ಅಥವಾ

ಒಟ್ಟು 60 ಕಡೆಗಳಲ್ಲಿ , 12 ವಚನಕಾರರು , 54 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಮಾಹೇಶ್ವರನಲ್ಲಿಯ ಪ್ರಸಾದಿಗೆ ಅಪ್ಪುವಿನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಬುದ್ಧಿಯಲ್ಲಿಯ ನಿರಹಂಕಾರವೆ ಹಸ್ತ. ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಶಿವಲಿಂಗವೆ ಲಿಂಗ. ಆ ಶಿವಲಿಂಗಮುಖದಲ್ಲಿ ಖಾರವಾದ ರುಚಿಯ ದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಪ್ರಾಣಲಿಂಗಿಯಲ್ಲಿಯ ಭಕ್ತಂಗೆ ವಾಯುವಿನಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಆಚಾರಲಿಂಗವೆ ಲಿಂಗ. ಆ ಆಚಾರಲಿಂಗಮುಖದಲ್ಲಿ ಕಠಿಣವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತಂಗೆ ಪೃಥ್ವಿಯೆ ಅಂಗ, ಆ ಅಂಗಕ್ಕೆ ಸುಚಿತ್ತವೆ ಹಸ್ತ, ಆ ಹಸ್ತಕ್ಕೆ ಕರ್ಮಸಾದಾಖ್ಯ, ಆ ಸಾದಾಖ್ಯಕ್ಕೆ ಕ್ರಿಯಾಶಕ್ತಿ, ಆ ಶಕ್ತಿಗೆ ಆಚಾರವೆ ಲಿಂಗ, ಆ ಲಿಂಗಕ್ಕೆ ನಿವೃತ್ತಿಯೆ ಕಲೆ, ಆ ಕಲೆಗೆ ಘ್ರಾಣೇಂದ್ರಿಯವೆ ಮುಖ, ಆ ಮುಖಕ್ಕೆ ಸುಪರಿಮಳದ್ರವ್ಯಂಗಳನು ರುಚಿತೃಪ್ತಿಯನರಿದು ಸದ್ಭಕ್ತಿಯಿಂದರ್ಪಿಸಿ ಸುಗಂಧಪ್ರಸಾದವ ಭೋಗಿಸಿ ಸುಖಿಸುತ್ತಿಹನು ಕೂಡಲಚೆನ್ನಸಂಗಾ ನಿಮ್ಮ ಭಕ್ತನು
--------------
ಚನ್ನಬಸವಣ್ಣ
ಆ ಶರಣನಲ್ಲಿಯ ಪ್ರಾಣಲಿಂಗಿಗೆ ಆಕಾಶದಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗದ ಮುಖದಲ್ಲಿ ಕೊಳಲು ನಾಗಸ್ವರ ಶಂಕುದೊಳಗಾಗಿ ಪುಟ್ಟಿದ ಶಬ್ದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹರನಿಂದೆ ಗುರುನಿಂದೆ ಪರನಿಂದ್ಯವ ತೊರೆದು ಶಿವಕೇಳಿಯೊಳಿಂಬುಗೊಂಡ ಕರ್ಣಕ್ಕೆ ಕರ್ಣೇಂದ್ರಿಯವೆಲ್ಲಿಹುದೋ ? ಕಾಮವೆಂಬ ಶೀತ, ಕ್ರೋಧವೆಂಬ ಉಷ್ಣ , ಮೋಹನ ಮುದ್ದುಮುಖ ಮೊಲೆ, ಅಂಗನೆಯೆಂಬ ಮೃದು, ವಿಷಯಾತುರವೆಂಬ ಕಠಿಣವ ಮುಟ್ಟದೆ, ಲಿಂಗ ಮುಟ್ಟಿ ಲಿಂಗವ ಪೂಜಿಸಿ ಲಿಂಗವ ಮೋಹಿಪ ಹಸ್ತಕ್ಕೆ ತ್ವಗಿಂದ್ರಿಯವೆಲ್ಲಿಯದೋ ? ಶ್ವೇತ ಪೀತ ಹರಿತ ಮಾಂಜಿಷ್ಟ ಮಾಣಿಕ್ಯ ಕಪೋತವರ್ಣವೆಂಬ ಷಡುರೂಪವ ಕಳೆದು ಲಿಂಗದ ಷಡುರೂಪದೊಳಿಂಬುಪಡೆದುಕೊಂಡು ಅನುಮಿಷದೃಷ್ಟಿ ಇಟ್ಟ ನಯನಕ್ಕೆ ನೇತ್ರೇಂದ್ರಿಯವೆಲ್ಲಿಯದೊ ? ತಿಕ್ತ ಕಟು ಕಷಾಯ ಮಧುರ ಆಮ್ಲ ಲವಣವೆಂಬ ಷಡುರುಚಿಗೆಳಸದೆ, ಲಿಂಗಾನುಭಾವಾಮೃತವ ಸೇವಿಪ ಜಿಹ್ವೆಗೆ ಜಿಹ್ವೇಂದ್ರಿಯವೆಲ್ಲಿಯದೋ ? ಗಂಧ ದುರ್ಗಂಧವನಳಿದು ಸ್ವಾನುಭಾವಸದ್ವಾಸನೆಗೆಳಸಿಪ್ಪ ನಾಸಿಕಕ್ಕೆ ಘ್ರಾಣೇಂದ್ರಿಯವೆಲ್ಲಿಯದೋ ? ಇಂತೀ ಪಂಚೇಂದ್ರಿಯಮುಖದಲ್ಲಿ ಪಂಚವದನನ ಮುಖವಾಗಿಪ್ಪ ಶಿವಶರಣರು ಲಕ್ಷಗಾವುದದಲ್ಲಿದ್ದರೂ ಇರಲಿ, ಅಲ್ಲಿಗೆನ್ನ ಮನಮಂ ಹರಿಯಬಿಟ್ಟು ನಮಸ್ಕರಿಸುವೆನು. ಕಂದ :ಲಕ್ಷಯೋಜನದೊಳಾಡೆ ಮುಕ್ಕಣ್ಣನ ಶರಣನೈದನೆನೆ ಕೇಳ್ದೊಲವಿಂ ದಿಕ್ಕನೆ ಮನಮಂ ಕಳುಹಿ ಪ ದಕ್ಕೆರಗುವೆ ನಾಂ ಪ್ರಸನ್ನಶಂಕರಲಿಂಗ. ಈ ಕಾರಣ ನಿಮ್ಮ ಶರಣರ ನೆನೆದು ನೋಡಿ ವಾರ್ತೆಯ ಕೇಳಿ ಮನಮುಟ್ಟಿ ದರುಶನವ ಮಾಡಲೆನ್ನ ಭವ ಹಿಂಗಿತ್ತು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆ ಐಕ್ಯನಲ್ಲಿಯ ಐಕ್ಯಂಗೆ ಆತ್ಮನಲ್ಲಿಯ ಪರಮಾತ್ಮನೆ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರ್ಭಾವವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಅತಿಮಹಾಲಿಂಗವೇ ಲಿಂಗ. ಆ ಅತಿಮಹಾಲಿಂಗಮುಖದಲ್ಲಿ ಪರಮಪರಿಣಾಮವನೇ ಸಮರ್ಪಿಸಿ ಆ ಪರಮಪ್ರಸಾದವನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಆ ಐಕ್ಯನಲ್ಲಿಯ ಭಕ್ತಂಗೆ ಆತ್ಮನಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಆಚಾರಲಿಂಗವೇ ಲಿಂಗ. ಆ ಆಚಾರಲಿಂಗದಮುಖದಲ್ಲಿ ಗಂಧದ ತೃಪ್ತಿಯನೆ ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪ್ರಸಾದಿಗೆ ಅಗ್ನಿಯೆ ಅಂಗ, ಆ ಅಂಗಕ್ಕೆ ನಿರಹಂಕಾರವೆ ಹಸ್ತ, ಆ ಹಸ್ತಕ್ಕೆ ಮೂರ್ತಿಸಾದಾಖ್ಯ, ಆ ಸಾದಾಖ್ಯಕ್ಕೆ ಇಚ್ಛಾಶಕ್ತಿ, ಆ ಶಕ್ತಿಗೆ ಶಿವನೆ ಲಿಂಗ, ಆ ಲಿಂಗಕ್ಕೆ ವಿದ್ಯೆಯೆ ಕಳೆ, ಆ ಕಳೆಗೆ ನೇತ್ರೇಂದ್ರಿಯವೆ ಮುಖ, ಆ ಮುಖಕ್ಕೆ ಸುರೂಪುದ್ರವ್ಯಂಗಳನು ರೂಪು ರುಚಿ ತೃಪ್ತಿಯನರಿದು, ಅವಧಾನಭಕ್ತಿಯಿಂದರ್ಪಿಸಿ ಆ ಸುರೂಪಪ್ರಸಾದವನು ಭೋಗಿಸಿ ಸುಖಿಸುತಿಹನು ಕೂಡಲಚೆನ್ನಸಂಗಾ ನಿಮ್ಮ ಪ್ರಸಾದಿ
--------------
ಚನ್ನಬಸವಣ್ಣ
