ಅಥವಾ

ಒಟ್ಟು 18 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿವ ಹಾವಿಂಗೆ ಹಾಲನೆರೆವ ಪ್ರಾಣಿಗಳು ಹಾವಿನ ಅಂತರಂಗವನೆತ್ತ ಬಲ್ಲರು ಹೇಳಾ ? ಕೈಲೆಡೆಗೊಟ್ಟ ಲಿಂಗಕ್ಕೆ ಮಜ್ಜನಕ್ಕೆರೆವ ಪ್ರಾಣಿಗಳು ಪ್ರಾಣಲಿಂಗಸಂಬಂಧ ಸಕೀಲವನೆತ್ತ ಬಲ್ಲರು ಹೇಳಾ ? ಪಾಣಿನಾ ಧೃತಲಿಂಗಂ ತತ್ ಪ್ರಾಣಸ್ಥಾನೇ ವಿನಿಕ್ಷಿಪೇತ್ ಯಸ್ತು ಭೇದಂ ನ ಜಾನಾತಿ ನ ಲಿಂಗಂ ಸತ್ಯ ನಾರ್ಚನಂ ಲಿಂಗ ಜಂಗಮ ಒಂದೆಂದರಿಯದವರ ಮಾಟ [ಅವರ] ವಿಧಿಯಂತೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುಲಿಂಗಜಂಗಮ ಸನುಮತವಾದ ಕ್ರೀಯನು ಅಹುದಾಗದೆಂಬ ಸಂದೇಹಬೇಡ. ಕ್ರೀವಿಡಿದು ತನುವ ಗಮಿಸೂದೂ, ಅರಿವಿಡಿದು ಮನವ ಗಮಿಸೂದು. ಕ್ರಿಯಾದ್ವೈತಂ ನ ಕರ್ತವ್ಯಂ ಭಾವಾದ್ವೈತಂ ಸಮಾಚರೇತ್ ಕ್ರಿಯಾಂ ನಿರ್ವಹತೇ ಯಸ್ತು ಭಾವಶುದ್ಧಂ ತು ಶಾಂಕರಿ ಎಂದುದಾಗಿ ಅನುಭಾವದಿಂದ ಸಕಳೇಂದ್ರಿಯಂಗಳು ಕೂಡಲಚೆನ್ನಸಂಗಯ್ಯನಲ್ಲಿಯೆ ತದ್ರೂಪು.
--------------
ಚನ್ನಬಸವಣ್ಣ
`ಏಕಮೂರ್ತಿಸ್ತ್ರಯೋ ಭಾಗಾ ಗುರುರ್ಲಿಂಗಂತು ಜಂಗಮಃ' ಎಂದುದಾಗಿ ಪರತರಪರಂಜ್ಯೋತಿಯಪ್ಪ ಮಹಾಲಿಂಗವೆ ಲೋಕಾನುಗ್ರಹಕ್ಕಾಗಿ- ಅಗ್ಗಣಿಯೆ ಅಣಿಕಲ್ಲಾದಂತೆ, ಕರಗಿದ ತುಪ್ಪವೆ ಹೆತ್ತುಪ್ಪವಾದಂತೆ. ಗುರು ಲಿಂಗ ಜಂಗಮವಾಗಿ ಪರಿಣಮಿಸಿರ್ಪುದು ಕಾಣಾ ! ಆ ಗುರುತತ್ವದಿರವನರಿದು ಗುರುವಾಗಿ ಗುರುಲಿಂಗವ ಪೂಜಿಸಬೇಕು. ಲಿಂಗತತ್ವದಿಂಗಿತವನರಿದು ಲಿಂಗವಾಗಿ ಶಿವಲಿಂಗವ ಪೂಜಿಸಬೇಕು. ಜಂಗಮತತ್ವದಿಂಗಿತವನರಿದು ಜಂಗಮವಾಗಿ ಜಂಗಮವ ಪೂಜಿಸಬೇಕು. ಇಂತೀ ತ್ರಿವಿಧಲಿಂಗವ ಪೂಜಿಸಿ ತ್ರಿವಿಧ ಪಾದೋದಕವ ಪಡೆಯಬೇಕು. ಇದೇ ಅಂತರಂಗದ ಆತ್ಮತೀರ್ಥ, ಕಾಣಾ ! ``ಅಂತಸ್ಥಂ ಮಾಂ ಪರಿತ್ಯಜ್ಯ ಬಹಿಸ್ಥಂ ಯಸ್ತು ಸೇವತೇ ಹಸ್ತಸ್ಥಪಿಂಡಮುತ್ಸುೃಜ್ಯ ಲಿಹೇತ್ಕೂರ್ಪರಮಾತ್ಮನಃ ಎಂದುದಾಗಿ, ಪರಿಶುದ್ಧವಾದ ಅಂತರಂಗದ ಆತ್ಮತೀರ್ಥವನುಳಿದು, ಬಹಿರಂಗದ ಜಡತೀರ್ಥವ ಸೇವಿಸಿದಡೆ ಷಡ್ರಸದಿಂದೊಡಗೂಡಿದ ಪರಮಾನ್ನದ ಪಿಂಡವನುಳಿದು ಮೋಳಕೈಯ ನೆಕ್ಕಿದಂತಕ್ಕು ಕಾಣಾ-ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
-->