ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೋತ್ತರದಲ್ಲಿ ಎಚ್ಚತ್ತಡೇನಯ್ಯಾ, ಏಕೋದೇವನ ನೆನಹು ನೆಲೆಗೊಳ್ಳದನ್ನಕ್ಕ? ಅನುಭಾವದಲ್ಲಿ ಅಭ್ಯಾಸಿಯಾದಡೇನಯ್ಯಾ, ಸ್ವಯಾನುಭಾವ ಸನ್ನಹಿತವಾಗದನ್ನಕ್ಕ? ತತ್ವಾರ್ಥಿಯಾದಡೇನಯ್ಯಾ, ಮಿಥ್ಯಾರ್ಥವ ದಾಂಟದನ್ನಕ್ಕ? ಅರಿವನರಿತಡೇನಯ್ಯಾ, ಚಿದಹಂ ಎಂಬ ಮರವೆ ಸೋಂಕುವ ತೆರನ ತಿಳಿಯದನ್ನಕ್ಕ? ಸೌರಾಷ್ಟ್ರ ಸೋಮೇಶ್ವರಾ ಎಂದಡೇನಯ್ಯಾ ನಿಂದ ಭೇದವ ಭೇದಿಸದನ್ನಕ್ಕ?
--------------
ಆದಯ್ಯ
ಹಿರಿಯತನಕ್ಕೆ ಹೆಣ್ಣೆಂದು ಕರೆದರೆ ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ. ಅರಿವನರಿದು ಅಪ್ರತಿಮ ಘನವ ಕಂಡುಳಿದು ಹೆಣ್ಣುತನದ ಮಾತನಳಿದು ಏಕೋದೇವನ ಕೃಪೆಯನು ಕಂಡು ಬದುಕಿದೆನಯ್ಯ ಸಂಗಯ್ಯ.
--------------
ನೀಲಮ್ಮ
ಆ ಕರವು ಅಪ್ರಮಾಣವು ಸದಾಕಾಲದಲ್ಲಿ ಏಕೋದೇವನ ಹಿಡಿದು ನಿತ್ಯವಾಗಿರ್ಪುದು. ಆ ಹಸ್ತ ಅವ್ಯಕ್ತ ಹಸ್ತ ಶಿವಪಾಶ. ಆ ಹಸ್ತ ಸಕಲ ದೈವಾದಿ ಶ್ರೇಷ* ಅನೇಕ ರೂಪನ ಏಕೋರೂಪಾಗಿ ಹಿಡಿದುದೈ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
-->