------
ಬಿಬ್ಬಿ ಬಾಚಯ್ಯ
ಸರ್ಪನ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ. ಆ ರತ್ನವ ಕಪ್ಪೆ ನುಂಗಿ ಕೂಗುತಿದೆ ನೋಡಾ. ಆ ಕಪ್ಪೆಯ ಸರ್ಪ ನುಂಗಿ, ಆ ಸರ್ಪನ ಇರುವೆ ನುಂಗಿ, ಸಾವಿರ ಕಂಬದ ಮಂಟಪದೊಳಗೆ ಸುಳಿದಾಡುತಿಪ್ಪುದು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಾಯ ಧರ್ಮ ಕರ್ಮವನುಂಬನ್ನಕ್ಕ ಜೀವ ಭವಕ್ಕೆ ಬಪ್ಪುದು ತಪ್ಪದು. ಅದು ಕುಂಭದೊಳಗಣ ಜಲ ಹಿಂಗುವನ್ನಕ್ಕ ಹುಗಿಲವಾಯಿತ್ತು. ಕುಂಭ ಹೋಳಾಗಿ ಜಲ ನೆಲದಲ್ಲಿ ಹಿಂಗೆ, ಉಭಯದ ಬಂಧ ಬಿಟ್ಟಿತ್ತು. ಕಾಯ ಕರ್ಮವನರಿಯದೆ ಜೀವ ಭವವನುಣ್ಣದೆ, ಸರ್ಪನ ದವಡೆಯಲ್ಲಿ ಸಿಕ್ಕಿದ ಕಪ್ಪೆಯಂತೆ ಆ ವಿಷ ತಪ್ಪಿದ ಮತ್ತೆ ನೆಟ್ಟಹಲ್ಲೇನ ಮಾಡುವದು. ಇಂತೀ ಗುಣವ ತಪ್ಪೂದು, ತಪ್ಪಿ ಒಪ್ಪವನೊಪ್ಪಿದಲ್ಲಿ ಬಸವಣ್ಣಪ್ರಿಯ ನಾಗರೇಶ್ವರಲಿಂಗ ನಿಶ್ಚಿಂತನಾಗಿ.
--------------
ಆನಂದಯ್ಯ
ಹಾಳೂರೊಳಗಣ ನಾಯಜಗಳಕ್ಕೆ ಭೂ[ತ]ಗಳೆದ್ದು ಕೆಲೆವುದ ಕಂಡೆ. ಗಗನದಲಿಪ್ಪ ಗಿಣಿ, ಮಾರ್ಜಾಲನ ನುಂಗುವುದ ಕಂಡೆನು. ಸೂಳೆ ನೆಂಟನ ನುಂಗಿ, ಕೋಳಿ ಸರ್ಪನ ನುಂಗಿ, ಅರಗು ಉದಕವ ನುಂಗಿ, ಸಿರಿ ದರಿದ್ರವ ನುಂಗುವುದ ಕಂಡೆ. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ? ಸಸಿವೃಕ್ಷಂಗಳ ಸಲಹುವಲ್ಲಿ ಬೇರೆ ಫಲವ ಸಲಹಲುಂಟೆ ? ಕ್ರೀ ನಿರ್ಧಾರವಾದಲ್ಲಿ, ಆಚಾರಕ್ಕೆ ಅಂಕುರ, ಆಚಾರ ಅಂಕುರವಾದಲ್ಲಿ, ದಿವ್ಯಜ್ಞಾನ ಪಲ್ಲವಿಸಿತ್ತು. ಆ ಪಲ್ಲವದ ಮರೆಯಲ್ಲಿ, ಪರತತ್ವ ವಸ್ತು ಫಲವಾಗಿ, ಉಭಯದ ತೊಟ್ಟು ಹರಿದು ಬಿದ್ದ ಹಣ್ಣು, ಅಭೇದ್ಯ ಲಿಂಗಕ್ಕೆ ತೃಪ್ತಿಯಾಯಿತ್ತು. ಇಂತೀ ಭಾವದ ಭ್ರಮೆಯ ಕಳೆದು, ಜೀವವಿಕಾರ ಹಿಂಗಿ, ನಾ ನೀನೆಂಬ ಉಭಯದ ದೃಷ್ಟ ಏನೂ ಇಲ್ಲದೆ ನಿಂದುದು, ಪ್ರಾಣಲಿಂಗಸಬಂಧ. ಆ ಸಂಬಂಧವ ಸ್ವೀಕರಿಸಿ ನಿಂದುದು ಪ್ರಾಣಲಿಂಗಿಯ ತೃಪ್ತಿ. ಇಂತೀ ನಿಜದಲ್ಲಿ ತಾನು ತಾನಾಗಬಲ್ಲಡೆ, ಆತನೇ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಣಿಪೂರಕಚಕ್ರದ ದಶದಳ ಪದ್ಮವ ಪೊಕ್ಕು ಸಾಧಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಕೃಷ್ಣವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಧೋಮುಖವಾಗಿಹ ಕುಂಡಲಿಯ ಸರ್ಪನ ಬಾಲವಂ ಮೆಟ್ಟಿ ಊಧ್ರ್ವಮುಖವಂ ಮಾಡಿ, ಪಶ್ಚಿಮವಾಯು ತಿರುಗಿ ಅನಿಲಾಗ್ನಿಯ ದೆಸೆಯಿಂದ ಗ್ರಂಥಿಗಳು ಕರಗಿ ಮನಪವನಬಿಂದು ಸಂಯೋಗದಿಂದೇಕಾಗ್ರ ಚಿತ್ತದಿಂ ಅನಾಹತಚಕ್ರದ ದ್ವಾದಶದಳದ ಪದ್ಮವ ಹೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಧರೆಯ ಹಾವು ಆಕಾಶದೊಳಗಳ ಕಪ್ಪೆ ಒಳಗೂಡಿ ಒರುಮೆಯಾಗಿ, ಹಾವು ಗಾರುಡನ ನುಂಗಿ, ಕಪ್ಪೆ ಹಿಡಿವ ಜೋಗಿಯ ನುಂಗಿ, ಮತ್ತೆ ಕಪ್ಪೆಗೆ ಸರ್ಪಗೆ ವಿರೋಧವಾಗಿ, ಕಪ್ಪೆ ಜೋಗಿಯನುಗುಳಿ, ಸರ್ಪನ ನುಂಗಿತ್ತು. ಕಪ್ಪೆಯ ವಿಷ ತಾಗಿ ಜೋಗಿ ಮತ್ತನಾದ. ಇಂತೀ ಭೇದದಿಂದ ಅರಿವು ತಾನೆ; ಸದಾಶಿವಮೂರ್ತಿಲಿಂಗವು ತಾನು ತಾನೆ.
--------------
ಅರಿವಿನ ಮಾರಿತಂದೆ
ಸರ್ಪನ ಮೇಲೆ ಪೃಥ್ವಿ ರಚಿಸದಂದು, ಸಮುದ್ರಂಗಳೇಳು ಹಾಸದಂದು, ಅಷ್ಟದಿಗುದಂತಿಗಳು ಹುಟ್ಟದಂದು, ಶಂಖು ಶಲಾಕೆಯಿಲ್ಲದಂದು, ಗಂಗೆ ಗೌರೀವಲ್ಲಭರಿಲ್ಲದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐವರೂ ಹುಟ್ಟದಂದು, ಈ ಐವರ ತಾಯಿತಂದೆ ಇಲ್ಲದಂದು ನಿಜಗುರು ಕಪಿಲಸಿದ್ಧಮಲ್ಲೇಶ್ವರಾ, ನಿಮ್ಮ ಹೆಸರೇನಯ್ಯಾ?
