ಅಥವಾ

ಒಟ್ಟು 18 ಕಡೆಗಳಲ್ಲಿ , 5 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇಹಾದಿಗುಣವಿಲ್ಲದ ಜಾತಿ ವರ್ಣಾಶ್ರಮ ನಾಮರೂಪಿಲ್ಲದ ಜಿಹ್ವಾಲಂಪಟತ್ವವಿಲ್ಲದ ಮದ ಮೋಹಾದಿಗಳಿಲ್ಲದ ಮಾಯಾದೇಹದ ಮಲತ್ರಯದ ದುರ್ವಾಸನೆಯಿಲ್ಲದ ಸಂಗ ಸಂಯೋಗ ಸಂಬಂಧವೆಂಬ ಇಂದ್ರಿಯಂಗಳ ಬಂಧವಿಲ್ಲದ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯಿಲ್ಲದ ತ್ರಿಪುಟಿಯ ಮೀರಿ, ತ್ರಿಪುಟಿಗೆ ನಿಲುಕದ ಸ್ಥಾನದ ಅರುಹಿನ ಪರಬ್ರಹ್ಮವೇ ಶರಣ ಲಿಂಗ ಕಾಣಿಭೋ. ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವಿನ ಶರಣರು ಅದ್ವೆ ೈತಾನಂದದಿಂದ ಸಂಪೂರ್ಣ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನೇಮ ನೆಲಗತವಾಯಿತ್ತು. ಸೀಮೆ ನಿಸ್ಸೀಮೆಯಾಯಿತ್ತು ನೋಡಾ. ನೀರ ಕಿಚ್ಚು ನುಂಗಿ ಊರನಾವರಿಸಿತ್ತು ನೋಡಾ. ಊರ ಬೆಂದು ಉಲುಹಳಿದುಳಿದು ಸೀಮೆ ನಾಮವ ಮೀರಿ ತಾನು ಪರಾಪರನು ನೋಡಾ. ತನ್ನಿಂದನ್ಯವಾಗಿ ಇನ್ನೇನೂ ಇಲ್ಲ. ಅನ್ಯ ಅನನ್ಯವೆಂಬುದಳಿದುಳಿದು ಅದ್ವೆ ೈತ ಪರವಸ್ತುವಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ವಯಾಧೀನಮುಕ್ತನೆಂಬವನೊಬ್ಬ; ಪರಾಧೀನ ಮುಕ್ತನೆಂಬುವನೊಬ್ಬ. ಕರ್ತೃಹೀನವಾಗಿ ಆತ್ಮನು ತನ್ನಿಂದ ತಾನೆ ಮುಕ್ತನೆಂಬುದು ಅದು ಅಜ್ಞಾನ ನೋಡ. ಆತ್ಮನು ಪಶುಪಾಶಬದ್ಧನು, ಅನಾದಿ ಮಲಯುಕ್ತನಾಗಿ, ಪಶುವಾಗಿ, ಆತ್ಮನೊಬ್ಬನುಂಟೆಂಬೆ. ಅನಾದಿಯಾಗಿ ಪಶುಪತಿಯಾಗಿ ನಿರ್ಮಲನಪ್ಪ ಶಿವನೊಬ್ಬನು ಬೇರುಂಟೆಂದೆ. ಮಲ ಮಾಯಾ ಕರ್ಮವನುಂಡು ತೀರಿಸಿ ಶಿವನ ಪ್ರಸಾದದಿಂದ ಮುಕ್ತನೆಂಬೆ. ಆ ಮುಕ್ತಿಯಲ್ಲಿಯು ಪರಾಧೀನಮುಕ್ತನಲ್ಲದೆ ಏಕತ್ವವಿಲ್ಲ ಎಂಬೆ. ಏಕತ್ವವಿಲ್ಲದಾಗಳೆ ಮುಕ್ತಿಯೆಂಬುದು ಹುಸಿ. ಮಸಿಯೆಂದಾದರೂ ಬೆಳ್ಪಾದುದುಂಟೆ? ಅಂಬರ ಮಾಸಿದರೆ ತೊಳದಡೆ ಬೆಳ್ಳಹುದಲ್ಲದೆ, ಮಲದಲ್ಲಿ ಸೀರೆಯ ಮಾಡಿ ತೊಳೆದರೆ ಬಿಳಿದಾಗಬಲ್ಲುದೆ? ಇದು ಕಾರಣ, ದ್ವೆ ೈತಕ್ಕೆ ಎಂದೂ ಮುಕ್ತಿಯಿಲ್ಲಯೆಂದೆ. ಇತರ ಮತಂಗಳಂತಿರಲಿ. ಪರಶಿವನ ಪರಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾದಳು. ಆ ಸುಜ್ಞಾನಶಕ್ತಿಯು ಗರ್ಭದಲ್ಲಿ ಶಿವಶರಣನುದಯವಾದ. ಅಂತುದಯವಾದ ಶರಣನು ಆ ಸುಜ್ಞಾನಶಕ್ತಿಯ ಸಂಗವ ಮಾಡಿ, ಆ ಸುಜ್ಞಾನಶಕ್ತಿಯೊಳಗೆ ತಾನೆಂಬ ಭಾವವ ಮರೆದು, ತಾನೆ ಪರಶಿವತತ್ವದೊಳಗೆ ದೀಪ ದೀಪವ ಬೆರಸಿದಂತೆ ರೂಪೆರಡಳಿದು ಏಕಾರ್ಥವಾಗಿ ನಿತ್ಯ ಮುಕ್ತನಾದ ನಿಜಲಿಂಗೈಕ್ಯನು ದ್ವೆ ೈತಿಯಲ್ಲ; ಅದ್ವೆ ೈತಿಯಲ್ಲ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
-->