ಇನ್ನು ಲಿಂಗೋತ್ಪತ್ಯವದೆಂತೆಂದಡೆ :
ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ
ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ
ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ.
ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು.
ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ.
ಈ ಆರೂ ನಾಮಂಗಳು ನಿಃಕಲತತ್ವ.
ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ
ಅಖಂಡಲಿಂಗವಾಯಿತ್ತು.
ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ.
ಇದಕ್ಕೆ ಚಿತ್ಪಿಂಡಾಗಮೇ :
``ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ |
ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ ||
ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ |
ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ ||
ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ |
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ ||
ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ ||
ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ |
ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ ||
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ |
ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||''
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ :
``ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ |
ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ ||
ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ |
ನಾದಬಿಂದು ಯುಕ್ತರೂಪಂ ಜಗತ್ಸ ೃಷ್ಟ್ಯರ್ಥಕಾರಣಂ ||
ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ |
ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ ||
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||
ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ |
ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ ||
ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ |
ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ ||
ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ |
ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ ||
ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ |
ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ ||
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||''
ಇಂತೆಂದುದಾಗಿ,
ಇದಕ್ಕೆ ಪ್ರಣವಾನಂದ ಸೂಕ್ತಿ :ಶ್ರೀ ಮಹಾದೇವ ಉವಾಚ-
``ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ |
ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ ||
ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ |
ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ ||
ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ |
ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ ||
ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ |
ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.