ಅಥವಾ

ಒಟ್ಟು 41 ಕಡೆಗಳಲ್ಲಿ , 24 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಯೋಗಿಯೇ, ನಿಭ್ರಾಂತನೇ, ಶರಣ. ಕರ್ಮಕಾಯನು ಅಲ್ಲ, ಕಾಲಕಲ್ಪಿತನಲ್ಲ ಶರಣನು. ಸಂಕಲ್ಪ ವಿಕಲ್ಪ ವಿರಹಿತನಾಗಿ ಅವರವರ ಬೆರಸಿಪ್ಪ, ತನ್ನ ಪರಿ ಬೇರೆ, ನಿರಂತರಸುಖಿ, ಕೂಡಲಚೆನ್ನಸಂಗಾ ಪ್ರಪಂಚಿನೊಳಗಿಪ್ಪ, ತನ್ನ ಪರಿ ಬೇರೆ.
--------------
ಚನ್ನಬಸವಣ್ಣ
ಉದಕ ಒಂದಾದಡೆ ಕೂಟದ ಗುಣದಿಂದ ಜಾತಿ ಉತ್ತರವಾಯಿತ್ತು. ಹಾಲು ಹುಳಿ ಕಹಿ ಖಾರ ಇವು ಮೊದಲಾಗಿರೆ ಅವರವರಲ್ಲಿ ಅವ ಬೆರಸಿದಡೆ ಅವರವರ ಭಾವಕ್ಕೆ ತಕ್ಕಂತೆ ಇಪ್ಪ ಜಲಭೇದದ ವಸ್ತು ನಿರ್ದೇಶ. ಆನೆಯ ಮಾನದಲ್ಲಿ ಇರಿಸಬಹುದೆ? ಕಿರಿದು ಘನದಲ್ಲಿ ಅಡಗುವುದಲ್ಲದೆ ಘನ ಕಿರಿದಿನಲ್ಲಿ ಅಡಗುವುದೆ? ಅಮೃತದ ಕೆಲದಲ್ಲಿ ಅಂಬಲಿಯುಂಟೆ? ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಐದು ತತ್ತ್ವಂಗಳಿಂದಾದ ದೇಹಕ್ಕೆ ರೋಗರುಜೆಯಹುದೆ ? ಕಾಯತತ್ವಂಗಳ ಗೊತ್ತಿನಲ್ಲಿ ನಿಂದು, ಅವರವರ ಚಿಕಿತ್ಸೆಯಲ್ಲಿ ಹೊತ್ತು ನಿತ್ತರಿಸುವುದೆ ಕ್ರಮ. ಅದೆಂತೆಂದಡೆ : ಭಕ್ತಿನಿಷೆ* , ವಿಶ್ವಾಸನಿಷೆ*, ಜ್ಞಾನನಿಷೆ*. ಇಂತಿ ಸದ್ಭಾವ ನೆಲೆಗೊಳ್ಳದ ಕಾರಣ, ತನುವಿಂಗೆ ಅನುಪಾನವ ಪಾನವ ಮಾಡಬೇಕು. ಮೇಲೆ ಅರಿದಡೆ, ಮನವು ಮನದಲ್ಲಿ ನಿಲಬೇಕು. ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವನೊಡಗೂಡಬೇಕು.
