ಅಥವಾ

ಒಟ್ಟು 4 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆನ್ನ ಪುಟ್ಟಿಸಿದೆಯಯ್ಯಾ ಹೆಣ್ಣು ಜನ್ಮದಲ್ಲಿ ಪುಣ್ಯವಿಲ್ಲದ ಪಾಪಿಯ ? ನಾನು ಇಹಪರಕ್ಕೆ ದೂರಳಯ್ಯಾ. ಎನ್ನ ನಾಮ ಹೆಣ್ಣು ನಾಮವಲ್ಲಯ್ಯಾ. ನಾನು ಸಿರಿಯಿದ್ದ ವಸ್ತುವಿನ ವಧುವಾದ ಕಾರಣ, ಸಂಗಯ್ಯನಲ್ಲಿ ಬಸವನ ವಧುವಾದ ಕಾರಣ ಎನಗೆ ಹೆಣ್ಣುನಾಮವಿಲ್ಲವಯ್ಯಾ.
--------------
ನೀಲಮ್ಮ
ಏಕೆನ್ನ ಸಿರಿಗಳು ಕೆರೆಗಳು ಮರಗಳು ಫಲಗಳು ಬೀಯದ ಮುನ್ನ ಒಯ್ಯನೆ ಮಾಡಿ ಭೋ, ಹಾಲುಳ್ಳಲ್ಲಿ ಹಬ್ಬವನು. ಎನ್ನ ಭಕ್ತಿ-ಮುಕ್ತಿ ಸವೆಯದ ಮುನ್ನ ಲಿಂಗವೆ ಜಂಗಮವೆಂದು ಮಾಡಿ ಭೋ. ಸ್ವಾತಂತ್ರಯ್ಯ ತನ್ನನೀವ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ ? ಏಕೆನ್ನ ಘೋರ ಸಂಸಾರದಲ್ಲಿರಿಸಿದೆ ? ಏಕೆನಗೆ ಕರುಣಿಸಲೊಲ್ಲದೆ ಕಾಡಿಹೆ ? ಏಕೆ ಹೇಳಾ ಎನ್ನ ಲಿಂಗವೆ ? ಆನುಮಾಡಿದ ತಪ್ಪೇನು ? ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ ಏಕೆ ನಾ ನಿಮ್ಮ ಬಿಡುವೆ ಶಂಭುಜಕ್ಕೇಶ್ವರಾ ?
--------------
ಸತ್ಯಕ್ಕ
-->