ಅಥವಾ

ಒಟ್ಟು 2 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯೋಮದಲ್ಲಿ ತೋರುವ ತೋರಿಕೆ, ಸಾಮವ ಮುಟ್ಟಿ ಬೆರಸಬಲ್ಲುದೆ ? ಸಾಗರ ಸಂಬಂಧಕ್ಕೆ ಕಟ್ಟು ಒಡೆವುದೆ ? ಮಹದಲ್ಲಿ ಬೆರಸಿದ ಮಹಾಯೋಗಿ, ಸಂಸಾರಸಾಗರದ ಸಂಬಂಧಕ್ಕೆ ಒಳಗಪ್ಪನೆ ? ಇಂತೀ ಸೂತಕವಳಿದ ಅಜಾತಂಗೆ ಏತರಲ್ಲಿ ನಿಂದು ನೋಡಿದಡೂ ನಿರ್ಜಾತ ಶೂನ್ಯ ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಕನ್ನವನಿಕ್ಕಿದ ಕಳ್ಳನಿದ್ದಂತೆ ಮಣ್ಣ ಬಂಧಿಸಬಹುದೆ? ಎನ್ನ ಅಂಗ ಪ್ರಾಣಕ್ಕೆ ಲಿಂಗವಲ್ಲದೆ ಕರಣಂಗಳಿಗೆ ಬೇರೊಂದಂಗವುಂಟೆ? ಇದಕ್ಕೆ ಅಂಜುವಡೆ, ``ಗುರೋಃ ಪಾಪಂ ಶಿಷ್ಯಸ್ಯಾಪಿ ಶಿಷ್ಯಪಾಪಂ ಗುರೋರಪಿ' ಎಂಬುದ ಹುಸಿಯಾದಡೆ ಹೇಳಿಸಿಕೊಂಬುವ ಗುರು ಹೇಳುವಾತ ಶಿಷ್ಯನೆ? ಆತ ಹೇಳೂದಕ್ಕೆ ಮುನ್ನ ತಾನರಿಯಬೇಕು. ಈ ಉಭಯಕ್ಕೆ ಭಿನ್ನ ಭಾವವಿಲ್ಲ. ಜೂಳಿಯ ಕುಂಭದಂತೆ ಏತರಲ್ಲಿ ಒದಗಿದಡೂ ಸರಿ. ಸಗುಣನೀತಿಗೆ ಮುಕ್ತಿ ಉಭಯಸ್ಥಲ ಯುಕ್ತಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
-->