ಅಥವಾ

ಒಟ್ಟು 30 ಕಡೆಗಳಲ್ಲಿ , 14 ವಚನಕಾರರು , 24 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗ್ರಾಮ ಚೌಗ್ರಾಮದಲಿ ಸೀಮೆಗೆಟ್ಟುತದು ಸಿದ್ಧಗ್ರಾಮವ ಮುರಿದೊತ್ತುತೈದೂದೆ ಗ್ರಾಮಬಲ ನಾಶವಾಗೆ ಸೀಮೆಗೆಡಲು, ಸಾನಂದದ ಆನಂದಕ್ಕೆ ತನ್ನನು ಕಳೆದು, ನಾನಾ ಗುಣದಲ್ಲಿ ಭಾನು ವಿಕಸ ಪ್ರಬಲವನೆಯ್ದಿದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ರಸ ಗಂಧ ರೂಪ ಸ್ಪರ್ಶವೆಂಬ ಪಂಚೇಂದ್ರಿಯಂಗಳಲ್ಲಿ, ಲಿಂಗಕರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗದಲ್ಲಿ ವಿಷಾವರ್ತಿಸುವುದಲ್ಲದೆ, ಖಂಡಿತವಾಗಿ ನಿಂದುದಿಲ್ಲ. ಸರ್ವಾಂಗಲಿಂಗಿಗೆ ಬೇರೆ ಐದು ಸ್ಥಾನದಲ್ಲಿ, ಅರ್ಪಿತವ ಮಾಡಬೇಕೆಂಬುದಿಲ್ಲ. ಇಷ್ಟಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಾ ಅಯ್ಯಾ, ಪರುಷಸರ ಕೈಯಲ್ಲಿದ್ದು ಹೇಮವನರಸಿ ತಿರುಗುವನಂತೆ. ಖೇಚರತ್ವದಲ್ಲಿ ಬಹ ಸಾಮಥ್ರ್ಯವಿದ್ದಡೇನೊ, ಅಂಬಿಗನ ಹಂಗನರಸುವನಂತೆ. ನಿತ್ಯನಿತ್ಯ ತೃಪ್ತಂಗೆ ಉಂಡೆಹೆನೆಂದು ತಳಿಗೆ ಕಂಕುಳೊಳಗಿನ ತೆರನಂತೆ. ಸ್ವಯಂಜ್ಯೋತಿಯ ಬೆಳಗುಳ್ಳವಂಗೆ, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ. ವಾಯುಗಮನವುಳ್ಳವಂಗೆ ತೇಜಿಯನರಸುವಂತೆ. ಅಮೃತದ ಸೇವನೆಯುಳ್ಳವಂಗೆ ಆಕಳನರಸಿ ಬಳಲಿ ಬಪ್ಪವನಂತೆ. ತಾ ಬೈಚಿಟ್ಟ ನಿಕ್ಷೇಪದ ಹೊಲಬುದಪ್ಪಿ ಬಳಲುವನಂತೆ. ಇದು ಕಾರಣ, ಐದರ ಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ಮುಕ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ, ಭ್ರಾಂತ ಹರಿದು ಕಾಳಿಕೆಯೊಳಗಿಪ್ಪ ಕರಿಯ ಬಣ್ಣವ ಕಳೆದು, ಬೆಳಗಿನೊಳಗಿಪ್ಪ ಜ್ವಲಿತಮಂ ಕಡಿದು ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಕಂ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಲವು ಪಥದಿಂದ ಬಂದ ಜಲ ನಿಲುವುದೊಂದು ಸ್ಥಾಯಿಯಾಗಿ, ಕಟ್ಟು[ವಡೆ]ದಲ್ಲಿ ಒಂದೆ ದ್ವಾರದಿಂದ ಸೂಸಿ ಹಲವು ಸ್ಥಲಂಗಳ ಬೆಳೆಗೆ ಹೊಲಬಾದುದಾಗಿ. ಇಂತೀ ಗುಣದಲ್ಲಿ ನಾನಾ ವಿವರ: ಇಂದ್ರಿಯಂಗಳನೊಂದುಗೂಡಿ, ಸತ್ಕ್ರೀಮಾರ್ಗಂಗಳೆಂಬ ಘಟತಟಾಂಕಗಳಲ್ಲಿ ವಿಶ್ರಮಿಸಿ, ಏಕಚಿತ್ತದಲ್ಲಿ ನಾನಾ ಸ್ಥಲಂಗಳನಾರೋಪಿಸಿ, ವಿಶ್ವಸ್ಥಲಂಗಳಲ್ಲಿ ಪರಿಪೂರ್ಣವಾಗಿ, ವಸ್ತುವನೊಡಗೂಡಿಪ್ಪುದು ಕ್ರಿಯಾಪಿಂಡ ಜ್ಞಾನಪಿಂಡವಾದ ಭೇದ. ಉಭಯಲೇಪವಾದಲ್ಲಿ ಪಿಂಡಜ್ಞಾನ, ಜ್ಞಾನಲೇಪವಾದಲ್ಲಿ ಶಬ್ದಮುಗ್ಧ, ಸದ್ಯೋಜಾತಲಿಂಗದಲ್ಲಿ ಐಕ್ಯಭಾವ.
--------------
ಅವಸರದ ರೇಕಣ್ಣ
ಗುರುಕಾರುಣ್ಯವುಂಟು, ಭಕ್ತರೆಂದೆಂಬರು. [ಶೈವ]ಗುರುಕಾರುಣ್ಯವುಳ್ಳರೆ ಭಕ್ತರೆಂತಪ್ಪರಯ್ಯಾ, ಅಂಗದ ಮೇಲೆ ಲಿಂಗವಿಲ್ಲದನ್ನಕ್ಕ? ಪ್ರಸಾದಕಾಯವಾಗದನ್ನಕ್ಕ? ಈ ಪಂಚಭೂತ ಕಾಯವ ಪ್ರಸಾದಕಾಯವೆಂಬ ಹೆಸರಿಟ್ಟುಕೊಂಡು ನುಡಿವ ಪಾತಕರ ನುಡಿಯ ಕೇಳಲಾಗದು. ಪಂಚೇಂದ್ರಿಯಂಗಳ ಗುಣದಲ್ಲಿ ನಡೆವರನೊಳಗಿಟ್ಟುಕೊಂಡು ನಡೆದರೆ ಭಕ್ತಿಹೀನರೆನಿಸಿತ್ತು ಕೂಡಲಚೆನ್ನಸಂಗನ ವಚನ.
--------------
ಚನ್ನಬಸವಣ್ಣ
ಆವುದರಲಾದಡೇನು ನೀನು? ನೀನು ಮಹಾಸಮರ್ಥನಯ್ಯಾ ಧನದಲ್ಲಿ ಗುಣದಲ್ಲಿ ಹೆಂಪಿನ ಹೆಸರ ಹಿರಿಯನು ನೀನಯ್ಯಾ. ಅಯ್ಯಾ, ನೀನೆಲ್ಲರಲ್ಲಿ ಸಂಪನ್ನನಯ್ಯಾ, ಎನ್ನ ಕಪಿಲಸಿದ್ಧಮಲ್ಲೇಶ್ವರದೇವರ ದೇವ.
