ಅಥವಾ

ಒಟ್ಟು 37 ಕಡೆಗಳಲ್ಲಿ , 18 ವಚನಕಾರರು , 30 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಾಶ್ರಯದಲ್ಲಿ ಜನಿಸಿ ಭವಾಶ್ರಯವ ನೆನೆವ ಭಂಡರ ಮುಖವ ನೋಡೆ ನೋಡೆ. ಶಿವಾಶ್ರಯವೆ ಶ್ರೀಗುರುನಾಥನ ಕರಕಮಲವೆಂಬ ಪರಿ. ಭವಾಶ್ರಯವೆ ತನ್ನ ಹಿಂದಣ ಪೂರ್ವದ ಭವಿ ತಾಯಿ ತಂದೆ ಬಂಧು ಬಳಗವೆಂಬ ಪರಿ. ಇದು ಕಾರಣ ಗುರುಕರಜಾತನಾಗಿ ನರರ ಹೆಸರ ಹೇಳಿ ಹಾಡಿ ಹೊಗಳಿಸುವ ನರಕಿ ಭವಿಯ ಎನಗೊಮ್ಮೆ ತೋರದಿರಾ. ಆ ಕುಲಗೆಟ್ಟ ಹೊಲೆಯರ ಮುಖವ ನೋಡಲಾಗದು ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ, ಕೂರುಮ ದಿಗುದಂತಿ ದಿಗುವಳಯವ ನುಂಗಿ, ನಿಜಶೂನ್ಯ ತಾನಾದ ಬಳಿಕ, ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬಹುದೆ? ಕಂಗಳ ನೋಟದಲ್ಲಿ ಮನದ ಸೊಗಸಿನಲ್ಲಿ, ಅನಂಗನ ದಾಳಿಯನಗಲಿದೆನಣ್ಣಾ. ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಯೊಳಗಹುದೆ? ಎನ್ನದೇವ ಚೆನ್ನಮಲ್ಲಿಕಾರ್ಜುನನಲ್ಲದೆ ಪರಪುರುಷರು ನಮಗಾಗದಣ್ಣಾ.
--------------
ಅಕ್ಕಮಹಾದೇವಿ
ಪಶುಗಳು ಆಹಾರ ಮೈಥುನ ನಿದ್ರೆಗಳನ್ನು ಕಂಡಲ್ಲಿ, ಬಂದಲ್ಲಿ, ಅನುಭವಿಸುತ್ತಿರ್ಪುದರಿಂ ಪರಲೋಕದಲ್ಲಿ ಸುಖದುಃಖಾನುಭಗಳಿಲ್ಲದೆ, ಕಾಮಲೇಪವಿಲ್ಲದೆ, ಮನುಷ್ಯಜನ್ಮದಲ್ಲಿ ಮಾಡಿದ ಕರ್ಮಾನುಭವನಿಮಿತ್ತಮಾಗಿ, ಮರಳಿ ಮರಳಿ ತಿರ್ಯಗ್ರೂಪಮಾಗಿ ಜನಿಸಿ, ಆ ಕರ್ಮಾನುಭವವು ತೀರಲು, ಮನುಷ್ಯಜನ್ಮವನೆತ್ತಿ. ಆಹಾರಾದಿ ಸಕಲಪದಾರ್ಥಂಗಳಂ ದೊರಕಿಲ್ಲನುಭವಿಸದೆ, ರಾಗ ಲೋಭಯುಕ್ತಗಳಾಗಿ, ತಮ್ಮ ಮಂದಿರಕ್ಕೆ ತಂದು, ಪುತ್ರ ಮಿತ್ರ ಕಳತ್ರಯುಕ್ತವಾಗನುಭವಿಸಿ, ಮಿಕ್ಕುದಂ ಕೂಡಲಿಕ್ಕುದರಿಂ ಇಹದಲ್ಲಿ ಮಾಡಿದ ಕರ್ಮವಂ ಪರದಲ್ಲನುಭವಿಸಬೇಕಾಯಿತ್ತು. ಆದುದರಿಂದಂದಿಗೆ ದೊರೆತ ಪದಾರ್ಥವನಂದೇ ಅನುಭವಿಸಿ, ಲೋಭರಾಗಾಭಿಮಾನವಿಲ್ಲದಾತಂಗೆ ಕರ್ಮಲೇಪವಿಲ್ಲ. ಮನುಷ್ಯರಲ್ಲಿ ಕರ್ಮಲೇಪವಿಲ್ಲದಾತನೇ ವಿರಕ್ತನು, ಆತನೇ ಜೀವನ್ಮುಕ್ತನು. ಅಂತಪ್ಪ ನಿರ್ಲೇಪಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸಕೃತು ಸಂಸಾರದಲ್ಲಿ ಜನಿಸಿ, ಪ್ರಕೃತಿಗುಣವಳಿಯದೆ, ವಿಕೃತವೇಷವ ಧರಿಸಿ, ಸುಕೃತ ಮನುಜರ ಬೇಡುವ ಯಾಚಕನಲ್ಲ. ಲಿಂಗಾಭಿಮಾನಿಗಳನಲ್ಲದೆ, ತ್ರಿಭುವನ ಅಭವನ ಮುಖದಲ್ಲಿ ಬಂದುದನಲ್ಲದೆ ಕೈಕೊಳ್ಳ. ಕೂರ್ಮನ ಶಿಶುವಿನ ಆಪ್ಯಾಯನದಂತೆ, ಆರಾಧ್ಯ ಸಕಳೇಶ್ವರದೇವರಲ್ಲಿ, ದಯಾಮೃತವನುಂಬ ಶರಣನು.
--------------
ಸಕಳೇಶ ಮಾದರಸ
ಪರಮಜ್ಞಾನಕ್ಕೆ ಕರ್ತೃವಾದ ಸದಾಶಿವನೆ ಜೀವಭಾವದಿಂ ಪ್ರಪಂಚಿನ ಘಟದಿಂದೈದೆನುವಪ್ಪ ಪಂಚೇಂದ್ರಿಯಗಳ ಪಂಚವಿಷಯಂಗಳನರಿತರ್ಪಿಸಿ ತೃಪ್ತಿಯನೆಯ್ದಿ, ಆ ಜೀವನು ಅಂಡಜ ಸ್ವೇದಜ ಉದ್ಬಿಜ ಜರಾಯುಜಂಗಳೆಂಬ ಚತುರ್ವಿಧವರ್ಗಂಗಳೊಳು ಚತುರ್ದಶಭುವನದೊಳುದಯಿಸಿ, ಸ್ತ್ರೀ[ಪುಂನ]ಪುಂಸಕಾದಿಯಿಂ ಜನಿಸಿ, ಪುತ್ರ ¥õ್ಞತ್ರಂಗಳಿಂ ದೃಶ್ಯಮಾಗಿ ಯಸ್ಯ ಏವಂ ಆ ಮುನ್ನಿನ ಪರಮಜ್ಞಾನದಿಂದ ಜೀವನು ಸದಾಶಿವನಾದುದಕ್ಕೆ ಶ್ರುತಿ: ಯಥಾ ಖಲು ವೈ ಧೇನುಂ ತೀರ್ಥೇ ತರ್ಪಯತಿ ಏವಮಗ್ನಿ ಹೋತ್ರೀ ಯಜಮಾನಂ ತರ್ಪಯತಿ ಯಸ್ಯ ಪ್ರಜಯಾ ಪಶುಭಿಃ ಪ್ರತುಷ್ಯತಿ ಸುವರ್ಗಂ ಲೋಕಂ ಪ್ರಜಾನಾತಿ ಪಶ್ಯತಿ ಪುತ್ರ ಪೌತ್ರಂ ಪ್ರವ್ರಜಯಾ ಪಶುಭಿರ್ಮಿಥುನೈರ್ಜಾಯತೇ ಯಸ್ಯೇನಂ ವಿದುಷೋ[s]ಗ್ನಿಹೋತ್ರಂ ಯ ಏವಂ ವೇದ ಇಂತೆಂದುದಾಗಿ, ಸೌರಾಷ್ಟ್ರ ಸೋಮೇಶ್ವರಲಿಂಗ ಶಿವನಾಗಬಲ್ಲ ಜಗವಾಗಬಲ್ಲ ಜೀವವಾಗಬಲ್ಲನಯ್ಯಾ.
