ಅಥವಾ

ಒಟ್ಟು 5 ಕಡೆಗಳಲ್ಲಿ , 3 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆ ಎಂಬ ಪಂಚ ವಿಭೂತಿ ಉತ್ಪತ್ಯವೆಂತೆಂದಡೆ : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಮುಖದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಉತ್ಪತ್ಯವಾಯಿತ್ತು. ಆ ಪೃಥ್ವಿಯಪ್ಪುತೇಜವಾಯುವಾಕಾಶದಿಂದಲ್ಲಿ ನಿವೃತ್ತಿ ಪ್ರತಿಷ್ಠೆ ವಿದ್ಯಾ ಶಾಂತಿ ಶಾಂತ್ಯಾತೀತಯೆಂಬ ಪಂಚಕಲೆಗಳುತ್ಪತ್ಯವಾಯಿತ್ತು. ಆ ಪಂಚಕಲೆಗಳಿಂದ ನಂದೆ ಭದ್ರೆ ಸುರಬ್ಥಿ ಸುಶೀಲೆ ಸುಮನೆಯೆಂಬ ಪಂಚಗೋವುಗಳುತ್ಪತ್ಯವಾಯಿತ್ತು. ಆ ಪಂಚಗೋವುಗಳ ಗೋಮಯದಲ್ಲಿ ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆಯೆಂಬ ಪಂಚವಿಭೂತಿ ಉತ್ಪತ್ಯವಾಯಿತ್ತು. ಇದಕ್ಕೆ ಜಾಬಾಲೋಪನಿಷತ್ : ``ಸದ್ಯೋಜಾತಾತ್ ಪೃಥಿವೀ ತಸ್ಯಾ ನಿವೃತ್ತಿಃ ತಸ್ಯಾಃ ಕಪಿಲವರ್ಣಾ ನಂದಾ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಬ್ಥೀ ತಸ್ಯಾಃ ಗೋಮಯೇನ ಭಸ್ಮ ಜಾತಂ || ತತ್ಪುರುಷಾತ್ ವಾಯುಃ ತಸ್ಮಾತ್ ಶಾಂತಿ ಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ || ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಃ ಚಿತ್ರವರ್ಣಾ ಸುಮನಾಃ ತಸ್ಯಾಃ ಗೋಮಯೇನ ರಕ್ಷಾ ಜಾತಾ ||'' ``ಐಶ್ವರ್ಯಕಾರಣಾತ್ ಭೂತಿಃ, ಭಾಸನಾತ್ ಭಸಿತಂ, ಸರ್ವಾಘಭಕ್ಷಣಾತ್ ಭಸ್ಮಂ, ಅಪದಾಂ ಕ್ಷರಣಾತ್ ಕ್ಷಾರಂ, ಭೂತಪ್ರೇತಪಿಶಾಚಬ್ರಹ್ಮರಾಕ್ಷಸಾಪಸ್ಮಾರ ಭವಬ್ಥೀತಿಭ್ಯೋsಬ್ಥಿರಕ್ಷಣಾತ್ ರಕ್ಷೇತಿ ||'' ಇಂತೆಂದುದು ಶ್ರುತಿ. ಇದಕ್ಕೆ ಕ್ರಿಯಾಸಾರೇ : ``ವಿಭೂತಿರ್ಭಸಿತಂ ಭಸ್ಮ ಕ್ಷಾರಂ ರಕ್ಷೇತಿ ಭಸ್ಮನಃ | ಭವಂತಿ ಪಂಚ ನಾಮಾನಿ ಹೇತು ರಕ್ಷಣಾದ್ರಕ್ಷೇತಿ ||'' ಇಂತೆಂದುದು ಶ್ರುತಿ. ``ಪಂಚಬ್ಥಿಃಬೃಷಂ ಐಶ್ವರ್ಯಕಾರಣಾದ್ಭೂತಿ, ಭಸ್ಮ ಸರ್ವಾಘಭಕ್ಷಣಾತ್, ಭಾಸನಾತ್ ಭಸಿತಂ, ತತ್ವಾ ಕ್ಷರಣಾತ್‍ಕ್ಷಾರಮಾಪದಂ, ಭೂತಪ್ರೇತಪಿಶಾಚೇಭ್ಯೋ ಸ್ವರ್ಗಹೇತುಭ್ಯೋಬ್ಥಿರಕ್ಷಣಾತ್ ರಕ್ಷಾ ಸ್ಯಾತ್ ಕ್ರೂರಸರ್ಪೇಭ್ಯೋ ವ್ಯಾಘ್ರಾದಿಭ್ಯಶ್ಚ ಸರ್ವದಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ. ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ. ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಶದಭಿಷೇಕವ ಮಾಡಿಸಲು, ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ. ನೆರೆದ ಶಿವಗಣಂಗಳ ಮಧ್ಯದಲ್ಲಿ ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು, ಅಂಗದಲ್ಲಿ ಪ್ರತಿಷ್ಢಿಸಿ, ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ, ಕಾಯವೆ ಕೈಲಾಸವಾಯಿತ್ತು ; ಪ್ರಾಣವೆ ಪಂಚಬ್ರಹ್ಮಮಯಲಿಂಗವಾಯಿತ್ತು. ಇಂತು ಮುಂದ ತೋರಿ ಹಿಂದ ಬಿಡಿಸಿದ ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿರಂಜನಪ್ರಣವ ಉತ್ಪತ್ಯವಾಗದಂದು ಅವಾಚ್ಯಪ್ರಣವ ಕಲಾಪ್ರಣವವೆಲ್ಲಿದ್ದುದೊ ? ಅನಾದಿಪ್ರಣವ ಆದಿಪ್ರಣವ ಉತ್ಪತ್ಯವಾಗದಂದು ಅಕಾರಪ್ರಣವ ಉಕಾರಪ್ರಣವವೆಲ್ಲಿದ್ದುದೊ ? ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು-ಕಳೆ ಸಂಯುಕ್ತವಾಗಿ ಅಖಂಡಲಿಂಗ ಉತ್ಪತ್ಯವಾಗದಂದು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಲ್ಲಿದ್ದರೊ ? ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಬ್ರಹ್ಮವಿಲ್ಲದಂದು ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುಮೂರ್ತಿಗಳೆಲ್ಲಿದ್ದರೊ ? ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮರೆಂಬ ಶಿವನ ಅಷ್ಟತನುಮೂರ್ತಿಗಳು ನೆಲೆಗೊಳ್ಳದಂದು ಅಖಂಡ ಲೋಕಾದಿಲೋಕಂಗಳು ಸಚರಾಚರಗಳೆಲ್ಲಿದ್ದುದೋ ? ಅಪ್ರಮಾಣಕೂಡಲಸಂಗಮದೇವಾ, ನಿಮ್ಮ ನಿಲವ ಮಹಾನುಭಾವಸುಖಿ ಬಲ್ಲನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಡಿಗಡಿಗೆ ಸ್ಥೂಲಸೂಕ್ಷ್ಮವೆಂಬ ಶಬ್ದಪರಿಭಾವ ತಲೆದೋರದೆ, ಸಂಗ-ಮಹಾಸಂಗ-ಸಂಕಲ್ಪವಿರಹಿತನು. ಸದ್ಯೋಜಾತ ವಾಮದೇವ ತತ್ಪುರುಷ ಅಘೋರ ಈಶಾನವೆಂಬ ಪಂಚವಕ್ತ್ರವನು ಊಧ್ರ್ವಮುಖಕ್ಕೆ ತಂದು ಅರ್ಪಿಸಬಲ್ಲನಾಗಿ ಗುರುಪ್ರಸಾದಿ. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯ ಆತ್ಮ ಇಂತೀ ಅಷ್ಟಮೂರ್ತಿಮದವನು ದಾಸೋಹದಲ್ಲಿ ಅರ್ಪಿಸಬಲ್ಲನಾಗಿ ಜಂಗಮಪ್ರಸಾದಿ. ಹೊರಗೆ ಭಜಿಸಲಿಲ್ಲ, ಒಳಗೆ ನೆನೆಯಲಿಲ್ಲ. ಸರ್ವಾಂಗಲಿಂಗಿಯಾಗಿ ಲಿಂಗಪ್ರಸಾದಿ. ಇದು ಕಾರಣ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣ ಮಹಾಪ್ರಸಾದಿ.
--------------
ಚನ್ನಬಸವಣ್ಣ
ಅಂಥ ಬ್ರಹ್ಮಾಂಡವ ಅರವತ್ತುಮೂರುಸಾವಿರದ ಆರುನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಈಶಾನವೆಂಬ ಭುವನ. ಆ ಭುವನದೊಳು ದೈತ್ಯಸಂಹಾರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಹದಿನೈದುಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳು ಇಹರು ನೋಡಾ. ಮುನ್ನೂರಾ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->