--------------
ಸಿದ್ಧರಾಮೇಶ್ವರ
ಕಾಯನೂ ಬಿಲ್ಲನೂ ಕೂಡೆ ಹಿಡಿದು ಎಸೆಯಬಹುದೆ? ಕ್ರೀಯನೂ ನಿಃಕ್ರೀಯನೂ ಕೂಡಿ ವೇದಿಸಿ ನಡೆಯಬಹುದೆ? ಕಾಯಿ ಹಣ್ಣಾಹನ್ನಕ್ಕ ಶಾಖೆಯ ಸಂಗ ಬೇಕು. ಹಣ್ಣು ನೆರೆ ಬಲಿದು ರಸ ತುಂಬಿದ ಮತ್ತೆ ತೊಟ್ಟಿಗೆ ಬಿಡುಗಡೆ. ಜ್ಞಾನ ರಸ ಕ್ರೀ ಮಲ ತನ್ನೊಳಗಿದ್ದು ತನ್ನ ಸ್ವಾದು ಬೇರಾದಂತೆ ಕ್ರೀ ಸಂಬಂಧ ಜ್ಞಾನಸಂಬಂಧ ಉಭಯವ ವಿಚಾರಿಸಲಿಕ್ಕಾಗಿ ನಿರವಯದಿಂದೊದಗಿದ ಸಾವಯವನರಿತು ನಿಃಕ್ರೀಯಿಂದಕೀವೊಡಲುಗೊಂಡುದ ಕಂಡು ಆದಿ ವಸ್ತುವಿಗೆ ಅನಾದಿ ವಸ್ತು ಬೀಜವಾದುದನರಿದು ನೀರಿಗೆ ಸಾರಬಂದು ರಸವಾದ ತೆರನಂತೆ ತಿಲ ಮರಳಿ ಹೊರಳಿ ಬೆಳೆವಲ್ಲಿ ಆ ರಸ ಬೇರಿಲೊ ಕೊನರಿಲೊ ಕುಸುಮದಲೊ ಕಾಯಲೊ? ಈ ಸರ್ವಾಂಗದೊಳಡಗಿ ಇದ್ದ ಠಾವ ಬಲ್ಲಡೆ ಕ್ರೀಜ್ಞಾನಸಂಬಂಧಿ. ಅದು ವಾರಿಯ ಸಾರದಿಂದ ಸಾಕಾರ ಬಲಿದು ನಿರಾಕಾರದ ಈ ಗುಣದಲ್ಲಿ ಒಂದರಿಂದ ಒಂದನರಿದೆಹೆನೆಂದಡೆ ಸಂದೇಹ ಮೊದಲಾದ ಸಂಶಯವರ್ತಕ ವಸ್ತುವಿನಲ್ಲಿ ವರ್ತಿಸಿ ವಸ್ತು ಆ ವಸ್ತುವ ಗರ್ಭೀಕರಿಸಿ ನಿಶ್ಚಯವಾದ ನಿಜ ಕ್ರೀ ನಿಃಕ್ರೀ ನಿರ್ವಾಹ ಗೋಪತಿನಾಥ ವಿಶ್ವೇಶ್ವರಲಿಂಗವನರಿತಲ್ಲಿ.