--------------
ಆದಯ್ಯ
ಅಷ್ಟಾವರಣ ಪಂಚಾಚಾರವುಳ್ಳ ಸದ್ಭಕ್ತರ ಉದರದಲ್ಲಿ ಜನಿಸಿ, ಶಿವಭಕ್ತನಾಗಿದ್ದು, ಭವಿಯ ಸಂಗವ ಮಾಡಿದ ದೇಹ ಪಾಪ. ಆ ಭವಿಯ ಸಂಗಕಿಂದಲೂ ಸುರಾಪಾನಿಯ ಸಂಗ ಪಾಪ. ಆ ಸುರಾಪಾನಿಯ ಸಂಗಕಿಂದಲೂ ಮಾಂಸಾಹಾರಿಯ ಸಂಗ ಪಾಪ. ಆ ಮಾಂಸಾಹಾರಿಯ ಸಂಗಕಿಂದಲೂ ಭಂಗಿಭಕ್ಷಕನ ಸಂಗ ಪಾಪ. ಆ ಭಂಗಿಭಕ್ಷಕನ ಸಂಗಕಿಂದಲೂ ಶಿವಭಕ್ತನಾಗಿ ಅನ್ಯದೈವವ ಭಜಿಸುವವನ ಸಂಗ ಅಂದೇ ದೂರ, ಹಿರಿಯ ನರಕವೆಂದಾತ, ನಮ್ಮ ದಿಟ್ಟ ವೀರಾಧಿವೀರ ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ತನು ಮನ ನೆನಹು, ಹಲವು ನೆನಹಾಗಿ ಜನಿಸಬಲ್ಲವೆ ಆತ್ಮನಿಲ್ಲದಿರಲು? ಉರಿಯಂತಲ್ಲ, ಹಿರಿದಪ್ಪ ನೆಳಲಂತಲ್ಲ, ಜಗದಂತಲ್ಲ, ಮುಗಿಲಂತಲ್ಲ. ಇರುಹೆ ಮೊದಲಾದ ಎಂಭತ್ತುನಾಲ್ಕು ಲಕ್ಷ ಜೀವಜಂತುಗಳಂತಲ್ಲ. ಇವ ಬಿಟ್ಟು ಬೇರೊಂದೆಡೆಯಲಿಪ್ಪುದಲ್ಲ. ತೆರಹಿಲ್ಲದಾತ್ಮಂಗೆ ಕುರುಹೊಂದಿಲ್ಲವಾಗಿ ತೋರಲಿಲ್ಲದಾತ್ಮನ ಬೀರಲಿಲ್ಲಾರಿಗೂ. ನಿಶ್ಶಬ್ದದಿಂ ಶಬ್ದ ಜನಿಸಿ, ಆ ಶಬ್ದ ನಿಶ್ಶಬ್ದದಲ್ಲಿಯೇ ಲಯವಪ್ಪಂತೆ. ಮಾನವಾತ್ಮನ ತಿಳವರಿವೆ ತಿಳಿವು. ಸೌರಾಷ್ಟ್ರ ಸೋಮೇಶ್ವರಲಿಂಗದಲ್ಲಿ ತನ್ನ ತಾನೇ ತನ್ನಿಂ ತನ್ನ ಬೆ[ಳೆ]ಯಬೇಕಯ್ಯಾ ಮಲ್ಲಿಕಾರ್ಜುನ.