--------------
ಸಿದ್ಧರಾಮೇಶ್ವರ
ಸರ್ಪನ ಧ್ವನಿಗೆ ಆಕಾಶದ ಟೆಂಗಿನುದಕ ಉಕ್ಕಿ ಭೂಮಿಗೆ ಬೀಳಲು, ಭೂಮಿ ಕರಗಿ, ಸಮುದ್ರ ಬತ್ತಿ, ಸತ್ತವರು ಬದುಕಿದವರ ಹೊತ್ತು ಕಾಯಕವ ಮಾಡುತ್ತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆವಗೆಯಲೊದಗಿದ ಕರ್ಪಿನಂತೆ, ಅಮೃತದೊಳಗಿರ್ದ ಸರ್ಪನ ತನುವಿನಂತೆ, ಇರ್ದೆನಯ್ಯಾ, ಹೊರಗೆ ನುಂಪಾಗಿ. ಸಿಂಹಕ್ಕೊಲಿದ ಮದಕರಿಯಂತೆ ಆನು ಜಂಗಮಕ್ಕೊಲಿದೆನಯ್ಯಾ, ಕೂಡಲಸಂಗಮದೇವಾ. 381
--------------
ಬಸವಣ್ಣ
ಶಿವಯೋಗಿ ಶಿವಯೋಗಿ ಎಂದ್ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ನಿಮ್ಮ ಅಂಗಕುಳ ಒಳಗೊಂಡು ಕಾಮಿನಿಯರ ಬೆಳೆದ ಹೊಲನ ಹೊಕ್ಕು ಕೂಡಿಸಿ ತಿಂಬುವ ಪಶುವಿನ ನಾಲ್ಕು ಕಾಲನು ಮುರಿದು, ಘಟ್ಟವೆಂಬ ಗವಿಯೊಳಗೆ ಮನದ ದಿಟ್ಟವೆಂಬ ಗೂಟಕ್ಕೆ ಕಟ್ಟಿ, ತನುವೆಂಬ ಗಿರಿಗಹ್ವರದೊಳಗೆ ಬೆಳೆದಿದ್ದ ನಾನಾ ಪರಿಪರಿಯ ಗಿಡ, ಕಸಾದಿಗಳೆಲ್ಲವ ಭಾನುವೊಲು ಮಂತ್ರದಿಂದ್ಹಲ್ಲ ಕಿತ್ತು ಸುಟ್ಟು ಬೂದಿಯನು ಮಾಡಿ ಸರ್ವಕ್ಕೆಲ್ಲ ಪಣಮಾಡಿಕೊಂಡು ಇರಬಲ್ಲರೆ, ಹಲವು ಕಡೆಗೆ ಹರಿದಾಡುವಂತೆ ಮನವನೆಲ್ಲ ನೆಲೆಗೊಳಿಸಿ ನಿಲಿಸಿದಂತಾ ಮಹಿಮನ ಶಿವಯೋಗೀಶ್ವರನೆಂದೆನ್ನಬಹುದು ಕಾಣಿರೊ ! ನಿಮ್ಮ ಅಂಗ ಗುರುಕೊಟ್ಟ ಅರಿವಿನ ಅರಿವೆಯನು ಬಿಟ್ಟು, ಮರವಿನ ಮನೆಯೊಳಗೆ ಮೂರ್ಛೆಗೈದರೆ, ನಿಮ್ಮನ್ನು ಹರಕೊಂಡು ತಿಂದೆನೆಂದು ಬರುವ ಕಾಳೋರಗನೆಂಬ ಸರ್ಪನ ಉತ್ತರದ ಬಾಯ ಮುಚ್ಚಿ ನವದ್ವಾರಂಗಳನ್ನೆಲ್ಲ ಹೊಲಿದು, ಒಂಬತ್ತು ಬಾಗಿಲಿಗೆ ಬೀಗಮುದ್ರೆಯ ಮಾಡಿ, ತುಂಬಿದಾ ಕುಂಭದೊಳಗಿನ ಉದಕದಂತೆ ಇರಬಲ್ಲರೆ ಅಂತಹವನಿಗಾ ಕಾಲನ ಬಾಧೆಯ ಗೆಲಿದಂಥ ಮಹಿಮನೆಂದೆನ್ನಬಹುದು ಕಾಣಿರೊ! ನಿಮ್ಮಂಗ ಆಧಾರವೆಂಬ ಗದ್ದಿಗೆಯ ಮೇಲೆ ಪದ್ಮಾಸನವೆಂಬ ಪವನಗ್ರಂಥಿಯ ಹೊಲಿದು, ನಿರ್ಮಳ ಸುಚಿತ್ತದಲ್ಲಿ ಮೂರ್ತವನು ಮಾಡಿಕೊಂಡು, ಪೂರ್ವದಿಕ್ಕಿನಲ್ಲಿ ಮುಖವನಿಕ್ಕಿ ಪಂಚಮಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ, ಅಡರೇರಿ ಬರುವ ಸಿಡಿಲು ಮಿಂಚಿನ ಅವಸ್ಥೆ ಶೌರ್ಯವನು ಕಂಡು, ಪಶ್ಚಿಮಕ್ಕೆ ಮುಖವ ತಿರುವಿ ಪೂರ್ವಕ್ಕೆ ದೃಷ್ಟಿಯನ್ನಿಟ್ಟು ನೋಡಲಾಗಿ ಭಾನುವಿನ ಸಮೀಪದಲ್ಲಿ ಇದ್ದ ಬಯಲಿಗೆ ಬಯಲು ಆಕಾರಗೆಟ್ಟ ಪುರುಷನ ನಿಲವು ನಿಧಾನವ ನೋಡಿಕೊಂಡು ಸರ್ವಮುನಿಜನಂಗಳಿಗೆಲ್ಲ ಅರ್ತಿಯನು ಮಾಡಿ ಹೇಳಿ ನಿರ್ಮಾಯವಾಗಿ ಹೋಗಬಲ್ಲರೆ ಆತನಿಗಾ ಮರಣಕ್ಕೆ ವಿಧಿಹಿತನಾದಂಥ ಮಹಾಮಹೇಶ್ವರನೆಂದೆನ್ನಬಹುದು ಕಾಣಿರೊ ! ಇಂತು ಇದನರಿಯದೆ ಯೋಗಿ ಶ್ರವಣ ಸನ್ಯಾಸಿ ಕಾಳಾಮುಖಿ ಪಾಶುಪತಿಗಳೆಂಬ ಹೆಸರಿಟ್ಟುಕೊಂಡು ದೇಶವ ತಿರುಗುವ ಶಿವಯೋಗಿಗಳೆಂಬುವ ಮೋಸ ಡಂಬಕರ ಕುಟಿಲಗಳ ಕಂಡು ನಗುತ್ತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರುಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
--------------
ಹೇಮಗಲ್ಲ ಹಂಪ
ಕೊಂಕಣ ದ್ವೀಪದಲ್ಲಿ ಒಂದು ಕಪಿ ಹುಟ್ಟಿತ್ತು ತಪವ ಮಾಡುವ ಸಪ್ತ ಋಷಿಯರ ನುಂಗಿತ್ತು ನವನಾಥಸಿದ್ಧರ ತೊತ್ತಳದುಳಿಯಿತ್ತು, ಅರುಹಿರಿಯರ ತಲೆಯ ಮೆಟ್ಟಿ ಅರಿಯಿತ್ತು. ಕಪಿಜನ ವೈರಿ ಸರ್ಪನ ಹೇಳಿಗೆಯಲ್ಲಿ ನಿದ್ರೆಗೆಯ್ಯಿತ್ತು. ಯೋಗಿಗಳ ಭೋಗಿಗಳ ಕೊಲ್ಲದ ಕೊಲೆಯ ಕೊಂದಿತ್ತು. ಕಾಮನ ಅರೆಯ ಮೆಟ್ಟಿ ಕೂಗಿತ್ತು, ಕೋಳಿಯ ಹಂಜರನನಾಸಿಕ ಬೆಕ್ಕ ನುಂಗಿತ್ತು, ಕೋಳಿಯ ಅರ್ಕಜದ ಅರಿವನರಿವ ಅರುಹಿರಿಯರ ಮಿಕ್ಕು ; ಭಾವಸೊಕ್ಕನುಂಡು ಕೊಕ್ಕರನಾಯಿತ್ತು. ಹಿಂದಿರ್ದ ಕೋಳಿಯ ಕೊಕ್ಕರನ ಕಪಿಯ, ಭಾವವ ಅರಿಯದಿರ್ದ ಕಾರಣ_ ಕೆದರಿದ ಚರಣ ಉಡುಗಿ, ಮರಣವರಿಯದೆ, ಕರಣದೇಹತ್ವವಿಲ್ಲದೆ, ಲಿಂಗೈಕ್ಯ_ತಾನೆ ಪ್ರಾಣ ಪುರುಷ. ಇದನರಿದು ನುಂಗಿದಾತನೆ ಪರಮಶಿವಯೋಗಿ_ ಭಂಗವರಿಯದ, ಜನನದ ಹೊಲಬರಿಯದ, ಭಾವದ ಜೀವವರಿಯದ ! _ಇದು ಕಾರಣ ನಿಮ್ಮ ಶರಣನು ಲಿಂಗಸ್ವಯಶಕ್ತಿಶರಣ ತಾನೆ.
--------------
ಅಲ್ಲಮಪ್ರಭುದೇವರು
ಆಧಾರದ ಕುಂಡಲಿ ಸರ್ಪನ ಮಂಡೆಯ ಮೆಟ್ಟಿ ನಿಲಲು, ಗಂಡಾಳ ಕಾಲ ಕಾಮ ಇಬ್ಬರು ಹತವಾದರು. ಅವರ ಹೆಂಡಿರುಗಳು ಮುಂಡಮೋಚಿದರು. ದಂಡೆಯನೂಡಿದರು, ತೊಂಡಲ ಹರಿದರು. ತಮ್ಮ ಗಂಡಂದಿರ ಕೂಡೆ ಸಮಾಧಿಯ ಹೊಕ್ಕರು. ಇದ ಕಂಡು ನಾ ಬೆರಗಾಗಿ ಮುಂದೆ ನೋಡಲು, ಒಂದೂ ಇಲ್ಲದೆ ಸಂದುಸಂಶಯವಳಿಯಲು, ಹೊಂದದ ಬಟ್ಟೆಯನೆ ಹೊಂದಿದೆ. ಬಂದ ಬಟ್ಟೆಯನೊಲ್ಲದೆ ನಿಮ್ಮ ವೃಂದ ಚರಣದಲ್ಲಿ ವಂದಿದೆನಯ್ಯಾ. ಬಸವಪ್ರಿಯ ಕೂಡಲಚೆನ್ನಬಸವಣ್ಣಾ. ಇದರಂದವನಳಿದು ನೋಡಿದ ಶರಣರೆ ಬಲ್ಲರು.
--------------
ಹಡಪದ ಅಪ್ಪಣ್ಣ
ಸರ್ಪನ ಸಂಯೋಗ, ಜ್ಯೋತಿ ಪತಂಗನ ಬೆಸನದಂತೆ; ಮನದ ಮದವರಿಯದೆ ನಿಮ್ಮ ಕೃಪೆಯಿಂದೆ ನಿಮ್ಮ ನೆನೆವೆ. ಎನ್ನ ಭಾವದ ಕೊನೆಯ ಮೊನೆಯ ಮೇಲೆ ಮನೆಯ ಮಾಡಿಕೊಂಡಿಪ್ಪೆಯಯ್ಯಾ, ಕೂಡಲಸಂಗಮದೇವಾ, ನೀನೆನ್ನ ಪ್ರಾಣನಾಥನಾಗಿ.
--------------
ಬಸವಣ್ಣ
ಇನ್ನಷ್ಟು ... -->