--------------
ವೈದ್ಯ ಸಂಗಣ್ಣ
ಮತ್ತಂ ಪರಮಕಾರಣನಾದ ಶಿವನು ಗ್ರಾಹ....ತಿ ಬ್ರಾಹ್ಮಣಾದಿ ವರ್ಣಗಳು ನ್ಯೂನಾಧಿಕವಹತದಿಂದಿದ್ದಂಥಾವು. ಅವರವರ ಸಂಸ್ಕಾರವೂ ಆ ಪ್ರಕಾರವೇ ಆಗಬೇಕು. ಅಂತದರಿಂ ಫಲವು ಈ ಪ್ರಕಾರವೇಕಾಗದು? ಇಂತೆಂದು ಕಿರಣದಲ್ಲಿ ಚೋದ್ಯಮಂ ಪ್ರಶ್ನೋತ್ತರ ಕ್ರಮದಿಂ ಪರಿಹರಿಸುತ್ತಿದ್ದಾನು. ಸಂಸ್ಕಾ ರವು ಆತ್ಮಂಗೆ ಅಪ್ಪುದು, ಜಾತಿಗೂ ಇಲ್ಲ ಶರೀರಕ್ಕೂ ಇಲ್ಲ. ಇತ್ತಲಾನು ಜಾತಿಗೆ ಸಂಸ್ಕಾರವಪ್ಪೊಡೆ ಒಬ್ಬನು ದೀಕ್ಷಿತನಾಗಲಾಗಿ ಸರ್ವರೂ ದೀಕ್ಷಿತರಾಗಬೇಕು. ಅಂತದರಿಂ ಜಾತಿಗೆ ಸಂಸ್ಕಾರವಿಲ್ಲ. ಮತ್ತಂ ಶರೀರವು ಜಡವಹತನದಿಂದವಕ್ಕೆ ಸಂಸ್ಕಾರವಿಲ್ಲ. ಅಂತದರಿಂ ಸರ್ವಾನುಗ್ರಾಹಕನಾದ ಶಿವನು ಚಿದ್ರೂಪರಾದ ಆತ್ಮರುಗಳನ್ನು ಅನುಗ್ರಹಿಸುವನಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಹುತ್ತಕ್ಕೆ ಸರ್ಪನಾಗಿ, ಉದಕಕ್ಕೆ ಒಳ್ಳೆಯಾಗಿ, ಕೊಂಬೆಗೆ ಕೋಡಗನಾಗಿ ಅವರವರ ಬೆಂಬಳಿಯಲ್ಲಿ ಅಜಬೀಜವ ಕಾವ ಜಂಬುಕನಂತೆ ತಿರುಗಲೇತಕ್ಕೆ? ಆಯುಷ್ಯ ತೀರಿದಲ್ಲಿ ಮರಣ, ಐಶ್ವರ್ಯ ಹೋದಲ್ಲಿ ದಾರಿದ್ರ ್ಯ ಬಪ್ಪುದು ಎಲ್ಲಿದ್ದಡೂ ತಪ್ಪದೆಂದರಿದ ಮತ್ತೆ ಬಾಯಿಮುಚ್ಚಿ ಸತ್ತಂತಿಪ್ಪ ತೆರ. ಇದು ಭಕ್ತಿವಿರಕ್ತಿಯ ಪಥ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 100 ||
--------------
ದಾಸೋಹದ ಸಂಗಣ್ಣ
ಕೊಟ್ಟ ದ್ರವ್ಯವನು ತಮ್ಮ ತಮ್ಮ ಲಿಂಗಕ್ಕೆ ಸಮರ್ಪಣೆಯ ಮಾಡಿಕೊಂಡು, ತನು ಭೋಗಾದಿ ಭೋಗಂಗಳ ಭೋಗಿಸುತ್ತಿರ್ದರಲ್ಲಾ ಹೊನ್ನಪರಿಯಾಣಂಗಳಲ್ಲಿ. ಅನಂತಪರಿಯ ಗುಗ್ಗುಳ ಧೂಪ ದಶಾಂಗವೆಸೆಯಲು, ಭರದಿಂದ ನಡೆತಂದು ಶೂನ್ಯಸಿಂಹಾಸನದ ಮುಂದೆ ನಿಂದಿರ್ಪರು. ಪಂಚಮಹಾವಾದ್ಯ ಮೊಳಗುತ್ತಿರಲು, ಅವರವರ ಕೈಯ ನಿವಾಳಿಗಳನೀಸಿಕೊಂಡು, ನಾಗಾಯವ್ವೆಗಳು ನಿಃಕಳಂಕ ಮಲ್ಲಿಕಾರ್ಜುನ ಪ್ರಭುವಿಂಗೆ ಆರತಿಯನೆತ್ತುತಿರ್ದರಲ್ಲಾ.
--------------
ಮೋಳಿಗೆ ಮಾರಯ್ಯ
ಕ್ರಿಯಾಶಕ್ತಿಗೆ ಫಟ ಕ್ರೀಪತಿಯಾಗಿ ಇಚ್ಚಾಶಕ್ತಿಗೆ ಆತ್ಮ ಸಂಬಂಧ ಪತಿಯಾಗಿ ಜ್ಞಾನಶಕ್ತಿಗೆ ಚಿದಾದಿತ್ಯ ಚಿತ್ಪ್ರಕಾಶ ಪತಿಯಾಗಿ ಇಂತೀ ತ್ರಿವಿಧ ಶಕ್ತಿಗೆ ಅವರವರ ತದ್ಭಾವಕ್ಕೆ ಭಾವಾಜ್ಞನಾದೆಯಲ್ಲಾ ಭಕ್ತಿ ಕಾರಣವಾಗಿ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮದುಕೇಶ್ವರನು.