--------------
ಆದಯ್ಯ
ಷಡಧ್ವಾಶ್ರಯವಾವ ಪರಬಿಂದುಸ್ಥಾನದ ಮೇಲಿರ್ದ ಷಡುಸ್ಥಲಮೂಲವಾದ ಪರಶಿವತತ್ವದೊಳು, ಷಡುಸ್ಥಲಲಿಂಗಾಂಗ ಜನಿಸಿ ತೋರಿತೆಂದಡೆ ಅಂಗ ಲಿಂಗಕ್ಕೆ ಭೇದವುಂಟೆ? ಇಲ್ಲದಾಗಿ. ಬೀಜಾಂಕುರದಂತೆ ಒಂದ ಬಿಟ್ಟು ಒಂದು ತೋರದು. ಇಂತಪ್ಪ ಲಿಂಗಾಂಗ ಸಂಬಂಧ ಸಕೀಲವನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣ ಬಲ್ಲನು.
--------------
ಸ್ವತಂತ್ರ ಸಿದ್ಧಲಿಂಗ
ಫಲ ವೃಕ್ಷ ತರು ಲತೆಗಳೆಲ್ಲ ತಮ್ಮ ಸಲಹಿದವರಾದಿ ಸಕಲರುಗಳಿಗೆ ವಂಚನೆಯಿಲ್ಲದೀಯುವಂತೆ ನಿಜತನಿರಸವನು, ಸಮ್ಯಕ್‍ಜ್ಞಾನಗುರುವಿನಿಂದೆ ಜನಿಸಿ ಬೆಳೆದ ಪರಮಸಾವಧಾನಿ ಶರಣನು ತನ್ನ ಸತ್ತುಚಿತ್ತಾನಂದಸ್ವರೂಪವಾದ ಗುರುಲಿಂಗಜಂಗಮಕ್ಕೆ ತನುಮನಧನದ ಚಿದ್ರಸಸ್ವಾದವನು ವಂಚನೆವಿರಹಿತನಾಗಿತ್ತು ಪರಿಣಾಮಿಸಿಕೊಂಡು ಲೀಲಾಲೋಲನಾಗಿರ್ದ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುವಿನಿಂ ಮನ ಜನಿಸಿ, ಮನದಿಂ ಹಲವು ನೆನಹುಗಳು ಜನಿಸಿದವಲ್ಲದೆ, ಅವನಿಲ್ಲದಷ್ಟಪುತ್ರರೆಂದೇನು? ನಡೆ ನುಡಿಯೊಳಗಲ್ಲವೆಯೆನುತ್ತಿಹಿ, ಉರಿಯ ಕಾರಣವೊ? ಹಿರಿದಪ್ಪ ನೆಳಲು ಮಾತ್ರದಿಂದ ತೋರುವದೊ? ವ್ಯೋಮದಂಥಾದಲ್ಲ, ಸೀಮೆ ಮುನ್ನಲಿಲ್ಲ. ನೇಮಿಸುವ ಪರಿಯದೆಂತೊ? ನಾಮವಿಟ್ಟರಿಯದ ಮುನ್ನ ಅರಿಯಲಿಲ್ಲ, ಹೇಳಲಿಲ್ಲದುದ ಮುನ್ನ ಕೇಳಲಿಲ್ಲ. ಪಂಚಾಂಗ ಮಧ್ಯದಲ್ಲಿಪ್ಪ ಮನವಲ್ಲ. ವಾಙ್ಮನಕ್ಕಗೋಚರವೆಂದ ಬಳಿಕ ನಾಮವಿಡಲಿಲ್ಲ ಕಾಣಾ, ನಿಃಕಳಂಕ ಶಾಂತಮಲ್ಲಿಕಾರ್ಜುನ ದೇವರೆಂಬ ನಾಮ ನಿಶ್ಶಬ್ದದಲ್ಲಿಯರಿ[ಯೆ] ಕಾಣಾ, ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, ನೂರೊಂದು ಕುಲ, ಹದಿನೆಂಟು ಜಾತಿಯವರಿಗೆ ಶಿರಬಾಗಿ ಶರಣುಮಾಡುವರು. ಗುರುಕೊಟ್ಟ ಇಷ್ಟಲಿಂಗದ ಪೂಜೆಯ ಬಿಟ್ಟು, ಶೈವರು ಸ್ಥಾಪಿಸಿದ ನಟ್ಟಕಲ್ಲು ಸ್ಥಾವರ ಶೈವಲಿಂಗವ ಪೂಜಿಸುವವರು, ಮರಳಿ ವಿಪ್ರ ಪಂಚಾಳ ಕುಲದವರು ಮೊದಲಾಗಿ ಅನೇಕ ಭವಿಗಳಲ್ಲಿ ಜನಿಸಿ, ಹುಲಿಗಿ, ಎಲ್ಲಿ, ಬನಶಂಕರಿ, ಕಾಳಿ, ಜಟ್ಟಿಂಗ, ಹಿರಿಯೊಡಿಯ ಲಕ್ಕಿ, ದುರ್ಗಿದೇವಿ ಮೊದಲಾದ ಬೀದಿಬಜಾರದಲ್ಲಿರುವ ಅಧಮ ಕ್ಷೀಣ ದೇವತೆಗಳ ಪೂಜಿಸುವವರು. ಜಂಗಮವ ಕಂಡು ಜರಿದು ಜಂಗುಳಿದೈವಕ್ಕೆ ಜನಿಗಿಯ ಬಿಟ್ಟು, ಒಂದ್ಹೊತ್ತು ಉಪವಾಸ ಮಾಡಿ ಮಡಿಗಳನುಟ್ಟು, ಎಡಿಯ ಕೊಟ್ಟುಂಬುವವರು ಮರಳಿ ಆ ದೇವತೆಗಳ ಸೇವಕರಾಗಿ ಪುಟ್ಟುವರು. ಅನ್ನೋದಕದ ಪೂರ್ವಾಶ್ರಯವನಳಿಯದೆ ಲಿಂಗಕ್ಕೆ ತೋರಿ ಉಂಬವರೆಲ್ಲ ಮರಳಿ ಹೆಂಡಗಾರ ಕಟುಕರಲ್ಲಿ ಜನಿಸಿ ಕಂಡ ಹೆಂಡ ಸೇವಿಸುವರು. ಇಂತಪ್ಪರಿಗೆ ಶಿವನು ಒಲಿ ಒಲಿ ಎಂದರೆ ಎಂತೊಲಿವನಯ್ಯ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸತ್ತು ಮಣ್ಣಾಗಿ ಹೋದ ಮಾತಾಪಿತರುಗಳು ತಮ್ಮ ಸಂತಾನವಾಗಿ ಜನಿಸಿ ಬಂದರೆಂದು ಹೆತ್ತು ಹೆಸರಿಟ್ಟು ಕರೆವರಯ್ಯಾ. ಕಾಗೆಯ ಬಾಯ ಕರಗದ ಬಾಯೋಗರವ ಕೊಂಡು ಅನ್ಯದೈವಂಗಳ ಪೂಜಿಸುವ ಲೋಗರವರ ಕೈಯಲುಪದೇಶವ ಮಾಡಿಸಿಕೊಂಡ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವಿಂಗೆ ಅವರಿಬ್ಬರಿಗೆಯೂ ಅಜ್ಞಾನಭವಂ ನಾಸ್ತಿಯಾಗದೆ ಭವಸಾಗರದೊಳಗವರಿಬ್ಬರೂ ಅಳುತ್ತ ಮುಳುಗುತ್ತಲಿಹರು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಒಂದನೆಯ ಬೀಜ ಬಿತ್ತಿ ಬೆಳೆಯದಲೆ ಬೆಳೆಯಿತ್ತು. ಎರಡನೆಯದು ಬೀಜ ಸೃಷ್ಟು ್ಯನ್ಮುಖವಾಯಿತ್ತು.