ಅಥವಾ

ಒಟ್ಟು 33 ಕಡೆಗಳಲ್ಲಿ , 10 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮ ನಲ್ಲನೂ ನಾವೂ ನೆರೆವಲ್ಲಿ ಅವ ಬಂದು ರುsುಳಪಿಸುವ ಹಾಹಾ ಯ್ಯಾ ಯ್ಯಾ ಯ್ಯಾ. ಅವಗೆ ನಿಮಗೆ ಮತ್ಸರವುಂಟು. ಆತನ ಕೈಕಾಲ ಛೇಸಿ ನಾವು ನಿಶ್ಚಿಂತ ಮನೆಗೆ ಹೋಹ ಬಾರಾ ಬಾರಾ ಎಂದಳು ಕಪಿಲಸಿದ್ಧಮಲ್ಲಿನಾಥಯ್ಯನ.
--------------
ಸಿದ್ಧರಾಮೇಶ್ವರ
ನೆರೆಮನೆಯ ಕೇರಿಯೊಳಗೆ ಗುರುಕರುಣ ಪಾತ್ರೆಯ ಹರುಷದಿಂದ ಭಿಕ್ಷವ ತಂದೆ ಅವ್ವಾ, ಕರಣ ಶುದ್ಧಮಾಡಿ ಉಣ್ಣ ಬಾರಾ. ನೆನಹಿನ ಗುಣದಲ್ಲಿ ಕರುಣ ಕಾನನದಲ್ಲಿ ತೆರಹುಗೆಟ್ಟು ಇದ್ದೆನು ಕಂಡಾ. ಕರುಣಾಕರನೆ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನೆನಹಿನಲ್ಲಿ ೀಯವಾದೆನು.
--------------
ಸಿದ್ಧರಾಮೇಶ್ವರ
ಇಷ್ಟವೆಂಬುದು ಗುರುವಿನ ಹಂಗು ಆ ಗುರುವಿಂಗೆಯು, ಇಷ್ಟಲಿಂಗಕ್ಕೆಯು, ಜಂಗಮವೆ ಪ್ರಾಣಾಪದವೆಂದರಿದ ಬಳಿಕ ಆ ಗುರುವೂ ಇಷ್ಟವೂ ಜಂಗಮದಲ್ಲಿಯೇ ಅಡಕ ನೋಡಾ! ಆ ಗುರುವೂ ಲಿಂಗವೂ ಜಂಗಮದ ಹಂಗಿಗರು! ಇದು ಕಾರಣ ಚಂದೇಶ್ವರಲಿಂಗಕ್ಕೆ ಕಣ್ಣಿಯ ಮಾಡಬಲ್ಲಡೆ ಬಾರಾ ಎನ್ನ ತಂದೆ.
--------------
ನುಲಿಯ ಚಂದಯ್ಯ
ಕರ್ಮದ ಗಡಣ ಹಿಂಗಿಸು ; ಪಾಪದ ರಾಶಿಯ ತೊಲಗಿಸು; ಸಂಸಾರದಾಶೆಯ ಬೆಂದ ಮನದ ಕಾಟವ ಮಾಣಿಸು. ಮಾಯದ ತಲೆಯನರಿದು ಮರಳಿ ಬಾರಾ ಎನ್ನ ಕರಕ್ಕೆ, ನಿಮ್ಮ ಧರ್ಮ. ನಿಮಗಾಣೆ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಮಾತೆಪಿತರುಗಳಿಂದೆ ಉದಯವಾದ ಸುತನು ಮಾತೆಪಿತರುಗಳ ನಾಮವಿಡಿದು ಗಳಿಸಿದರ್ಥವ, ಮಾತೆಪಿತರು ತನ್ನ ಪ್ರಾಣವಾಗಿ ಸುಖಿಸಿ ಬಾಳಿದರೆ ಲೋಕಧರ್ಮಿಗಳು ಮೆಚ್ಚುವರು, ಮರೆದು ಬಾಳಿದರೆ ಪಾತಕನೆಂಬುವರು. ಚಿದ್ಘನ ಗುರುವಿನಿಂದುದಯವಾದ ಚಿಲ್ಲಿಂಗಭಕ್ತನು, ಚಿದಾನಂದ ದ್ರವ್ಯವ ಗಳಿಸಿ ಸತ್ತುಚಿತ್ತಾನಂದ ಪ್ರಾಣವಾಗಿ ಸುಖಿಸಿ ಬಾಳಿದರೆ ಆ ಲೋಕಧರ್ಮಿಗಳಾವರಿಸಿಕೊಂಬುವರು, ಮರೆದು ಸುಖಿಸಿದರೆ ಭವಕರ್ಮಿಯೆಂಬುವರು. ಇದನರಿದು ಬಂದೆ ನೀ ನೋಡಿ ಬಾರಾ ಎನ್ನ ಪ್ರಾಣವಾದ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಕ್ತಿಭಾವದ ಭಜನೆ ಎಂತಿದ್ದುದಂತೆ ಅಂತರಂಗದಲ್ಲಿ ಅರಿವು, ಆ ಅಂತರಂಗದಲ್ಲಿ ಅರಿವಿಂಗೆ ಆಚಾರವೆ ಕಾಯ, ಆ ಆಚಾರಕಾಯವಿಲ್ಲದೆ ಅರಿವಿಂಗಾಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯ, ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗಚ್ಚಾಗಿ ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರಲಿಂಗ ನಿನ್ನ ಕೈವಶಕ್ಕೊಳಗಾದನು. ನಿನ್ನ ಸುಖಸಮಾಧಿಯ ತೋರು ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
ಅಯ್ಯಾ, ನೀನೇಕೆ ಬಾರೆಯೊ ಹೇಳಯ್ಯಾ. ಅಯ್ಯ, ನೀ ಬಾರಯ್ಯ. ಬಂದೆನ್ನ ಹೃದಯ ಮನ ಹಸನಮಾಡಿ ನೀನು ನಿಲ್ಲಯ್ಯ. ಅಯ್ಯ, ನೀನು ಬಾರಾ ನಿನ್ನ ಧರ್ಮ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು, ದೇವಾಂಗವನುಟ್ಟೆನೆಲೆ ಪುರುಷ ಬಾರಾ, ಪುರುಷ ರತ್ನವೆ ಬಾರಾ. ನಿನ್ನ ಬರವೆನ್ನ ಅಸುವಿನ ಬರವಾದುದೀಗ, ಬಾರಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ, ನೀನು ಬಂದಹನೆಂದು ಬಟ್ಟೆಯ ನೋಡಿ ಬಾಯಾರುತಿರ್ದೆನು.
--------------
ಅಕ್ಕಮಹಾದೇವಿ
ಅನಂತ ಭವಭವದಲ್ಲಿ ಬಂದು ನಾನು ಶಾಂತನಾದೆ ಅಯ್ಯಾ, ನಿನ್ನ ಪ್ರಸಾದವನು ನಾನಾ ಭವದಲ್ಲಿ ಕಾಣೆ, ತಂದೆ. ನಿನ್ನ ಪಾದೋದಕವನು ನಾನಾ ಭವದಲ್ಲಿ ಕಾಣೆ, ತಂದೆ. ಕವಿಲೆಯ ಕಂದನಂತೆ ನಾನಿದ್ದೇನೆಂದು ಬಾರಾ, ಶಿವನೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಂಗೈಯೊಳಗಣ ಅಂಗಜಾರಿಗೆ, ಅಂಗಜನ ಸ್ನೇಹಿತರ ಪಾದಾಂಬುವನೆರೆವನ ಅಂಗ ಚಾಂಡಾಲನಂಗ. ಆತನ ಗೃಹ ಶ್ವಪಚನ ಮನೆ, ಆತನ ಸಂಗ ಮದ್ಯಪಾನ ಸಂಗ. ಆತನ ವಾಕ್ಯ ನಿಶಿತಾಸ್ತ್ರ, ಆತನ ಹೊದ್ದರವೆ ಸತ್ತ ನಾಯ ಕೊಳೆದೊಗಲು. ಆತನ ಗುರು ನರ, ಆತನ ಲಿಂಗ ಶಿಲೆ. ಆತನ ಅಧಿದೈವ ಪಿಶಾಚಿ, ಆತನ ವಿದ್ಯೆ ರಾಕ್ಷಸವಿದ್ಯೆ! ಇದು ತಪ್ಪದು, ಇದು ತಪ್ಪದು! ಇದು ತಪ್ಪೆನ್ನದು! ಇದು ಪುಸಿಯಾದಡೆ, ಮೂಗ ಕೊಯ್ ಬಾರಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಸಲ್ಲ ದುರಾಗತವು, ಅಯ್ಯಾ. ನೀನೇಕೆ ಬಾರೆ? ಒಲ್ಲೆಯೇಕೆ? ಹೇಳಾ ಅಯ್ಯಾ, ನೀ ಬಾರಯ್ಯ, ಬಂದೆನ್ನ ಹೃದಯ ಮನಸಾಸನಮಾಡಿ ನಿಲ್ಲಯ್ಯ. ಅಯ್ಯಾ ನೀ ಬಾರಾ, ಬಾರಾ ನಿನ್ನ ಧರ್ಮ, ಕಪಿಲಸಿದ್ಧಮಲ್ಲಿಕಾರ್ಜುನಯ್ಯ.