--------------
ತುರುಗಾಹಿ ರಾಮಣ್ಣ
ಶಿಲೆಯೊಳಗೆ ಪಾವಕನಿಪ್ಪ ತೆರನಂತೆ ಕಡೆ ನಡು ಮೊದಲೆನ್ನದೆ ಎಲ್ಲಿ ಮುಟ್ಟಿದಲ್ಲಿ ಕಿಡಿ ಪಲೈಸುವಂತೆ ಸರ್ವಾಂಗಲಿಂಗವಾದ ಶರಣಂಗೆ ಆವ ಗುಣದಲ್ಲಿ ನೋಡಿದಡೂ, ಅಲ್ಲಿಯೆ ಲಿಂಗ ಮುಂಚು. ತನಗೆ ಅನ್ಯ ಭಿನ್ನವೆಂಬ ಮುಟ್ಟಿನ ಸೂತಕ ಕಟ್ಟಿನ ಭಾವವಿಲ್ಲ. ಹಣ್ಣಿನಲ್ಲಿ ವಿಷ ವೇಧಿಸಲಿಕ್ಕಾಗಿ ಹಣ್ಣು ಸಾವುದೆ ಹಣ್ಣಿನ ರಸವ ಕೊಂಡವನಲ್ಲದೆ? ಈ ಗುಣ ಸರ್ವಾಂಗಲಿಂಗಿಯ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 88 ||
--------------
ದಾಸೋಹದ ಸಂಗಣ್ಣ
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ ಲಿಂಗಾರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ*ದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗಲಿಂಗಿಗೆ ಬೇರೆ ಐದುಸ್ಥಾನದಲ್ಲಿ ಅರ್ಪಿತವ ಮಾಡಬೇಕೆಂಬ ಜಡಸಂಕಲ್ಪವಿಲ್ಲ. ಇಷ್ಟಕ್ಕೂ ಭಾವಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಯ್ಯಾ. ಪರುಷದ ರಸ ಕೈಯಲ್ಲಿರ್ದು ಹೇಮವನರಸಿ ತಿರುಗುವವನಂತೆ, ಖೇಚರತ್ವದಲ್ಲಿ ಹೋಹ ಸಾಮಥ್ರ್ಯವಿರ್ದು, ಅಂಬಿಗನ ಹಂಗನರಸುವ ಅವಿಚಾರಿಯಂತೆ, ನಿತ್ಯತೃಪ್ತನಾಗಿರ್ದು ಅಂಬಲಿಯ ಬಯಸುವ ಕಾಳ್ವಿಚಾರಿಯಂತೆ, ಸ್ವಯಂಜ್ಯೋತಿ ಪ್ರಕಾಶದೊಳಗಿರ್ದು, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ, ವಾಯುಗಮನವುಳ್ಳಾತ ತೇಜಿಯನರಸುವಂತೆ, ಅಮೃತ ಸೇವನೆಯ ಮಾಡುವಾತ ಆಕಳನರಸಿ ಬಳಲುವಂತೆ, ತಾ ಬೈಚಿಟ್ಟ ನಿಕ್ಷೇಪವ ಹೊಲಬುದಪ್ಪಿ ಅರಸುವನಂತೆ ಆಗಬೇಡ. ಇದು ಕಾರಣ, ವೇದಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ತೃಪ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ ಭ್ರಾಂತು ಹರಿದು, ಬೆಳಗಿನೊಳಗಿಪ್ಪ ಜ್ವಲಿತವಂ ಕಡಿದು, ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಆನರಿದ ಭಕ್ತಿತ್ರಯ ಎಂತುಟೆಂದಡೆ: ತ್ರಿವಿಧ ಲಿಂಗ, ತ್ರಿವಿಧ ಗುರು, ತ್ರಿವಿಧ ಜಂಗಮ ತ್ರಿವಿಧ ಪಾದೋದಕ, ತ್ರಿವಿಧ ಪ್ರಸಾದ, ತ್ರಿವಿಧ ಆತ್ಮ; ತ್ರಿವಿಧ ಬುದ್ಧಿಯಲ್ಲಿ ತ್ರಿವಿಧ ಅರ್ಪಿತ ತ್ರಿವಿಧ ಅವಧಾನಂಗಳಿಂದ ತ್ರಿವಿಧ ಭೇದೋಪಭೇದಗಳಲ್ಲಿ ಎಚ್ಚತ್ತು, ತ್ರಿವಿಧ ಗುಣದಲ್ಲಿ ತ್ರಿವಿಧವನರಿತು, ತ್ರಿವಿಧ ಗುಣದಲ್ಲಿ ತ್ರಿವಿಧವ ಮರೆದು, ಅರಿದೆ ಮರೆದೆನೆಂಬ ಈ ಉಭಯ ನಷ್ಟವಾಗಿ ನಿಂದುದೆ ಸಾತ್ವಿಕ ಭಕ್ತಿ, ಸಜ್ಜನ ಯುಕ್ತಿ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
-->