್ವ ಮೂರನೆಯ ಬೀಜ ಅಲ್ಲಲ್ಲಿ ಜನಿಸಿತ್ತು. ನಾಲ್ಕನೆಯ ಬೀಜ ಮತ್ರ್ಯದಲ್ಲಿ ಜನಿಸಿ ಅಂಕುರಿಸಿತ್ತು. ಐದನೆಯ ಬೀಜ ಇದ್ದು ಇದ್ದು ಅಂಕುರಿಸದು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಪಕ್ಷಿ ಜನಿಸಿ ಅಮೃತವನರಿಯದಂತೆ, ಶಿವನಲ್ಲದೆ ಅನ್ಯದೈವ ಭಜನೆಯುಳ್ಳವರೇತಕ್ಕೆ ಬಾತೆ ? ಅನ್ಯಾಯಿತ ವಧೆಯ ಮಾಡುವ ಅರ್ತಿಕಾರ ದೋಷವನರಿಯ. ಪಾಪಿಯ ಕೈಯ ದಾರ, ಗಾಳದ ಕೊನೆಗೆ ಬಂದುಂಡ ಮತ್ಸ್ಯದ ಲಕ್ಷಣದಂತೆ, ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಾಚಾರವನರಿಯದೆ ದುರಾಚಾರಕ್ಕೆರಗುವರು, ಹಿರಿಯದೈವವನರಿಯದೆ, ಕಿರುಕುಳದೈವವಂ ಪಿಡಿವರು. ಕೇಶವಂಗೆ ದಾಸತ್ವಮಂ ಮಾಡಿದಡೆ ಪ್ರತ್ಯಕ್ಷ ಮುಡುಹ ಸುಡಿಸನೆ ? ಮೈಲಾರದೇವರೆಂಬವರ ನಾಯಾಗಿ ಬಗುಳಿಸನೆ ? ಜಿನ ದೈವವೆಂಬವರ ತಲೆಯ ತರಿಸನೆ ? ಹುಲುದೈವವ ಪೂಜಿಸಿದವರು ಕೈಲಾಸದ ಬಟ್ಟೆಯ ಹೊಲಬುದಪ್ಪಿದರು. ಮುನ್ನ ಮಾಡಿದವರಿಗಿದಿಯಾಯಿತ್ತು. ಇನ್ನು ಮಾಡುವರಿಗೆ ವಿಧಿಯಹುದೊ. ನಮ್ಮ ದೇವರಾಯ ಸೊಡ್ಡಳಂಗೆ ಒಂದರಳನೇರಸಿದವ, ಕೈಲಾಸಕ್ಕೆ ಹೋದನು.
--------------
ಸೊಡ್ಡಳ ಬಾಚರಸ
ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ, ನೂರೊಂದುಕುಲ ಹದಿನೆಂಟುಜಾತಿಗಿಕ್ಕಿದ, ಅನಂತದೈವದುಚ್ಫಿಷ್ಟೋದಕ ಅದರೆಂಜಲನ್ನಪಾನ್ಯವ ತಂದು, ಶ್ರೀಗುರು ಕರುಣಿಸಿಕೊಟ್ಟ ಇಷ್ಟಲಿಂಗಕ್ಕೆ ನೈವೇದ್ಯವ ಮಾಡಿ ಭುಂಜಿಸುವ ಮೂಳಹೊಲೆಯರ ಮನೆಯಲ್ಲಿ ಮಾಡಿದ ಪಾಕವನು, ತ್ರಿವಿಧದೀಕ್ಷಾನ್ವಿತವಾದ ಇಷ್ಟಮಹಾಲಿಂಗಕ್ಕೆ ಅರ್ಪಿಸಿ ಭುಂಜಿಸುವ ಅಧಮ ಹೊಲೆಯರು, ಶತಸಹಸ್ರವೇಳೆ ಶುನಿಸೂಕರಾದಿಗಳಲ್ಲಿ ಜನಿಸಿ, ಅಂತ್ಯದಲ್ಲಿ ಕಾಲಕಾಮರ ಪ್ರಳಯಕ್ಕೊಳಗಾಗದೆ ಮಾಣ್ಬರೇನೊ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
-->