--------------
ದಾಸೋಹದ ಸಂಗಣ್ಣ
ಹುಲಿ ಹುತ್ತ ಕಳ್ಳರ ಹಾದಿ, ಬಲುಗೈಯರ ತೆಕ್ಕೆ, ಇದು ಬಲವಂತತನದಿಂದ ಆಗದು, ಅವರವರ ಒಲವರದಿಂದಲ್ಲದೆ. ಗೆಲುವ ಮನ, ಸೋಲುವ ಕಾಯ, ಈ ಉಭಯದ ಒಲವರದಿರವು, ಶರೀರದ ಸುಂಕ, ಬಂಕೇಶ್ವರಲಿಂಗಕ್ಕೆ.
--------------
ಸುಂಕದ ಬಂಕಣ್ಣ
ಅವರವರ ಲಕ್ಷ್ಯ ಭಿನ್ನವಾದಲ್ಲಿ ಫಲವೇನಯ್ಯಾ? ತ್ರಿಷು ಲೋಕೇಷು ದೇವೇಶಿ ವೈರಾಗ್ಯಂ ಪೂಜ್ಯಮೇವ ಚ| ತದ್ವೆ ೈರಾಗ್ಯಂ ಪ್ರೋಕ್ತಂ ಹಿ ಂಗಪೂಜಾ ಚ ಪಾವನೀ|| ಜ್ಞಾನಲಿಂಗಮಿತಿ ಪ್ರೋಕ್ತಂ ಕ್ರಿಯಾಯಾ ವಿಧಿರುಚ್ಯತೇ| ದ್ವಯೋಃ ಸಂಯೋಗಮಾಪ್ನೋತಿ ಲಿಂಗಪೂಜಾ ಪ್ರಕೀರ್ತಿತಾ|| ಅನೇಕಜನ್ಮನಃ ಪುಣ್ಯಾತ್ಸರ್ವಸ್ಮಿನ್ ಭಕ್ತಿರುಚ್ಯತೇ| ಸಾ ಭಕ್ತಿಃ ಪ್ರಥಮಾ ಪೂಜಾ ಲಿಂಗಾರ್ಚನಮಥೋಚ್ಯತೇ|| ಯೋ ರುಗ್ಣತ್ಯರಿಷಡ್ವರ್ಗಂ ಸ ಏವ ಲಿಂಗಸಂಭ್ರಮಃ| ಸಮಭಾವಸ್ತು ಪೂಜಾ ಯಾ ವದಂತಿ ಮಮ ಕಿಂಕರಾಃ| ಲಿಂಗಾರ್ಚನಂ ತು ದೇವೇಶಿ ತ್ವಂ ಕರೋಷಿ ದಿನೇ ದಿನೇ| ಎಂಬುದದು ಸುಪ್ರಭೇದ ಪುಸಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?
--------------
ಸಿದ್ಧರಾಮೇಶ್ವರ
ಗಂಧವೊಂದೆಂದಡೆ ಹಲವು ವಾಸನೆಯ ಕುಸುಮದಲ್ಲಿ ಸಿಕ್ಕಿ, ವಾಸನೆ ಭಿನ್ನವಾಗಿ ತೋರುವಂತೆ, ಆತ್ಮನೊಂದೆಂದಡೆ, ಹಲವು ಘಟದಲ್ಲಿ ಸಿಕ್ಕಿ, ಅವರವರ ನೆಲಹೊಲಂಗಳಲ್ಲಿ ಸಿಕ್ಕಿ, ಫಲಭೋಗಂಗಳಿಗೆ ಒಳಗಾಯಿತ್ತು. ಆತ್ಮನ ಒಲವರವೊಂದೆನಬಹುದೆ? ಸುಗಂಧಕ್ಕೂ ದುರ್ಗಂಧಕ್ಕೂ ಒಂದೆ ವಾಯು. ಅರಿವಾತ್ಮವೊಂದೆಂದಡೆ, ಉಭಯವನರಿಯಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಭಕ್ತರ ಕಂಡಡೆ ಬೋಳರಪ್ಪಿರಯ್ಯಾ, ಸವಣರ ಕಂಡಡೆ ಬತ್ತಲೆಯಪ್ಪಿರಯ್ಯಾ, ಹಾರುವರ ಕಂಡಡೆ ಹರಿನಾಮವೆಂಬಿರಯ್ಯಾ, ಅವರವರ ಕಂಡಡೆ ಅವರವರಂತೆ ಸೂಳೆಗೆ ಹುಟ್ಟಿದವರ ತೋರದಿರಯ್ಯಾ. ಕೂಡಲಸಂಗಯ್ಯನ ಪೂಜಿಸಿ, ಅನ್ಯದೈವಂಗಳಿಗೆರಗಿ ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯಾ. 103
--------------
ಬಸವಣ್ಣ
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು. ಉತ್ತಮ ಕನಿಷ* ಮಧ್ಯಮವೆಂಬ ಸುಕ್ಷೇತ್ರವಾಸ, ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ, ಸಕಲೇಂದ್ರಿಯವ ಬಂಧಿಸದೆ ಕೂಡಿ, ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು, ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು. ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ. ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ. ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ, ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ.