ಇನ್ನು ಆ ಪ್ರಸಾದಿಯಲ್ಲಿಯ ಭಕ್ತಂಗೆ ಅಗ್ನಿಯಲ್ಲಿಯ ಪೃಥ್ವಿಯೆ ಅಂಗ. ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಚಿತ್ತವೆ ಹಸ್ತ. ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಆಚಾರಲಿಂಗವೆ ಲಿಂಗ. ಆ ಆಚಾರಲಿಂಗಮುಖದಲ್ಲಿ ಪೀತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಶರಣನಲ್ಲಿಯ ಭಕ್ತಂಗೆ ಆಕಾಶದಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಆಚಾರಲಿಂಗವೇ ಲಿಂಗ. ಆ ಆಚಾರಲಿಂಗದ ಮುಖದಲ್ಲಿ ತಾಳ ಕೌಂಸಾಳದಲ್ಲಿ ಹುಟ್ಟಿದ ಶಬ್ದದ್ರವ್ಯವ ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪ್ರಾಣಲಿಂಗಿಯಲ್ಲಿಯ ಮಾಹೇಶ್ವರಂಗೆ ವಾಯುವಿನಲ್ಲಿಯ ಅಪ್ಪುವೆ ಅಂಗ. ಆ ಅಂಗಕ್ಕೆ ಸುಮನದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಗುರುಲಿಂಗವೆ ಲಿಂಗ. ಆ ಗುರುಲಿಂಗದಮುಖದಲ್ಲಿ ಮೃದುವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪ್ರಸಾದಿಯಲ್ಲಿಯ ಮಾಹೇಶ್ವರಂಗೆ ಅಗ್ನಿಯಲ್ಲಿಯ ಅಪ್ಪುವೆ ಅಂಗ. ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಗುರುಲಿಂಗವೆ ಲಿಂಗ. ಆ ಗುರುಲಿಂಗಮುಖದಲ್ಲಿ ಶ್ವೇತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಶೆಯಾಮಿಷವೆಂಬ ಮಾಯಾಪಾಶಕೆನ್ನ ಗುರಿಮಾಡಿ ನೀ ಸಿಕ್ಕದೆ ನಿರ್ಮಾಯನಾಗಿ ಮಾಯಕದ ಬಲೆಯೊಳಿಟ್ಟೆನ್ನ. ಅದು ಎಂತೆಂದರೆ : ನೆನೆವ ಮನಕಾಸೆಯನೆ ತೋರಿದೆ, ನೋಡುವ ಕಂಗಳಿಗಾಸೆಯನೆ ನೋಡಿಸಿದೆ, ನುಡಿವ ಜಿಹ್ವೆಗೆ ಆಸೆಯನೆ ನುಡಿಸಿದೆ, ಕೇಳುವ ಕರ್ಣಕೆ ಆಸೆಯನೆ ಕೇಳಿಸಿದೆ, ವಾಸಿಸುವ ನಾಸಿಕಕೆ ಆಸೆಯನೆ ವಾಸಿಸಿದೆ, ಮುಟ್ಟುವ ಹಸ್ತಕ್ಕೆ ಆಸೆಯನೆ ಮುಟ್ಟಿಸಿದೆ. ಆಸೆಯನೆ ಕಳೆದು, ನಿರಾಸೆಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಭಕ್ತನಲ್ಲಿಯ ಪ್ರಾಣಲಿಂಗಿಗೆ ಪೃಥ್ವಿಯಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗಮುಖದಲ್ಲಿ ಮೊಗ್ಗೆ ಮೊದಲಾದ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಭಕ್ತನಲ್ಲಿಯ ಶರಣಂಗೆ ಪೃಥ್ವಿಯಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಸುಚಿತ್ತದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಆಚಾರಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಕಾಯಿ ಮೊದಲಾದ ಗಂಧದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->