--------------
ಸಿದ್ಧರಾಮೇಶ್ವರ
ಗುರುಪೂಜೆಯನರಿದೆನೆಂದು ಲಿಂಗಪೂಜೆಯ ಬಿಡಲಾಗದು. ಲಿಂಗಪೂಜೆಯನರಿದೆನೆಂದು ಜಂಗಮಪೂಜೆಯ ಮರೆಯಲಾಗದು. ಜಂಗಮಪೂಜೆಯನರಿದೆನೆಂದು ಶರಣಸಂಗವ ಮರೆಯಲಾಗದು. ಇದು ಕಾರಣ, ಶರಣಸಂಗದ ಸಮ್ಯಗ್‍ಜ್ಞಾನದಲಲ್ಲದೆ ಕಲಿದೇವಯ್ಯನ ಕೂಡುವ ಕೂಟ ಕಾಣಬಾರದು, ಹೋಹ ಬಾರಾ ಚಂದಯ್ಯಾ.
--------------
ಮಡಿವಾಳ ಮಾಚಿದೇವ
ಇರುಳು ಹಗಲು ಎಮ್ಮ ನೆನೆವುತ್ತ, ಮರೆವುತ್ತ, ಮರುಗುತ್ತ, ಕುದಿಯುತ್ತ ಇಪ್ಪೆಯೋ ಕಂದಾಯೆಂದು, ಇತ್ತಿತ್ತ ಬಾರಾ ಮಗನೆಯೆಂದು, ನಿಮ್ಮ ಶ್ರೀಚರಣದಿಂದಯೆಂದು ಕರೆದಿರೆನ್ನ. ಭಕ್ತಿಯ ಕೊಡಯ್ಯಾ. ಶ್ರೀಮಲ್ಲಿಕಾರ್ಜುನಯ್ಯಾ ಎಂದಡೆ, ಹಿಡಿಯೋ ಮಗನೆ ಎಂದೆಂಬಿರೆನ್ನ.
--------------
ಮಲ್ಲಿಕಾರ್ಜುನ ಪಂಡಿತಾರಾಧ್ಯ
ಬಿಳಿಯ ಮುಗಿಲ ನಡುವಣ ಕರಿಯನಕ್ಷತ್ರ ಮಧ್ಯದಲ್ಲಿ ಉರಿಯ ಅಂಕುರ ಹುಟ್ಟಿ ಒಂದೆರಡೆಂಬಂತೆ ತೋರುತ್ತದೆ, ಹೊಸ್ತಿಲ ಜ್ಯೋತಿಯಂತೆ ಒಳಹೊರಗೆ ಬೆಳಗುತ್ತದೆ. ಅದು ನೋಡಿದಡೆ ಘನ, ನೋಡದಿದ್ದಡೆ ಸಹಜ. ಈ ಭೇದವ ಗುಹೇಶ್ವರಲಿಂಗದಲ್ಲಿ ಚನ್ನಬಸವಣ್ಣ ಬಲ್ಲನು. ಬೆಸಗೊಂಬ ಬಾರಾ ಸಿದ್ಧರಾಮಯ್ಯಾ.
--------------
ಅಲ್ಲಮಪ್ರಭುದೇವರು
-->