ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರೀ ಆಚರಣೆ ಶುದ್ಧವಾದಲ್ಲಿ ಇಷ್ಟಲಿಂಗಪೂಜೆ. ರೂಪು ರುಚಿ ಏಕವಾದಲ್ಲಿ ಪ್ರಾಣಲಿಂಗಪೂಜೆ. ರೂಪು ನಿರೂಪೆಂಬ ಉಭಯವಳಿದಲ್ಲಿ ಐಕ್ಯನ ಅನುಭವ ತೃಪ್ತಿ. ಕೂಡುನ್ನಬರ ನೋಟ ಸುಖಿಯಾಗಿ, ಬೇಟದ ನೋಟ ಕೂಟದಲ್ಲಿ ಅಳಿದ ಮತ್ತೆ, ಉಭಯದೃಷ್ಟ ಏಕವಾಯಿತ್ತು. ಚರ ಅಚರವಾದಲ್ಲಿ ಉಭಯನಾಮರೂಪು ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕರ್ಪುರದ ಕಳ್ಳನ ಹುಲ್ಲಿನಲ್ಲಿ ಕಟ್ಟಿಸಲು, ಅಗ್ನಿಯೆಂಬ ಹಿತವ ಬಂದು ಬಿಡಿಸಲಾಗಿ, ಪಾಶ ಬೆಂದು ಕಳ್ಳ ತನ್ನಲ್ಲಯೆ ಅಡಗಿದಂತೆ, ಶರಣಂಗೆ ಬಯಲಪಾಶ ಬಂದು ಕಟ್ಟಿರಲು, ಬಯಲಲಿಂಗ ಬಂದು ಬಿಡಿಸಲು, ಬಯಲು ಬಯಲು ಏಕವಾಯಿತ್ತು. ಮಹಾಲಿಂಗ ಕಲ್ಲೇಶ್ವರನೆಂಬ ಸಂಪತ್ತು ಸದಾಶೂನ್ಯವಾಯಿತ್ತು.
--------------
ಹಾವಿನಹಾಳ ಕಲ್ಲಯ್ಯ
ಹಗಲಿರುಳ ನುಂಗಿದರೆ ಉದಯಾಸ್ತಮಾನ ನಿಂದಿತ್ತು. ಸಾಕಾರವ ನಿರಾಕಾರ ನುಂಗಿ ಏಕವಾಯಿತ್ತು. ಲೋಕಲೌಕಿಕವೆಂಬುದಿಲ್ಲದೆ ಏಕವಾಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆನ್ನಲಿಲ್ಲದೆ ಏಕವಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಅಂಗದ ಲಯ ಲಿಂಗದೊಳಗೆ, ಲಿಂಗದ ಲಯ ಅಂಗದೊಳಗೆ. ಇವೆರಡರ ಸಂಗಸುಖ ಜಂಗಮದೊಳಗೆ ಏಕವಾಯಿತ್ತು . ಅಂದೆ ಪ್ರಸಾದದಿಂದ ರೂಪಾಯಿತ್ತು. ಮುಂದೆ ಪ್ರಸಾದದಲ್ಲಿ ಪರಿಪೂರ್ಣವಾಯಿತ್ತು. ಇದರಂದವ ಬಲ್ಲ ಶರಣರೆ ಎನ್ನ ತಂದೆಗಳಾಗಿಪ್ಪರು ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಷಡುಸ್ಥಲದಲ್ಲಿ ಕಂಡೆಹೆನೆಂದಡೆ ಕ್ರೀಶುದ್ಧೆತೆಯಿಲ್ಲ. ತ್ರಿವಿಧ ಸ್ಥಲದಲ್ಲಿ ಕಂಡೆಹೆನೆಂದಡೆ ಭಾವಶುದ್ಧವಿಲ್ಲ. ಇದು ಮೀರಿ ಬೇರೊಂದನರಿದೆಹೆನೆಂದಡೆ ಆರರಿವಿಂಗೆ ಕುರುಹಿಲ್ಲ. ಈ ತೆರನನರಿದಡೆ ಅರಿವು ಕುರುಹು ಏಕವಾಯಿತ್ತು ಕಾಲಾಂತಕ ಭೀಮೇಶ್ವರಲಿಂಗವನರಿಯಲಾಗಿ.
--------------
ಡಕ್ಕೆಯ ಬೊಮ್ಮಣ್ಣ
-->