ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬ್ರಹ್ಮವೆಂಬುದನರಿದ ಬಳಿಕ ಅಷ್ಟಾದಶ ವಿದ್ಯವ ನೋಡುವ ಕೇಳುವ ಆಯಸವಿನ್ನದೇತಕಯ್ಯಾ ? ಶ್ರೀಗುರುವನರಿದ ಬಳಿಕ ಮೇಲೆ ಬಯಸುವಾಯಸವದೇತಕಯ್ಯಾ ? ಮನವೇ ಮಹಾವಸ್ತುವನರಿದ ಬಳಿಕ ಅಜ್ಞಾನಪ್ರಂಪಚು ಏತಕಯ್ಯಾ ? ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಪರಮೂತ್ರದ ಕುಳಿಯನಗುಳುವಂಗೆ ಚಿಲುಮೆಯಗ್ಗಣಿಯೆಂಬ ಕಟ್ಟಳೆ ಏತಕಯ್ಯಾ ? ಪರನಾರಿಯರ ಅಧರಪಾನವ ಕೊಂಬವಂಗೆ ಸ್ವಯಪಾಕದ ಕಟ್ಟಳೆ ಏತಕಯ್ಯಾ ? ದುಷ್ಟಸ್ತ್ರೀಯರನಾಳಿಪ್ಪಂಗೆ ಗುರುವಿನ ಪ್ರಸಾದವಿಲ್ಲ, ಬೆಕ್ಕ ಸಲಹಿಪ್ಪಂಗೆ ಲಿಂಗದ ಪ್ರಸಾದವಿಲ್ಲ,_ ಇಂತೀ ತ್ರಿವಿಧವ ಸಲಹಿದ ದ್ರೋಹಿಗೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
-->