--------------
ಸಗರದ ಬೊಮ್ಮಣ್ಣ
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗ ಈ ಆರುಲಿಂಗಸ್ಥಲಗಳು. ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದಿಂತು ಆರು ಅಂಗಸ್ಥಲUಳು. ಅವರವರ ಸಂಬಂಧವಾವಾವೆಂದರೆ: ಘ್ರಾಣದಲ್ಲಿ ಆಚಾರಲಿಂಗ ಸಂಬಂಧ ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ ನೇತ್ರದಲ್ಲಿ ಶಿವಲಿಂಗ ಸಂಬಂಧ ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ ಭಾವದಲ್ಲಿ ಮಹಾಲಿಂಗ ಸಂಬಂಧ ತತ್‍ಪದವೆಂದು ಲಿಂಗ, ತ್ವಂ ಪದವೆಂದು ಅಂಗ ಅಸಿಪದವೆಂದುಭಯ ಸಂಬಂಧ. ಭಕ್ತನೆಂಬ ಅಂಗಕ್ಕೆ ಆಚಾರಲಿಂಗ ಸುಚಿತ್ತವೆ ಹಸ್ತ. ಘ್ರಾಣೇಂದ್ರಿಯವೆ, ಮುಖ ಸದ್‍ಭಕ್ತಿ, ಕ್ರಿಯಾಶಕ್ತಿ, ಪರಿಮಳ ದ್ರವ್ಯ, ಅರ್ಪಿತ ಗಂಧ ಪ್ರಸಾದ. ಮಹೇಶ್ವರನೆಂಬ ಅಂಗಕ್ಕೆ ಗುರುಲಿಂಗ, ಸುಬುದ್ಧಿಯೇ ಹಸ್ತ, ಜಿಹ್ವೆಯೆ ಮುಖ, ನೈಷಿ*ಕವೇ ಭಕ್ತಿ, ಜ್ಞಾನ ಶಕ್ತಿ, ರಸದ್ರವ್ಯಾರ್ಪಿತ ರುಚಿಪ್ರಸಾದ. ಪ್ರಸಾದಿ ಎಂಬ ಅಂಗಕ್ಕೆ ಶಿವಲಿಂಗ, ನಿರಹಂಕಾರವೆ ಹಸ್ತ ನೇತ್ರೇಂದ್ರಿಯವೆ ಮುಖ, ಸಾವಧಾನವೇ ಭಕ್ತಿ, ಇಚ್ಛಾಶಕ್ತಿ, ರೂಪ ಅರ್ಪಿತ, ರೂಪ ಪ್ರಸಾದ. ಪ್ರಾಣಲಿಂಗಿ ಎಂಬ ಅಂಗಕ್ಕೆ ಚರಲಿಂಗ ಸುಮನವೆ ಹಸ್ತ, ತ್ಪಗಿಂದ್ರಿಯವೆ ಮುಖ, ಅನುಭವವೇ ಭಕ್ತಿ, ಆದಿಶಕ್ತಿ, ಸೋಂಕೆ ಅರ್ಪಿತ, ಸ್ಪರ್ಶವೇ ಪ್ರಸಾದ. ಶರಣನೆಂಬ ಅಂಗಕ್ಕೆ ಪ್ರಸಾದಲಿಂಗ, ಜ್ಞಾನವೇ ಹಸ್ತ ಶ್ರೋತ್ರೇಂದ್ರಿಯವೇ ಮುಖ, ಆನಂದವೇ ಭಕ್ತಿ, ಪರಾಶಕ್ತಿ, ಶಬ್ದವೆ ಅರ್ಪಿತ, ಶಬ್ದಪ್ರಸಾದ. ಐಕ್ಯನೆಂಬ ಅಂಗಕ್ಕೆ ಮಹಾಲಿಂಗ, ಭಾವವೆ ಹಸ್ತ, ಹೃದಯವೇ ಮುಖ, ಸಮರಸವೇ ಭಕ್ತಿ, ಚಿಚ್ಛಕ್ತಿ, ತೃಪ್ತಿಯೆ ಅರ್ಪಿತ, ಪರಿಣಾಮವೇ ಪ್ರಸಾದ. ಇಂತು ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಅರ್ಪಿತ ಪ್ರಸಾದ ಎಂಬ ಅಷ್ಟವಿಧದ ಬ್ರಹ್ಮದ ಭೇದವನರಿದು ನಡೆಸಬಲ್ಲ ಮಹಾಮಹಿಮಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವ
--------------
ಚನ್ನಬಸವಣ್ಣ
ದೇಶ ಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆ ಇಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೇ ಸುಖಿ. ನಿಧಾನಿಸಿ ಕೂಡಿದಲ್ಲಿಯೇ ತೃಪ್ತಿ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ, ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಮತ್ತಂ ಶಿವನು ಸರ್ವಾನುಗ್ರಹಕರ್ತೃವಹತನದಿಂದ ಬಾಲರು ಬಾಲಿಶರು ಭೋಗೀಶರುಗಳಿಗೆ ಅನುಗ್ರಹಮಾಡಲ್ತಕ್ಕುದೆಂಬಲ್ಲಿ, ಆಯಾ ಅನುಗ್ರಹವು ಅವರವರ ಸಂಸ್ಕಾರ ಪೂರ್ವಕವಾಗಿದ್ದಂಥಾದು. ಮತ್ತಮಾ ಸಂಸ್ಕಾರದಿಂದವೆ ಮುಕ್ತಿಯಪ್ಪುದೆಂದೊಡೆ ಕ್ರಿಯಾಜ್ಞಾನವ್ರತ ಮೊದಲಾದ ಉಪಾಯಂಗಳಿಗೆ ಕಾರಣವಿಲ್ಲದೆ ಹೋಗುವುದು. ಇಂತೆಂಬ ಚೋದ್ಯಮಂ ಪರಿಹರಿಸುತ್ತಿದನು. ಆರು ಕೆಲಂಬರು ಹೇಗೆ ಇದಾರು ಅವರಿಗೆ ಹಾಗೆ ಶಿವನು ಅನುಗ್ರಹ ಮಾಡುವನು. ಅದು ಹೇಗೆಂದೊಡೆ :ಕೆಲಂಬರು ಕ್ರಿಯಾಯೋಗ್ಯರು, ಅವರಿಗೆ ಕ್ರಿಯೆಯಿಂದವೆ ಮುಕ್ತಿಯಪ್ಪುದು. ಕೆಲಂಬರು ಜ್ಞಾನಯೋಗ್ಯರು. ಕೆಲಂಬರು ಚರ್ಯಾಯೋಗ್ಯರು. ಕೆಲಂಬರು ಯೋಗಾರ್ಹರು. ಈ ಪ್ರಕಾರದಲ್ಲಿ ಅರಿಗೆ ಅವುದರಿಂ ಮೋಕ್ಷವು ಪೇಳಲ್ಪಟ್ಟಿತ್ತು, ಅದು ಶಿವನ ಕೃಪೆಯತ್ತಣಿಂದಪ್ಪುದು. ಅದು ಕಾರಣ, ಜ್ಞಾನಾದ್ಯು ಪಾಯಂಗಳಿಗೆ ದೀಕ್ಷೆ ಕಾರಣವೆಂದು ಇಚ್ಚೈಸಲ್ಪಡುತ್ತಿದ್ದಿತು. ಅಂತದರಿಂ ದೀಕ್ಷೆಯಿಂದವೆ ಮೋಕ್ಷಮಪ್ಪುದು, ಉಪಾಯವೆ ನಿಯಾಮಕ ಮಪ್ಪುದು. ಮತ್ತಂ ಶಿವನು ಸರ್ವಾನುಗ್ರಹಕ್ಕೆ ಕರ್ತೃವಾದ ಕಾರಣ, ಆ ಉಪಾ ಯಂಗಳು ಶಿವನಿಂದವೆ ಉದಿತವಾಗಿದ್ದಂಥಾವು. ಇಂತೆಂದು ಕಾರಣಾಗಮ ಪೇಳೂದಯ್ಯಾ, ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಇನ್ನಷ್ಟು ... -->